ಆತ್ಮೀಯ ಗೆಳೆಯರೇ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನಾ (ಪಿಎಮ್-ಎಸ್ ವೈಎಂ) ಇದು ಭವಿಷ್ಯದಲ್ಲಿ ಬಹಳ ಉಪಯೋಗವಾಗುವ ಯೋಜನೆಯಾಗಿದೆ, ನೀವು ನಿಮ್ಮ ದುಡಿಯುವ ಸಮಯದಲ್ಲಿ ಅಂದರೆ, ಹರೆಯದ ವಯಸ್ಸಿನಲ್ಲಿ ಈ ಯೋಜನೆಯಡಿ ತಿಂಗಳಿಗೆ 55 ರಿಂದ 200 ರೂ ಠೇವಣಿ ಮಾಡಿದರೆ ಸಾಕು. ಆತ್ಮೀಯರೇ ಯಾವುದೇ ಅಸಂಘಟಿತ ಕಾರ್ಮಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲಿ ಹಣವನ್ನು ಠೇವಣಿ ಇಡಬೇಕಾಗುತ್ತದೆ.
ಈ ಯೋಜನೆಯಡಿ, ಫಲಾನುಭವಿಯು 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ರೂ.3 ಸಾವಿರ ಕನಿಷ್ಠ ಖಾತರಿ ಪಿಂಚಣಿ, ಅಥವಾ ವಾರ್ಷಿಕ 36,000 ರೂಪಾಯಿ ಪಿಂಚಣಿ ಪಡೆಯಬಹುದಾಗಿರುತ್ತದೆ.
ಆತ್ಮೀಯರೇ ನಮ್ಮ ದೇಶದಲ್ಲಿ ಸುಮಾರು 42 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಕಟ್ಟಡ ಕಾರ್ಮಿಕರು, ವಾಷರ್‌ಮೆನ್‌ಗಳು, ರಿಕ್ಷಾ ಚಾಲಕರು, ಇಟ್ಟಿಗೆ ಗೂಡು ಕಾರ್ಮಿಕರು, ಚಮ್ಮಾರರು, ಟೈಲರ್‌ಗಳು, ಬೀದಿ ಬದಿ ವ್ಯಾಪಾರಿಗಳು, ಊಟದ ಕೆಲಸಗಾರರು, ಗೃಹ ಕಾರ್ಮಿಕರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು, ನೇಕಾರರು, ಚರ್ಮ ಕಾರ್ಮಿಕರು, ಇತರೆ ಉದ್ಯೋಗದ ಕಾರ್ಮಿಕರು ಈ ಒಂದು ಯೋಜನೆಯ ಲಾಭ ಪಡೆಯಬಹುದಾಗಿರುತ್ತದೆ.
ಯೋಜನೆಗೆ ಅರ್ಹತೆಗಳು: ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನಾ(ಪಿಎಮ್-ಎಸ್ ವೈಎಂ)
18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.
ಮಾಸಿಕ ಆದಾಯ 15000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
ಅವರು ಯಾವುದೇ ಸಂಘಟಿತ ವಲಯದ (EPFO/NPS/ESIC) ಸದಸ್ಯರಾಗಿರಬಾರದು.
ಫಲಾನುಭವಿಯು ಆಧಾರ್ ಕಾರ್ಡ್, IFSC ನೊಂದಿಗೆ ಉಳಿತಾಯ ಬ್ಯಾಂಕ್ ಖಾತೆ/ಜನ್ ಧನ್ ಖಾತೆ ಸಂಖ್ಯೆಯನ್ನು ಹೊಂದಿರಬೇಕು.
ಯೋಜನೆಯ ಸೌಲಭ್ಯಗಳು:
ಇದನ್ನೂ ಓದಿ: 50000/- ಸಾವಿರದವರೆಗೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇಂದೇ ಅರ್ಜಿ ಸಲ್ಲಿಸಿ.
ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ತಿಂಗಳಿಗೆ ರೂ.55 ರಿಂದ ರೂ.200 ರೂ ಹೂಡಿಕೆ ಮಾಡುವುದರಿಂದ
60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಯು ತಿಂಗಳಿಗೆ ನಿಶ್ಚಿತ ರೂ.3,000/-ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಪಿಂಚಣಿ ಆರಂಭಗೊಂಡ ನಂತರ ಫಲಾನುಭವಿಗಳು ಮೃತ ಪಟ್ಟಲ್ಲಿ ಅವರ ಪತ್ನಿ/ಪತಿ ಪಿಂಚಣಿಯ ಶೇ.50 ರಷ್ಟು ಪಿಂಚಣೆಯನ್ನು ಪಡೆಯಲು ಅರ್ಹರಾಗುತ್ತಾರೆ.
ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದೆ ಆದರೆ ಅವರು 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅವನು/ ಅವಳ ಹೆಂಡತಿಗೆ ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದು.
ಫಲಾನುಭವಿಗಳು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.
ಮಾಸಿಕ ಕೊಡುಗೆಯ ಮೊತ್ತವು ಫಲಾನುಭವಿಯ ವಯಸ್ಸು ಮತ್ತು ಭವಿಷ್ಯದಲ್ಲಿ ಅವನು ಅಥವಾ ಅವಳು ಎಷ್ಟು ಪಿಂಚಣಿ ಪಡೆಯಲು ಬಯಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ತಿಂಗಳು ನಿಗದಿತ ಮೊತ್ತದ ಪಿಂಚಣಿಯನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.
ಮುಕ್ತಾಯದ ನಂತರ ಫಲಾನುಭವಿಗೆ ಮಾಸಿಕ ರೂ.3 ಸಾವಿರ ಪಿಂಚಣಿ ಸಿಗುತ್ತದೆ. ಒಂದು ವೇಳೆ ಗಂಡ ಮತ್ತು ಹೆಂಡತಿ ಇಬ್ಬರೂ ಯೋಜನೆ ಫಲಾನುಭವಿಗಳಾಗಿದ್ದರೆ ವಾರ್ಷಿಕ 72,000/- ಪಿಂಚಣಿ ಸಿಗಲಿದೆ.
ಇದನ್ನೂ ಓದಿ: ಅತೀ ಕಡಿಮೆ ದರದಲ್ಲಿ ಸ್ವರ್ಣಧಾರ ನಾಟಿ ಕೋಳಿ ಮತ್ತು ಮರಿಗಳು ಲಭ್ಯ
ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಆಧಾರ್, ಉಳಿತಾಯ ಅಥವಾ ಜನ್ ಧನ್ ಖಾತೆ, ಬ್ಯಾಂಕ್ ಪಾಸ್‌ಬುಕ್ ಅಥವಾ ಚೆಕ್, ಬ್ಯಾಂಕ್ ಸ್ಟೇಟ್‌ಮೆಂಟ್, ಭಾವಚಿತ್ರ, ತೆಗೆದುಕೊಂಡು ಈ ಯೋಜನೆಯ ಫಲಾನುಭವಿಗಳಾಗಿ ಯೋಜನೆಯ ಸದುಪಯೋಗ ಪಡೆದುಕೋಳ್ಳಿ.