ಪ್ರತಿ ವರ್ಷದಂತೆ ಈ ವರ್ಷದಲ್ಲಿ ಕೂಡಾ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ 2023-24 ನೇ ಸಾಲಿನ ಕೃಷಿ ಮೇಳವನ್ನು ಏರ್ಪಡಿಸಲಾಗಿರುತ್ತದೆ. ಈ ಕೃಷಿ ಮೇಳದಲ್ಲಿ ವಿಶೇಷವಾಗಿ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಮತ್ತು ಯಾವ ಶೀರ್ಷಿಕೆಯಡಿ ಕೃಷಿ ಮೇಳ ನಡೆಸಲಾಗುತ್ತದೆ. ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ಈ ವರ್ಷ ಮುಖ್ಯವಾಗಿ ” ಕೃಷಿ ಮೇಳವು ಸುಸ್ಥಿರ ಕೃಷಿಗೆ ಸಿರಿಧಾನ್ಯ” millects for sustainble agriculture ಎಂಬ ಶೀರ್ಷಿಕೆ ಮೇಲೆ ನಡೆಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ( University of agriculture science Dharawad )ಕೃಷಿ ಮೇಳವನ್ನು ಮುಂದಿನ ತಿಂಗಳು ಅಂದರೆ 2023 ಸೆಪ್ಟಂಬರ್ 09 ರಿಂದ 12 ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿರುತ್ತದೆ. ಈ ಮೇಳವನ್ನು ನಡೆಸುವುದಾಗಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಪತ್ರಿಕಾ ಪ್ರಕಟಣೆ ನೀಡಿರುತ್ತದೆ.
ಇದನ್ನೂ ಓದಿ: ಬೆಳವಣಿಗೆಯನ್ನು ಉತ್ತೇಜಿಸುವುದು: ಭಾರತದಲ್ಲಿ ಕೃಷಿಯನ್ನು ಅನ್ವೇಷಿಸುವುದು B.Sc Agriculture
ಈ ಕೃಷಿ ಮೇಳದಲ್ಲಿ ಮುಖ್ಯವಾಗಿ “ಡಾ. ಚನ್ನವೀರ ಕಣವಿ ಉತ್ತಮ ಕನ್ನಡ ಕೃಷಿಲೇಖನ ಪ್ರಶಸ್ತಿ” ಯನ್ನು ನೀಡಲಾಗುವುದು, ಲೇಖನವು ಯಾವುದೇ ಪ್ರಚಲಿತ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ರೈತ ಸಮುದಾಯಕ್ಕೆ ಸ್ಪೂರ್ತಿದಾಯಕವಾದ ಉತ್ತಮ ಕೃಷಿ ವಿಚಾರಗಳನ್ನು ಒಳಗೊಂಡಿರಬೇಕು ಹಾಗೂ ಕೃಷಿ ಲೇಖನವು 01.05.2022 ರಂದು 30.06,2023ರಲ್ಲಿ ಪ್ರಕಟವಾಗಿರಬೇಕು. ಒಬ್ಬರಿಂದ ಒಂದೇ ಲೇಖನ ಸ್ವೀಕಾರ ಮಾಡಲಾಗುವುದು ಹಾಗೂ ಮರು ಮುದ್ರಿತವಾಗಿರಬಾರದು.
ಸ್ಪುಟವಾಗಿ ಮುದ್ರಿತ (ಝರಾಕ್ಸ್) ಲೇಖನದ ನಾಲ್ಕು ಪ್ರತಿಗಳನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005 ಇವರಿಗೆ ತಲುಪಿಸಬೇಕು ಹಾಗೂ ಮಿಂಚಂಚೆ ಮೂಲಕ ಲೇಖನದ ಗಣಕ ಪ್ರತಿಯನ್ನು de@uasd.in ವಿಳಾಸಕ್ಕೆ ಕಳಿಸಬೇಕು.
ಲೇಖನಗಳು ತಲುಪಲು ಕೊನೆಯ ದಿನಾಂಕ 15.08.2023, ಈ ಮೊದಲು ಈ ಪ್ರಶಸ್ತಿಯನ್ನು ಪಡೆದವರಿಗೆ ಅವಕಾಶವಿರುವುದಿಲ್ಲ.
ವಿಶೇಷ ಮಾಹಿತಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗುವಹಿಸುವಂತಿಲ್ಲ. ನಿರ್ಣಾಯಕರ ತೀರ್ಮಾನವೇ ಅಂತಿಮ.
ವಿಸ್ತರಣಾ ನಿರ್ದೇಶಕರು ಕವಿವಿ, ಧಾರವಾಡ
ಪತ್ರಿಕಾ ಪ್ರಕಟಣೆ ಹಾಗೂ ಮಾಧ್ಯಮಗಳಲ್ಲಿ ಉತ್ತಮ ಪ್ರಚಾರ ನೀಡಬೇಕಾಗಿ ಈ ಮೂಲಕ ಕೋರಲಾಗಿದ
ವಿಸ್ತರಣೆ:
ನಿರ್ದೆಶಕರು
ಕೃಷಿ ವಿಶ್ವವಿದ್ಯಾಲಯ, ಧಾರವಾಡ ತಿಳಿಸಿರುತ್ತಾರೆ.