ಆತ್ಮೀಯ ರೈತ ಬಾಂದವರೇ ಈ ವರ್ಷ ಕಳೆದ ವರ್ಷಗಳಿಗೆ ಹೊಲಿಕೆ ಮಾಡಿದರೆ ಮಳೆ ಪ್ರಮಾಣ ತೀರ ಕಡಿಮೆ, ಇದರ ಪರಿಣಾಮವಾಗಿ ರೈತಾಪಿ ಕುಟುಂಬಕ್ಕೆ ಆರ್ಥಿಕವಾಗಿ ಬಹಳ ಹೈರಾಣವಾಗಿರುತ್ತಾರೆ. ಅದನ್ನು ಅರಿತ ಸರ್ಕಾರ 2023-24 ನೇ ಸಾಲಿನ ಮಧ್ಯಂತರ ಬೆಳೆ ವಿಮೆಯ ಪರಿಹಾರ ಮೊತ್ತವನ್ನು ಜಮಾ ಮಾಡಲು ಸರ್ಕಾರ ಜಿಲ್ಲಾಡಳಿತಕ್ಕೆ ತಿಳಿಸಿರುತ್ತದೆ.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ನದಿಗಳು ಬತ್ತಿ ಹೋಗಿವೆ. ಎಲ್ಲೆಲ್ಲೂ ಬರ ಪರಿಸ್ಥಿತಿ ನಿರ್ಮಾಣವಾದ ಪ್ರಯುಕ್ತ ಬೆಳೆ ವಿಮೆ ಯೋಜನೆಯಡಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಮಧ್ಯಂತರ ವಿಮೆ ಪರಿಹಾರ Interim Crop Insurance ಪಡೆಯಲು ಅವಕಾಶ ಇರುತ್ತದೆ.
ಈ ಲೇಖನದಲ್ಲಿ ಸದ್ಯದಕ್ಕೆ ಮಾಹಿತಿಯನ್ನು ಧಾರವಾಡ ಜಿಲ್ಲೆ ವ್ಯಾಪ್ತಿಯ ರೈತರಿಗೆ ಖಷಿ ಸುದ್ದಿಯೊಂದು ದೊರೆತಿದೆ. ಹೌದು ಧಾರವಾಡ ಜಿಲ್ಲೆಗೆ ಒಳ ಪಡುವ ತಾಲ್ಲೂಕುಗಳಲ್ಲಿ ರೈತರು ವಿವಿಧ ಬೆಳೆಗಳಡಿ ಬೆಳೆವಿಮೆಗೆ ಹೆಸರು ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ಬೆಳೆ ವಿಮೆ Interim Crop Insurance ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
Crop insurance amount: ಬೆಳೆವಿಮೆ ಎಷ್ಟು ಜಮಾ:
2023-24 ನೇ ಸಾಲಿನ ಮುಂಗಾರು ಹಂಗಾಮಿನ ಮದ್ಯಂತರ ಬೆಳೆ ವಿಮೆ ಧಾರವಾಡ ಜಿಲ್ಲೆ ವ್ಯಾಪ್ತಿಯ ಒಳಪಡುವ 63,566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರಾಗಿದೆ. ಎಂದು ಜಿಲ್ಲಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
Insurance money For which crop?ಯಾವ ಬೆಳೆಗೆ ವಿಮೆ ಹಣ:
2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿತ್ತು. ಈ ಬೆಳೆವಿಮೆ ಯಾವ ಯಾವ ಬೆಳೆಗಳಿಗೆ ಈ ವಿಮೆ ಹಣ ಸಿಗಲಿದೆ ಎಂಬ ಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಭತ್ತ,(Paddy)
ಮೆಕ್ಕೆಜೋಳ(,Maize)
ಹತ್ತಿ,( Cotton)
ಈರುಳ್ಳಿ, (Onion)
ಕೆಂಪು ಮೆಣಸಿನಕಾಯಿ ( red chillies)ಮತ್ತು ಆಲೂಗಡ್ಡೆ (Potato)ಬೆಳೆಗಳಡಿ ನೊಂದಾಯಿಕೊಂಡ ರೈತರಿಗೆ ಮಧ್ಯಂತರ ವಿಮೆ Interim Crop Insurance ಜಮಾವಣೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
crop insurance deposit Information: ರೈತರಿಗೆ ಜಮೆ ಆದ ವಿಮೆ ಮಾಹಿತಿ:
ಅಳ್ಳಾವರ ತಾಲ್ಲೂಕಿನ 3052 ಜನ ರೈತರಿಗೆ 1.82 ಕೋಟಿ ರೂಪಾಯಿ,
ಅಣ್ಣಿಗೇರಿ ತಾಲ್ಲೂಕಿನ 6044 ಜನ ರೈತರಿಗೆ 6.45 ಕೋಟಿ ರೂ ಗಳ,
ಧಾರವಾಡ 9978 ಜನ ರೈತರಿಗೆ 6.575 ಕೋಟಿ ರೂಪಾಯಿ,
ಹುಬ್ಬಳ್ಳಿ ತಾಲ್ಲೂಕಿನ 9472 ಜನ ರೈತರಿಗೆ 9.12 ಕೋಟಿ ರೂಪಾಯಿ.
ಹುಬ್ಬಳ್ಳಿ ನಗರ ತಾಲ್ಲೂಕಿನ 301 ಜನ ರೈತರಿಗೆ 0.365 ಕೋಟಿ ರೂಪಾಯಿ,
ಕಲಘಟಗಿ ತಾಲ್ಲೂಕಿನ 15248 ಜನ ರೈತರಿಗೆ 9.731 ಕೋಟಿ ರೂಪಾಯಿ
ಮತ್ತು ನವಲಗುಂದ ತಾಲ್ಲೂಕಿನ 5286 ಜನ ರೈತರಿಗೆ 5.282 ಕೋಟಿ ರೂಪಾಯಿ ಮಧ್ಯಂತರ ವಿಮಾ ಪರಿಹಾರ ಜಮಾವಣೆ ಆಗಲಿವೆ ಎಂದು ಪ್ರಕಟಣೆಯಲ್ಲಿ ತಿಲಿಸಿದ್ದಾರೆ.
ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ಯ ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ವಿಮೆಗೊಳಪಟ್ಟ 56995 ಹೆಕ್ಟೇರ ಪ್ರದೇಶಕ್ಕೆ ವಿಮೆ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯ ಒಳಪಡುವ ಒಟ್ಟು 1,11,057 ಜನ ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೋಂದಾವಣೆ ಮಾಡಿಕೊಂಡಿದ್ದಾರೆ. ಒಟ್ಟು 1,05,065 ಹೆಕ್ಟೇರ್ ನಷ್ಟು
ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ: