Saturday, October 5, 2024

ISRO Job Application: ಸ್ಪರ್ಧಾರ್ಥಿಗಳಿಗೆ ಬಾಹ್ಯಾಕಾಶದಲ್ಲಿ ಉದ್ಯೋಗ ಅವಕಾಶ:

ಪ್ರೀಯ ಸ್ಪರ್ಧಾರ್ಥಿಗಳೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದಲ್ಲಿ ನೂರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೇ ಆರಂಭವಾಗಿದ್ದು. ತಮ್ಮ ಅಭ್ಯಾಸ ಮುಂದುವರೆಸಿ, ತಾವು ಸರ್ಕಾರಿ ಹುದ್ದೆ ಪಡೆದು ಸ್ವಾವಲಂಬಿಯಾಗಿ, ಸಮಾಜದ ಸೇವೆ ಮಾಡುವಂತಾಗಲಿ,

ಭಾರತ ಮತ್ತು ಮನುಕುಲಕ್ಕೆ ಬಾಹ್ಯಾಕಾಶ ಪ್ರಯೋಜನಗಳನ್ನು ಮತ್ತು ಹೊಸ ಹೊಸ ಆವಿಷ್ಕಾರಗಳೊಂದಿಗೆ ಹೊಸ ಯೋಜನೆಗಳ ಬಗ್ಗೆ ಪ್ರಯೋಗ ಮಾಡಬಲ್ಲ ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ ಬಾಹ್ಯಾಕಾಶ ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಪ್ರಗತಿಗೆ ಪ್ರಾಥಮಿಕ ಒತ್ತು ನೀಡುತ್ತಿರುತ್ತದೆ.

ಬಾಹ್ಯಾಕಾಶ ನೌಕೆಯ ಪರಿಕಲ್ಪನೆ, ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪರೀಕ್ಷೆ, ಉಡಾವಣೆ ಮತ್ತು ಕಕ್ಷೆಯೊಳಗಿನ ನಿರ್ವಹಣೆ ಹಾಗೂ ಬಾಹ್ಯಾಕಾಶ ನೌಕೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಚಂದ್ರಯಾನ-1, ಆದಿತ್ಯ-ಎಲ್ 1 ಸೇರಿ ಹಲವಾರು ಮಿಷನ್‌ಗಳನ್ನು ಯಶಸ್ವಿಗೊಳಿಸಿದ್ದು, ಭವಿಷ್ಯದ ಇತರ ಗುರಿಗಳನ್ನು ಸಾಧಿಸಲು ಅವಶ್ಯವಿರುವ ನೇಮಕಾತಿಗೆ ಮುಂದಾಗಿದೆ.

ಇದನ್ನೂ ಓದಿ: RRB Recruitment 2024: ಸುಮಾರು 9000 ತಂತ್ರಜ್ಞರ ನೇಮಕಾತಿಗೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದ್ದು, 1969 ಆ.15ರಂದು ಸ್ಥಾಪನೆ ಮಾಡಲಾಯಿತು.

ಕರ್ನಾಟಕದಲ್ಲಿ ನೆಲೆಗೊಂಡಿರುವ ಯುಆರ್ ರಾವ್ ಉಪಗ್ರಹ ಕೇಂದ್ರ (URSC) ಹಾಗೂ ಇಸ್ರೋದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Details Of Posts: ಹುದ್ದೆಗಳ ವಿವರ ಈ ರೀತಿ ಇದೆ:
ಒಟ್ಟು ಹುದ್ದೆಗಳು-265 ಹುದ್ದೆಗಳು.

ಟೆಕ್ನಿಷಿಯನ್-ಬಿ ಹುದ್ದೆಗಳು. = 119 ಹುದ್ದೆಗಳು.

ಡ್ರಾಫ್ಟ್‌ಮನ್ ಬಿ ಹುದ್ದೆಗಳು. = 23 ಹುದ್ದೆಗಳು.

ಫೈರ್‌ಮನ್‌-ಎ ಹುದ್ದೆಗಳು. = 03 ಹುದ್ದೆಗಳು.

ಕುಕ್ ಹುದೆದೆಗಳು= 04 ಹುದ್ದೆಗಳು.

ಲಘು ವಾಹನ ಚಾಲಕ ಹುದ್ದೆಗಳು.= 06 ಹುದ್ದೆಗಳು.

ಭಾರಿ ವಾಹನ ಚಾಲಕ ಹುದ್ದೆಗಳು.= 02 ಹುದ್ದೆಗಳು.

ವಿಜ್ಞಾನಗಳು/ ಇಂಜಿನಿಯರಿಂಗ್ / ಹುದ್ದೆಗಳು= 05 ಹುದ್ದೆಗಳು.

ತಾಂತ್ರಿಕ ಸಹಾಯಕ ಹುದ್ದೆಗಳು= 55 ಹುದ್ದೆಗಳು.

ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳು.= 06 ಹುದ್ದೆಗಳು.

ಗ್ರಂಥಾಲಯ ಸಹಾಯಕ ಹುದ್ದೆಗಳು.= 01 ಹುದ್ದೆ.

ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?

Qulification ( Eligibility)ವಿದ್ಯಾರ್ಹತೆ ವಿವರ:

ಈ ಮೇಲೆ ಕಾಣಿಸಿರುವ ಹುದ್ದೆಗಳಿಗೆ ವಿದ್ಯಾರ್ಹತೆ ಮಾಹಿತಿ ಈ ರೀತಿ ಇದೆ ,ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ವಿದ್ಯಾಸಂಸ್ಥೆಯಿಂದ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಎಸ್‌ಎಸ್‌ಎಲ್‌ಸಿ,( SSLC)ಐಟಿಐ, (ITI)ಡಿಪ್ಲೊಮಾ,( Diplmo ) ಬಿ.ಎಸ್‌ಸಿ, BSc ಬಿಇ, BE ಬಿ.ಟೆಕ್,Btech , ಎಂಎಸ್, MS ,ಎಇ, ಎಂ.ಟೆಕ್ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

Age limit and Pay: ಹುದ್ದೆಗೆ ಸಂಭಂಧಿಸಿದಂತೆ ವಯೋಮಿತಿ, ವೇತನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2024 ಫೆ.16ಕ್ಕೆ ಅನ್ವಯವಾಗುವವಂತೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿರುತ್ತದೆ.

ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. ಅಂತಿಮವಾಗಿ ಆಯ್ಕೆಯಾಗುವ

ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನ 19,900 ರೂ ನಿಂದ 56,100 ರೂ, ವೇತನ ಆಗಿರುತ್ತದೆ.

application Procedure: ಅರ್ಜಿ ಸಲ್ಲಿಸುವ ವಿಧಾನ

ಇಸ್ರೋದ ಅಧಿಕೃತ isro.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಜತೆಗೆ ನೇಮಕಾತಿ ಪ್ರಕ್ರಿಯೆ ನಿಯಮಗಳನ್ನು ಖಾತರಿ ಪಡಿಸಿಕೊಂಡು . ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ತಮ್ಮ ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಬೇಕಾಗಿರುತ್ತದೆ..

ಇದನ್ನೂ ಓದಿ: Progressive Farmer: ಕ್ಯಾನ್ಸರ್‍ ಔಷಧಿ ಬೆಳೆಯಲು ಮುಂದಾದ ಯಶಸ್ವಿ ರೈತ

Application Fee: ಅರ್ಜಿ ಶುಲ್ಕ

ವಿಜ್ಞಾನ/ಇಂಜಿನಿಯರ್‍ , SC Assistant ಹುದ್ದೆಗಳಿಗೆ 250 ರೂ. ಅರ್ಜಿಶುಲ್ಕದ ಜತೆಗೆ 750 ರೂ. ಪ್ರೊಸೆಸಿಂಗ್ ಫಿ ನಿಗದಿಪಡಿಸಲಾಗಿದ್ದು.
ಟೈಕಿಷಿಯನ್-ಬಿ, ಡ್ರಾಟ್ಸ್‌ಮನ್-ಬಿ, ಕುಕ್, ಫೈರ್‌ಮನ್-ಎ ಹಾಗೂ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿಶುಲ್ಕದ ಜತೆಗೆ 500 ರೂ. ಪ್ರೊಸೆಸಿಂಗ್ ಫಿ ಪಾವತಿಸಬೇಕು.
ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪ್ರೊಸೆಸ್ಸಿಂಗ್ ಫಿಯನ್ನು ಮರುಪಾವತಿಸಲಾಗುತ್ತದೆ.

Selection Process: ಆಯ್ಕೆ ಪ್ರಕ್ರಿಯೆ


ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನೋಡುವುದಾದರೆ,
ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಧರಿಸಿದೆ.

Important Information: ಪ್ರಮುಖ ಮಾಹಿತಿ

ಸಂವಹನ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ದೂರವಣಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಹಾಗೂ ಕಾರ್ಯ ಅನುಭವವಿದ್ದರೆ ಅಂತಹ ದಾಖಲೆಗಳ ಜತೆಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗಿರುತ್ತದೆ.

ಇದನ್ನೂ ಓದಿ: Transport Department: ಎಲ್ಲಾ ರೀತಿಯ ವಾಹನ ಮಾಲಿಕರೇ ಈ ಸುದ್ದಿ ತಿಳಿಯಿರಿ:

Last Date : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಮುಂದಿನ ತಿಂಗಳ 01-03-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಭೇಟಿ ನೀಡಿ https://www.isro.gov.in/ICRB_Recruitment7.html

ಇತ್ತೀಚಿನ ಸುದ್ದಿಗಳು

Related Articles