ತಲೆನೋವು, ತಲೆಸುತ್ತು, ವಾಂತಿ ಮತ್ತು ವಾಕರಿಕೆ, ನಡುಕ, ಭೇದಿ, ಬೆವರುವಿಕೆ, ದೃಷ್ಟಿ ಮಾಂದ್ಯತೆ, ಜೊಲ್ಲು ಸುರಿತ, ಕುಗ್ಗಿದ ಕಣ್ಣು ರೆಪ್ಪೆ, ಒದ್ದಾಟ, ಭಯಭೀತಿ, ಆತಂಕ ಅಲರ್ಜಿ, ಕಣ್ಣು ಉರಿ, ಚರ್ಮ ಕೆರೆತ, ಹೊಟ್ಟೆ ನೋವು, ನರದೌರ್ಬಲ್ಯ, ಮಾತಿನಲ್ಲಿ ಬಿಕ್ಕಳಿಕೆ.
* ಪ್ರಥಮ ಚಿಕಿತ್ಸಾ ವಿಧಾನಗಳು:
ಆಕಸ್ಮಿಕವಾಗಿ ಕೀಟನಾಶಕ ಬಳಕೆದಾರನ ದೇಹದೊಳಗೆ ಸೇರಿದಲ್ಲಿ ವಿಷಪೂರಿತ ವ್ಯಕ್ತಿಯನ್ನು ವೈದ್ಯರ ಬಳಿಗೆ ಕೊಂಡೊಯ್ಯುವ ಮೊದಲು ತುರ್ತಾಗಿ ಪಾಲಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನಗಳು.
ವಿಷ ಹೊಟ್ಟೆಯೊಳಗೆ ಸೇರಿದಲ್ಲಿ ರೋಗಿಯನ್ನು ವಾಂತಿ ಮಾಡಿಸಬೇಕು.ಒಂದು ಲೋಟದಲ್ಲಿ ಬಿಸಿ ನೀರಿಗೆ ಒಂದು ಚಮಚ ಉಪ್ಪು ಸೇರಿಸಿ ರೋಗಿಗೆ ಕುಡಿಸಿ ವಾಂತಿ ಮಾಡಿಸಬೇಕು. ಈ ಪ್ರಕ್ರಿಯೆಯನ್ನು ಆಗಾಗ ಮಾಡುತ್ತಲೇ ಇದ್ದು ಆರೋಗ್ಯ ಸ್ವಚ್ಛ ಬಣ್ಣದ( ಬಣ್ಣರಹಿತ) ವಾಂತಿ ದ್ರವವನ್ನು ವಾಂತಿ ಮಾಡುವ ತನಕ ಮುಂದುವರಿಸಬೇಕು.
ರೋಗಿ ಆಗಲೇ ವಾಂತಿ ಮಾಡುತ್ತಿದ್ದಲ್ಲಿ, ಒದ್ದಾಡುತ್ತಿದ್ದಲ್ಲಿ ಅಥವಾ ಮೂರ್ಛೆ ಹೋಗಿದ್ದಲ್ಲಿ ವಾಂತಿ ಮಾಡಿಸುವ ಪ್ರಯತ್ನ ಮಾಡಬಾರದು.
ಉಸಿರಾಟದ ಮುಖಾಂತರ( ಮೂಗಿನ ಮುಖಾಂತರ ) ವಿಷ ದೇಹದೊಳಗೆ ಸೇರಿದ್ದಲ್ಲಿ ರೋಗಿಯನ್ನು ಶುದ್ದ ಗಾಳಿಯಾಡುವ ಪ್ರದೇಶಕ್ಕೆ ಕೊಂಡೊಯ್ದು, ಮೇಲ್ಮುಖವಾಗಿ ಮಲಗಿಸಿ ಅಂಗಿಗಳನ್ನು ಸಡಿಲಿಸಿ, ನಿರಂತರವಾದ ಉಸಿರಾಟಕ್ಕೆ ಅವಕಾಶ ಮಾಡಿಕೊಡಬೇಕು, ಉಸಿರಾಟಕ್ಕೆ ವ್ಯವಸ್ಥೆ ಮಾಡಬೇಕು. ರೋಗಿಯು ಚಳಿಯಿಂದ ನಡುಗುತ್ತಿದ್ದ ಕಂಬಳಿ ಹೊಡಿಸಬೇಕು.
ವಿಷ ದೇಹದ ಮೇಲ್ಭಾಗ ಗಳಿಗೆ ಸೋಕಿದ್ದಲ್ಲಿ ಸಾಬೂನು ಬಳಸಿ ಚೆನ್ನಾಗಿ ನೀರಿನಿಂದ ತೊಳೆಯಬೇಕು ಮತ್ತು ಆಕಸ್ಮಿಕವಾಗಿ ವಿಷ ಕಣ್ಣಿನೊಳಗೆ ಸೇರಿದಲ್ಲಿ ಕಣ್ಣಿನ ಮೇಲೆ ನೀರು ಹಾಯಿಸಿ ವಿಷ ಹೊರ ಹೋಗುವಂತೆ ತೊಳೆಯಬೇಕು. ನಂತರ 10 ನಿಮಿಷಗಳ ಕಾಲ ಕಣ್ಣನ್ನು ತೆರೆದಿಡಬೇಕು.