Sunday, October 6, 2024

Hydroponics Agriculture-ಜಲ ಕೃಷಿ ಮೇವು ಎಂದರೇನು? ಅದರ ಪ್ರಯೋಜನಗಳ ಬಗ್ಗೆ ಮಾಹಿತಿ.

ಪಶುಸಂಗೋಪನೆಯು ಕೃಷಿಯಲ್ಲಿ ಆದಾಯ ಕೊಡುಗೆ ನೀಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಮೇವಿನ ಕೊರತೆಯು ಈ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗುತ್ತಿರುವ ಒಂದು ಸಮಸ್ಯೆಯಾಗಿದೆ. ಈ ಜಲ ಕೃಷಿ ಮೇವು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹಸುಗಳಿಗೆ ವರ್ಷ ಪೂರ್ತಿ ಹಸಿ ಮೇವು ಸಿಗುವ ಹಾಗೆ ಮಾಡಬಹುದು.

ಹೈನುಗಾರರು ಹಸಿರು ಮೇವು ಉತ್ಪಾದನೆಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಸಣ್ಣ ಜಮೀನುಗಳು, ಮೇವು ಕೃಷಿಗೆ ಭೂಮಿಯ ಅಲಭ್ಯತೆ, ನೀರಿನ ಕೊರತೆ, ಉತ್ತಮ ಗುಣಮಟ್ಟದ ಮೇವಿನ ಬೀಜಗಳು ದೊರಕದೆಯಿರುವುದು, ಕೂಲಿ ಕಾರ್ಮಿಕರ ಕೊರತೆ, ಈ ಮೇಲೆ ತಿಳಿಸಿದ ಸಮಸ್ಯೆಗಳಿಂದ ಜಾನುವಾರುಗಳಿಗೆ ಮೇವನ್ನು ಬೆಳೆಸಲು ಪರ್ಯಾಯ ತಂತ್ರಜ್ಞಾನವಾಗಿ ಹೈಡ್ರೋಪೋನಿಕ್ಸ್‌ ಹೊರಹೊಮ್ಮಿದೆ.

ಹೈಡ್ರೋಪೋನಿಕ್ಸ್‌ ಎಂಬ ತಂತ್ರಜ್ಞಾನವನ್ನು ಬಳಸಿ ಕಡಿಮೆ ನೀರಿನ ಬಳಕೆಯಲ್ಲಿ ಯಾವುದೇ ಮಣ್ಣನ್ನು ಬಳಸದೆ ಹಸಿರು ಮನೆಯೊಳಗೆ ಸುಮಾರು 7 ದಿನಗಳ ಒಳಗೆ ಹಸುಗಳಿಗೆ ಹಸಿ ಮೇವು ತಯಾರಿಸುವ ವಿಧಾನವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ:ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆ ನಿಮಗೆ ಗೊತ್ತೆ?

ಭಾರತದಲ್ಲಿ ಎರಡು ರೀತಿಯ ಹಸಿರುಮನೆ ಕೃಷಿ ಘಟಕಗಳನ್ನು ಬಳಸಲಾಗುತ್ತದೆ.

1)ಹೈಟೆಕ್‌ ಗ್ರೀನ್‌ ಹೌಸ್‌ ಮಾದರಿಯ ಕೃಷಿ ಘಟಕ: ಸೆನ್ಸರ್ ಗಳ ಮೂಲಕ ನೀರು, ಗಾಳಿ ಮತ್ತು ಬೆಳಕಿನ ಒಳಹರಿವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಲು ಇದು ನಿಯಂತ್ರಣ ಘಟಕವನ್ನು ಹೊಂದಿದೆ.

2)ಕಡಿಮೆ ವೆಚ್ಚದ ಹಸಿರುಮನೆ ಮಾದರಿಯ ಕೃಷಿ ಘಟಕ: ನೆರಳು ನಿವ್ವಳ ರಚನೆಗಳನ್ನು ಬಿದಿರು, ಮರ, ಸ್ಟೀಲ್‌ ಅಥವಾ ಕಬ್ಬಿಣದ ಉಕ್ಕಿನಿಂದ ತಯಾರಿಸಬಹುದು.

ಇದನ್ನೂ ಓದಿ:ಮನೆಯಲ್ಲೇ ಕುಳಿತು ಆಧಾರ್‌ ಕಾರ್ಡ ಸಂಖ್ಯೆ ಹಾಕಿ ಯಾವ ಯೋಜನೆಗಳಡಿ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

ಹೈಡ್ರೋಪೋನಿಕ್ಸ್‌ ಮೇವಿನ ಪ್ರಯೋಜನಗಳು:

1)ಈ ತಂತ್ರಜ್ಞಾನದಿಂದ ಮಣ್ಣಿನ ಆಧಾರವಿಲ್ಲದೆ 7-8 ದಿನಗಳಲ್ಲಿ ಸುಲಭ ವಿಧಾನದಲ್ಲಿ ಹಸಿರು ಮೇವನ್ನು ಬೆಳೆಯಬಹುದು.

2)ಮೇವಿನ ಕೊರತೆ ಹಾಗೂ ಬರಗಾಲದಲ್ಲಿ ಹಸಿರು ಮೇವನ್ನು ಬೆಳೆಯುವ ಸುಲಭ ವಿಧಾನವಾಗಿದೆ.

3)ಹಾಲು ಉತ್ಪಾದನೆ ವೆಚ್ಚ ತಗ್ಗಿಸಲು ಹಾಗೂ ಮೇವಿನ ಕೊರತೆಯನ್ನು ನೀಗಿಸಬಹುದಾಗಿದೆ.

4)ಹೈನುಗಾರಿಕೆಯಲ್ಲಿ ಮೇವಿನ ವೆಚ್ಚವನ್ನು ಕಡಿಮೆ ಮಾಡಬಹುದು.

5)ನೀರಿನ ಅಭಾವ ಮತ್ತು ಹೆಚ್ಚುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆ.

6)ಈ ವಿಧಾನದಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಬಹುದು.

7)ಇದನ್ನು ಬೆಳೆಯಲು ಕೃಷಿ ಭೂಮಿಯ ಅಗತ್ಯತೆ ಇರುವುದಿಲ್ಲ ಸಾಮಾನ್ಯ ಜಾಗದಲ್ಲೂ ಇದನ್ನು ಬೆಳೆಯಬಹುದು

8)ಇದರಲ್ಲಿ ಯಾವುದೇ ಕೀಟನಾಶಕಗಳ ಬಳಕೆ ಇರುವುದಿಲ್ಲ.

9)ರಸಗೊಬ್ಬರ ಬಳಕೆ ಸಂಪೂರ್ಣ ಬಳಕೆಯಾಗುತ್ತದೆ.

10)ಇದರಲ್ಲಿ ಯಾವುದೇ ಹವಮಾನ ಪರಿಸ್ಥಿಗಳ ಮೇಲೆ ಅವಲಂಬಿಸಿಲ್ಲ. 11) ಇದರಿಂದ ಹಸುಗಳ ಹಾಲಿನ ಪ್ರಮಾಣ ಹೆಚ್ಚಿಗೆಯಾಗುತ್ತದೆ

ಇತ್ತೀಚಿನ ಸುದ್ದಿಗಳು

Related Articles