Thursday, January 23, 2025

ಜಾನುವಾರಗಳಿಗೆ ಚರ್ಮಗಂಟು ರೋಗ ಹರಡುವುಕೆ, ರೋಗದ ಲಕ್ಷಣ ಹಾಗೂ ತಡೆಗಟ್ಟುವ ಕ್ರಮಗಳು

ಚರ್ಮಗಂಟು ರೋಗವು ಕ್ಯಾಪ್ರಿ ಫಾಕ್ಸ ವೈರಾಣವಿನಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ದನ, ಎಮ್ಮೆಗಳಲ್ಲಿ ಕಾಣಿಸಿಕೊಳ್ಳತ್ತದೆ. ದೇಶದ ವಿವಿಧ ರಾಜ್ಯಗಳಾದ ಗೋವಾ, ಗುಜರಾತ್, ಹರಿಯಾಣ, ರಾಜ್ಯಸ್ಥಾನ, ಮಹಾರಾಷ್ಟ, ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ ಮತ್ತು ಅಂಡಮಾನ ನಿಕೋಬಾರ್‍ ದ್ವೀಪ, ಜಮ್ಮು-ಕಾಶ್ಮೀರಗಳಲ್ಲಿ ಹಾಗೂ ರಾಜ್ಯದ ಕೆಲವಡೆ ಜಾನುವಾರಗಳಲ್ಲಿ ಚರ್ಮಗಂಟು ರೋಗೋದ್ರೇಕ ವರದಿಯಾಗಿದೆ.

ರೋಗ ಹರಡುವಿಕೆ:

ಈ ರೋಗವು ಪ್ರಮುಖವಾಗಿ ಬೇಸಿಗೆ ಮುಗಿಯುವ ಹಾಗೂ ಮುಂಗಾರು ಆರಂಭದ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸದರಿರೋಗವು ಸೊಳ್ಳೆಗಳಿಂದ, ಕಚ್ಚುವನೊಣಗಳಿಂದ ಹಾಗೂ ಉಣ್ಣೆಗಳಿಂದ ಹರಡುತ್ತದೆ.ಅಲ್ಲದೇ ಈ ರೋಗವು ಪ್ರಾಣಿಗಳ ನೇರ ಸಂಪರ್ಕದಿಂದಲೂ ಹಾಗೂ ಕೆಲವೊಮ್ಮೆ ಕಲುಷಿತ ನೀರು ಮತ್ತು ಮೇವಿನಿಂದಲೂ ಸಹ ಹರಡುವ ಸಾದ್ಯತೆ ಇರುತ್ತದೆ.

ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಲ್ಲೂ ಈ ವೈರಾಣಗಳು ಇರುತ್ತದೆ. ಆದರೆ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಸ್ಥಳೀಯ ದನಗಳಿಂತ ಹೆಚ್ಚಾಗಿ ಮಿಶ್ರತಳಿ ಹಸುಗಳು ಹಾಗೂ ಕರುಗಳು ಈ ರೋಗದಿಂದ ಬಳಲುವುದು ಕಂಡುಬಂದಿರುತ್ತದೆ.

ರೋಗ ಲಕ್ಷಣಗಳು:

ಚರ್ಮಗಂಟು ರೋಗ ತಗುಲಿದ ದನಗಳಲ್ಲಿ –ಅತಿಯಾದ ಜ್ವರ (103’ರಿಂದ105’f)ರಾಸುಗಳು ಮಂಕಾಗಿದ್ದು, ಮೂಗು ಕಣ್ಣುಗಳಲ್ಲಿ ಗೀಜುಸೋರುವಿಕೆ, ಮೇವನ್ನು ತಿನ್ನದೇ ಇರುವುದು, ಜೊಲ್ಲು ಸುರಿಸುವುದು ಹಾಗೂ ದುಗ್ಧ ಗ್ರಂಥಿಗಳಲ್ಲಿ ಊತಕಾಣಿಸಿಕೊಳ್ಳತ್ತದೆ. ಕಾಲುಗಳಲ್ಲಿ ಗಡ್ಡೆಗಳಾಗಿ, ಊದಿಕೊಂಡು ನಡೆದಾಡಲು ತೊಂದರೆಯಾಗುತ್ತದೆ. ಒಂದು ವಾರದ ನಂತರ ಚರ್ಮದ ಮೇಲೆ 3 ರಿಂದ 5 ಸೆಂ.ಮೀ ನಷ್ಟು ಅಗಲವಿರುವ ಗಂಟುಗಳು ಕಾಣಿಸಿಕೊಂಡು, ನಂತರ ಅವು ಒಡೆದು ಗಾಯಗಳಾಗಿ ನೋವು ಉಂಟಾಗುತ್ತದೆ.

ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನಂಜು ಉಲ್ಬಣಗೊಳ್ಳುತ್ತದೆ ಮತ್ತು ನೊಣಗಳು ಆ ಗಾಯದ ಮೇಲೆ ಕೂರುವುದರಿಂದ ಹುಳುಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಚರ್ಮ ಗಂಟು ಖಾಯಿಲೆಗೆ ಮನೆಮದ್ದು ಚಿಕಿತ್ಸಾ ವಿಧಾನ :

1)ಬಾಯಿಯಿಂದ ತಿನ್ನಿಸುವ ಔಷಧಿಗಳು :

ವೀಳ್ಯದ ಎಲೆ -100 ಗ್ರಾಂ, ಮೆಣಸು- 10ಗ್ರಾಂ, ಉಪ್ಪು- 10ಗ್ರಾಂ, ಬೆಲ್ಲ – ಅರ್ಧಅಚ್ಚು ಈ ಎಲ್ಲಾ ಪದಾರ್ಥಗಳನ್ನು ರುಬ್ಬಿ ಉಂಡೆ ರೂಪದಲ್ಲಿ ಮಾಡಿ 3 ರಿಂದ 4 ಉಂಡೆಗಳನ್ನು ಚರ್ಮಗಂಟು ರೋಗ ಕಾಣಿಸಿದ ಜಾನುವಾರಗಳಿಗೆ ದಿನಕ್ಕೆ 2 ಬಾರಿ ತಿನ್ನಿಸುವುದರಿಂದ ಖಾಯಿಲೆಯನ್ನು ತಡೆಗಟ್ಟಬಹುದು.

2)ಮೈಮೇಲೆ ಗಾಯ / ಗಂಟಿಗೆ ಹಚ್ಚುವ ಔಷಧಿ:

ಎಳ್ಳೆಣ್ಣೆ – 500 ಮಿಲಿ, ಅರಿಶಿಣ ಪುಡಿ – 20 ಗ್ರಾಂ, ಮೇಹಂದಿ (ಗೋರಂಟಿ ) ಸೊಪ್ಪು – 100 ಗ್ರಾಂ, ತುಳಸಿ ಎಲೆ – 100 ಗ್ರಾಂ, ಬೇವಿನ ಸೊಪ್ಪು – 100 ಗ್ರಾಂ ಈ ಎಲ್ಲಾ ಮಿಶ್ರಣವನ್ನು ಕುದಿಸಿ ಆರಿದ ನಂತರ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ 3 ರಿಂದ 4 ಬಾರಿ ಹಚ್ಚುವುದು.

ಇತ್ತೀಚಿನ ಸುದ್ದಿಗಳು

Related Articles