Friday, September 20, 2024

Kisan credit card-ಕಿಸಾನ್‌ ಕ್ರೆಡಿಟ್‌ ಕಾರ್ಡ್ ನಿಂದ  ಕೃಷಿ ಮಾಡಲು ಮತ್ತು ಹೈನುಗಾರಿಕೆ ಚಟುವಟಿಕೆ ಮಾಡಲು ಸಾಲ ಪಡೆಯಬಹುದು.

ಕೇಂದ್ರ ಸರಕಾರದ ಕಿಸಾನ್‌ ಕ್ರೆಡಿಟ್‌ ಕಾರ್ಡ (Kisan credit card) ಯೋಜನೆಯಡಿ ಕೃಷಿ ಮಾಡಲು ಮತ್ತು ಹೈನುಗಾರಿಕೆ ಚಟುವಟಿಕೆ ಮಾಡಲು ಸಾಲ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದ್ದು ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತುಂಬಾ ಅನುಕೂಲಕರವಾಗಿದೆ. ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಕೃಷಿ ಮಾಡಲು ಸರಿಯಾಗಿ ಸಾಲ ಸೌಲಭ್ಯಗಳು ಸಿಗದೆ ರೈತರು ಕೃಷಿಯನ್ನು ಕೈಬಿಟ್ಟು ಕೂಲಿ ಹುಡಕಿ ನಗರ ಪ್ರದೇಶಗಳಿಗೆ ವಲಸೆ ಹೊಗುತ್ತಾರೆ.

ಈ ತರಹದ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ, ಅದರಲ್ಲಿ ಒಂದಾದ (Kisan credit card) ಕಿಸಾನ್‌ ಕ್ರೆಡಿಟ್‌ ಕಾರ್ಡ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಸಹಕಾರಿ ಕೃಷಿ ಬ್ಯಾಂಕ್‌ ಗಳಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಕಿಸಾನ್‌ ಕ್ರೆಡಿಟ್‌ ಕಾರ್ಡ (Kisan credit card) ಸಾಲವು ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ( ಹಸು, ಎಮ್ಮೆ, ಕುರಿ, ಆಡು/ಮೇಕೆ, ಹಂದಿ, ಕೋಳಿ ಸಾಕಾನಿಕೆಗೆ) ನಿರ್ವಹಣಾ ವೆಚ್ಚ ಭರಿಸಲು ಲೀಡ್‌ ಬ್ಯಾಂಕ್‌ ಸಹಯೋಗದೊಂದಿಗೆ ರಾಷ್ಟ್ರೀಕೃತ/ಸಹಕಾರ  ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ  ಸಾಲ ಸೌಲಭ್ಯವನ್ನು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಇದನ್ನೂಓದಿ: ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು ನಿಮಗೆ ಗೊತ್ತೆ!

     ಕೃಷಿ ಸಾಲಗಳು:

1)ಅಲ್ಪಾವಧಿ ಕೃಷಿ ಸಾಲ ೦% ಬಡ್ಡಿ (ಒಂದು ವರ್ಷದ ಮಟ್ಟಿಗೆ)

2)ಮಧ್ಯಮವಾಧಿ ಕೃಷಿ ಸಾಲ (ಮೂರು ವರ್ಷದ ಮಟ್ಟಿಗೆ)

3)ದೀರ್ಘಾವಧಿ ಕೃಷಿ ಸಾಲ (ಐದು ವರ್ಷದ ಮೇಲ್ಪಟ್ಟು)

 ಪಶುಸಂಗೋಪನೆ ಚಟುವಟಿಕೆಗೆ ಸಿಗುವ ಸೌಲಭ್ಯಗಳು:

1)ಹೈನುಗಾರಿಕೆ:ಮಿಶ್ರ ತಳಿ 2ಹಸು ಗಳ ಸಾಕಾಣಿಕೆಗೆ ಪ್ರತಿ ಹಸುವಿಗೆ ರೂ.18000/ ಗಳಂತೆ 2 ಹಸುಗಳಿಗೆ ರೂ.36000/-

2)ಕುರಿ/ಮೇಕೆ:10+1 ಘಟಕಕ್ಕೆ ರೂ.29950, 20+1 ಘಟಕಕ್ಕೆ ರೂ.57200/-

3)ಹಂದಿ ಸಾಕಾಣಿಕೆ: 10 ಹಂದಿಗಳ ಘಟಕಕ್ಕೆ ರೂ.60000/-

4) ಕೋಳಿ ಸಾಕಾಣಿಕೆ: ಮಾಂಸದ ಕೋಳಿ ಸಾಕಾಣಿಕೆ ಪ್ರತಿ ಕೋಳಿಗೆ ರೂ.100 ರಂತೆ ಗರಿಷ್ಠ ರೂ.100000/- ದವರೆಗೆ ಸಾಲ ಸೌಲಭ್ಯ

5)ಮೊಟ್ಟೆ ಕೋಳಿ ಸಾಕಾಣಿಕೆ ಪ್ರತಿ  ಕೋಳಿಗೆ ರೂ.200 ರಂತೆ ಗರಿಷ್ಠ 200000/- ದವರೆಗೆ ಸಾಲ ಸೌಲಭ್ಯ

ಇದನ್ನೂ ಓದಿ:ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ ಸಾಕು!

ಅವಶ್ಯಕ ದಾಖಲೆಗಳು:

1)ಆಧಾರ್‌ ಕಾರ್ಡ ಜೆರಾಕ್ಸ್‌

2)RTC/ಪಹಣಿ ಪ್ರತಿ

3)ಫೋಟೋ-2

4)ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌

5)ರೇಷನ್‌ ಕಾರ್ಡ ಜೆರಾಕ್ಸ್‌

6)ಸಾಲ ನೀಡುವ ಬ್ಯಾಂಕ್‌ ನಿಂದ ಕೇಳುವ ಇತರೆ ದಾಖಲೆಗಳು

ವಿಶೇಷ ಸೂಚನೆ: ಮೇಲೆ ತಿಳಿಸಲಾದ ಯೋಜನೆಗಳು ವರ್ಷ ಪೂರ್ತಿ ಚಾಲನೆಯಲ್ಲಿ ಇರುವುದಿಲ್ಲ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಹತ್ತಿರದ ಬ್ಯಾಂಕ್‌ ಮತ್ತು ಸೊಸೈಟಿಗಳಿಗೆ ನೇರ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಈಗಾಗಲೇ ಕೃಷಿ ಸಾಲ ಪಡೆದ ರೈತರ ಕಿಸಾನ್‌ ಕ್ರೆಡಿಟ್‌ ಕಾರ್ಡ ಆಗಿರುತ್ತದೆ. 

ಇತ್ತೀಚಿನ ಸುದ್ದಿಗಳು

Related Articles