Friday, January 24, 2025

ಕೀಟನಾಶಕಗಳ ಸ್ವರೂಪ ಮತ್ತು ಪ್ರಮಾಣಗಳ ಆಯ್ಕೆ

ಕೀಟನಾಶಕಗಳು ಇಂದು ಹಲವಾರು ಸ್ವರೂಪಗಳಲ್ಲಿ ಲಭ್ಯವಿರುತ್ತವೆ.  ಉದಾ.: ದ್ರಾವಣ ರೂಪ, ಹರಳು ರೂಪ, ಧೂಳು ಅಥವಾ ಪುಡಿ ರೂಪ. ಅಗತ್ಯ ಮತ್ತು ಆಗಬಹುದಾದ ಅಪಾಯಗಳನ್ನು ಗಮನದಲ್ಲಿರಿಸಿಕೊಂಡು ಬೇಕಾದ ರೂಪಗಳ ಕೀಟನಾಶಕಗಳನ್ನು ಶಿಸ್ತುಬದ್ಧವಾಗಿ ಆಯ್ಕೆಮಾಡಿಕೊಳ್ಳಬೇಕು.

ಒಮ್ಮೆ  ಶೀಷೆಯನ್ನು ತೆರೆದ ಮೇಲೆ ಅದರಲ್ಲಿರುವ ಕೀಟನಾಶಕವನ್ನು ಸಂಪೂರ್ಣವಾಗಿ ಬಳಕೆ ಮಾಡುವುದು ಒಳಿತು. ಸ್ವಲ್ಪ ಭಾಗವನ್ನು ಬಳಸಿ ಉಳಿದ ಭಾಗವನ್ನು ಮುಂದಿನ ಸಿಂಪರಣೆಗೆ ಶೇಖರಿಸಿಡುವುದು ಹೆಚ್ಚು ಅಪಾಯಕಾರಿ.

ಕೀಟನಾಶಕಗಳ ಮಿಶ್ರಣ ಮಾಡುವ ರೀತಿ-ನೀತಿ : 

  • ತೆರೆದ ಪ್ರದೇಶ  ಅಥವಾ ಹೊಲಗಳಲ್ಲಿ ಕೀಟನಾಶಕಗಳ ಶೀಷೆಗಳ ಮುಚ್ಚಳವನ್ನು ತೆರೆಯಬೇಕೆ ವಿನಹ ಯಾವುದೇ ಕೊಠಡಿಯೊಳಗೆ ಮುಚ್ಚಳ ತೆಗೆಯುವ ಕೆಲಸ ಮಾಡಬಾರದು.
  • ಹೀಗೆ ತೆರೆದ ನಂತರ ಮಿಶ್ರಣ ಕಾರ್ಯಗಳನ್ನು ಕೂಡ ತೆರೆದ ಪ್ರದೇಶದಲ್ಲಿ ಮಾಡುವುದರಿಂದ ಕೀಟನಾಶಕಗಳ ಬಳಕೆದಾರನ ಮೂಗು- ಬಾಯಿಗೆ ಸೇರುವ ಸಾಧ್ಯತೆ ಕಡಿಮೆಯಾಗುತ್ತದೆ.
  • ಯಾವುದೇ ಸಂದರ್ಭದಲ್ಲಿ ಕೂಡ ಹಲ್ಲಿನಲ್ಲಿ ಕಚ್ಚಿ ಮುಚ್ಚಳವನ್ನು ತೆಗೆಯುವ ಪ್ರಯತ್ನ ಮಾಡಬಾರದು ಮತ್ತು ಕೀಟನಾಶಕ ಹಾಗೂ ನೀರಿನ ಸಮರ್ಪಕ ಮಿಶ್ರಣ ಮಾಡಲು ಮರದ ಕೋಲನ್ನು ಬಳಸಬೇಕೆ ವಿನಹ ಕೈಯಿಂದ ಮಿಶ್ರಣ ಮಾಡಬಾರದು.
  • ಶಿಫಾರಿತ ಕೀಟನಾಶಕವನ್ನು ಶಿಫಾರಿತ ಪ್ರಮಾಣದಲ್ಲಿ ಬಳಸಬೇಕು ಮತ್ತು ಶೀಷೆಯ  ಮೇಲೆ ನಮೂದಿಸಿರುವ ತಯಾರಿಕೆ ದಿನಾಂಕ( Manufacturing date) ಹಾಗೂ ಅದರ ನಿರ್ದಿಷ್ಟ ಬಳಕೆಯ ದಿನಾಂಕ (Expiry date) ವನ್ನು ಬಳಕೆದಾರರು ಶೀಷೆಯ ಮೇಲೆ ನೋಡಿ ತಿಳಿದುಕೊಂಡು ಉಪಯೋಗಿಸಬೇಕು.

ಇತ್ತೀಚಿನ ಸುದ್ದಿಗಳು

Related Articles