Friday, September 20, 2024

Post Office account : ಅಂಚೆ ಕಚೇರಿಯ ಖಾತೆಗೆ ಆಧಾರ್‍ ಕಾರ್ಡ ಲಿಂಕ್ ಆಗದ್ದಿದರೆ ಈ ಎಲ್ಲಾ ಯೋಜನೆಗಳು ರದ್ದಾಗುವವು!!!

Post Office account : ಅಂಚೆ ಕಚೇರಿಯ ಖಾತೆಗೆ ಆಧಾರ್‍ ಕಾರ್ಡ ಲಿಂಕ್ ಆಗದ್ದಿದರೆ ಈ ಎಲ್ಲಾ ಯೋಜನೆಗಳು ರದ್ದಾಗುವವು!!!
ಕೊನೆಯ ದಿನಾಂಕ ಯಾವುದು? ಆಧಾರ್‍ ಲಿಂಕ್ ಮಾಡಲು ನಿಯಮಗಳಾವವು? ಆಧಾರ್‍ ಲಿಂಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಆತ್ಮೀಯ ಸ್ನೇಹಿತರೇ ನೀವು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆದಿದ್ದರೆ ಅವಶ್ಯಕವಾಗಿ ಈ ಕೆಲಸ ಮಾಡಿ ,ಸಾಮಾನ್ಯವಾಗಿ ಬೇರೆ ನ್ಯಾಶನಲ್ ಬ್ಯಾಂಕ್ ಮತ್ತು ಕಾರ್ಪೋರೆಶನ್ ಬ್ಯಾಂಕ್ ಖಾತೆಗೆ ಹೊಲಿಸಿದರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಎಂದಿಗೂ ಕೂಡಾ ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಗಳನ್ನು ಹೂಡಿಕೆದಾರರಿಗೆ ನೀಡುತ್ತಿರುತ್ತದೆ. ಈ ಯೋಜನೆಗಳು ಸರ್ಕಾರದಿಂದ ಬೆಂಬಲಿತವಾಗಿದೆ. ಹಾಗೂ ಈ ಅಂಚೆ ಕಚೇರಿ ಖಾತೆದಾರರಿಗೆ ಉತ್ತಮ ಬಡ್ಡಿದರಗಳನ್ನು ಒದಗಿಸಲಾಗುತ್ತದೆ.

ಈ ಅಂಚೆ ಕಚೇರಿ ಖಾತೆ( Post office account )ಯನ್ನು ತೆರೆಯುವುದು ತುಂಬಾ ಸುಲಭ. ಆದರೆ, ನೀವು ಈ ಖಾತೆಯನ್ನು ತೆರೆಯುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಉಳಿತಾಯ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು, ನೀವು ನಿಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಬೇಕು. ಸಣ್ಣ ಉಳಿತಾಯ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಬೇಕಾಗುತ್ತದೆ.

Post office account ಆಧಾರ ಕಾರ್ಡ ಲಿಂಕ್ ಕೊನೆಯ ದಿನಾಂಕ:


ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರುವವರು ಇದೇ ತಿಂಗಳ ಸೆಪ್ಟೆಂಬರ್‍ 30 ರ ಒಳಗೆ ಖಾತೆಗೆ ಅಧಾರ್‍ ಕಾರ್ಡ ಲಿಂಕ್ ಮಾಡಿಸಲು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಆಧಾರ್ ಕಾರ್ಡ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ತಿಳಿಯಲು ಜಾಲತಾಣದ ಲಿಂಕ್:
ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?

ಅಂಚೆ ಕಚೇರಿ ಖಾತೆಗೆ ಆಧಾರ್ ಲಿಂಕ್ ಆಗದಿದ್ರೆ ಯಾವ ಯೋಜನೆಗಳು ರದ್ದಾಗುವವು?

ಹೌದು, ಆಧಾರ್ ಲಿಂಕ್ ಆಗದಿದ್ರೆ ಏನು ಆಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ ಒಂದು ವೇಳೆ ಖಾತೆಗೆ ಇದೇ ತಿಂಗಳ ಸೆಪ್ಟೆಂಬರ್‍ 30 ರ ಒಳಗೆ ಜನರು ಈ ಗಡುವಿಗೂ ಮುನ್ನ ತಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ವಿಫಲವಾದರೆ, ಅಂಚೆ ಕಚೇರಿ ಖಾತೆಯು ನಿಷ್ಕ್ರಿಯವಾಗುತ್ತದೆ. ನೀವು ಅಂಚೆ ಕಚೇರಿ ಉಳಿತಾಯ ಯೋಜನೆಗೆ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಾಧ್ಯವಾಗದಿದ್ದರೆ,


ನಿಮ್ಮ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಅಥವಾ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯಂತಹ ಯಾವುದೇ ಸಣ್ಣ ಉಳಿತಾಯ ಯೋಜನೆಗಳನ್ನು ಮತ್ತು ಅಂಚೆ ಕಚೇರಿಯಲ್ಲಿ ಪಿಪಿಎಫ್, ಎನ್‌ಎಸ್‌ಸಿ, ಕೆವಿಪಿ, ತಿಂಗಳ ಆದಾಯ ಯೋಜನೆ, ಎಸ್‌ ಸಿಎಸ್‌ಎಸ್. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು , ನಿಷ್ಷ್ರಿಯಗೊಳಿಸಲಾಗುವುದು. ಬಾಕಿ ಇರುವ ಬಡ್ಡಿ ಖಾತೆಗೆ ಜಮಾ ಆಗುವುದಿಲ್ಲ, ಉಳಿತಾಯ ಖಾತೆ ಸೇರಿದಂತೆ ಠೇವಣಿ ಮೇಲೆ ನಿರ್ಬಂಧ, ಖಾತೆ ಅವಧಿ ತುಂಬಿದಾಗಲೂ ಅದನ್ನು ಪಡೆಯಲು ಅಸಾಧ್ಯ .ಹೂಡಿಕೆಯ ಆಯ್ಕೆಗಳ ಯಾವುದೇ ಪ್ರಯೋಜನವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ಇಲಾಖೆ ಮಾಹಿತಿಯನ್ನು ತಿಳಿಸಿರುತ್ತದೆ.

Aadhaar Linking Rules: ಆಧಾರ್ ಲಿಂಕ್ ಮಾಡುವ ನಿಯಮಗಳು:

ಇತ್ತೀಚಿನ ಅಧಿಸೂಚನೆಯಲ್ಲಿ ಹೊಸ ಹೂಡಿಕೆದಾರರು ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ತಮ್ಮ ಸಣ್ಣ ಉಳಿತಾಯ ಯೋಜನೆಯ ಖಾತೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಘೋಷಿಸಿದೆ. ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೂ ಈ ನಿಮಯ ಅನ್ವಯವಾಗುತ್ತದೆ.

“ಡೆಪಾಸಿಟ್‌ದಾರರು ಈಗಾಗಲೇ ಖಾತೆಯನ್ನು ತೆರೆದಿದ್ದರೆ ಮತ್ತು ಅವರ ಆಧಾರ್ ಸಂಖ್ಯೆಯನ್ನು ಖಾತೆಗಳ ಕಚೇರಿಗೆ ಸಲ್ಲಿಸದಿದ್ದರೆ, ಅವರು 2023 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಯಲ್ಲಿ ತಮ್ಮ ಅಂಚೆ ಕಚೇರಿ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.

ನಿಮ್ಮ ಅಂಚೆ ಕಚೇರಿ ಖಾತೆಯಲ್ಲಿನ ಬ್ಯಾಲೆನ್ಸ್ 50,000 ರೂಪಾಯಿಯನ್ನು ಮೀರಿದ್ದರೆ ಅಥವಾ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವರ್ಗಾವಣೆಗಳು ಮತ್ತು ಬ್ಯಾಲೆನ್ಸ್‌ಗಳ ಮೊತ್ತವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಯೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲಾ ಕ್ರೆಡಿಟ್‌ಗಳ ಒಟ್ಟು ಮೊತ್ತವು 1 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಪ್ಯಾನ್ ಲಿಂಕ್ ಕಡ್ಡಾಯವಾಗಿದೆ ಎಂದು ಅಂಚೆ ಇಲಾಖೆ ಮಾಹಿತಿಯನ್ನು ನೀಡಿರುತ್ತದೆ.

How to link Aadhaar :ಆಧಾರ್ ಲಿಂಕ್ ಮಾಡುವುದು ಹೇಗೆ?

ಅಂಚೆ ಕಚೇರಿ ಉಳಿತಾಯ ಯೋಜನೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಹಲವಾರು ಮಾರ್ಗಗಳಿವೆ. ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ಆಧಾರ್ ಕಾರ್ಡ್ ಮತ್ತು ಪಾಸ್‌ಬುಕ್ ತೆಗೆದುಕೊಂಡು ಹೋಗಿ ಅಂಚೆ ಕಚೇರಿಯಲ್ಲಿ ಜೋಡಣೆ ಮಾಡಬಹುದು. ಅದರ ಹೊರತಾಗಿ, ನೀವು ನಿಮ್ಮ ಬ್ಯಾಂಕ್ ಖಾತೆಗೆ ಲಾಗ್ ಇನ್ ಆಗಿ, ಉಳಿತಾಯ ಯೋಜನೆಯನ್ನು ಲಿಂಕ್ ಮಾಡಲು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬಹುದು.ಇಲ್ಲಿ ಕ್ಲಿಕ್ ಮಾಡಿ ನಿಮಗೆ ಅಂಚೆ ಕಚೇರಿಯ ಜಾಲತಾಣ ದೊರೆಯುವುದು

ಇದನ್ನೂ ಓದಿ: ಒಂದು ತಿಂಗಳ ಉಚಿತ ದ್ವಿಚಕ್ರವಾಹನ ದುರಸ್ಥಿ, ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಕುರಿತು ತರಬೇತಿ :
ಇದನ್ನೂ ಓದಿ: ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಒಂದು ವೇಳೆ ಖಾತೆಯನ್ನು ನಿಷ್ಷ್ರಿಯಗೊಳಿಸಿದರೆ ಏನಾಗಬಹುದು?

ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ನಿಷ್ಷ್ರಿಯಗೊಳಿಸಿದರೆ, ನೀವು ಡೆಪಾಸಿಟ್ ಮಾಡಲು ಸಾಧ್ಯವಾಗುವುದಿಲ್ಲ. ಹೂಡಿಕೆಯ ಮೆಕ್ಯೂರಿಟಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ. ನಿಮ್ಮ ಖಾತೆಗೆ ಯಾವುದೇ ಬಡ್ಡಿಯನ್ನು ಜಮೆ ಮಾಡಲಾಗುವುದಿಲ್ಲ. ಅಂಚೆ ಕಚೇರಿಯ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗುದಿಲ್ಲ. ಜೊತೆಗೆ ಸರ್ಕಾರದ ಯಾವುದೇ DBT ಹಣ ಜಮಾ ಅಗುವುದು ರದ್ದಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಬದಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles