Tuesday, December 3, 2024

ದ್ವಿದಳ ಧಾನ್ಯ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ನಿರ್ವಹಣೆ ಹೇಗೆ?

ದ್ವಿದಳ ಧಾನ್ಯಗಳು ಕಡಿಮೆ ಅವಧಿಯ ಬೆಳೆಯಗಿದ್ದು, ಸಸಾರಜನಕದ ಪೂರೈಕೆಗಾಗಿ ಸಸ್ಯಹಾರಿಗಳು ತಮ್ಮ ದಿನ ನಿತ್ಯದ ಆಹಾರದಲ್ಲಿ ನೆನೆಸಿದ ಕಾಳುಗಳಾಗಿ, ಬೇಯಿಸಿದ ಖಾದ್ಯಗಳಾಗಿ ಬಳಸುತಾರೆ. ಕೇವಲ 65 ರಿಂದ 70 ದಿನಗಳಲ್ಲಿ ಕೊಯ್ಲಿಗೆ ಬರುವುದರಿಂದ ಬೆಳೆಪದ್ದತಿಗಳಾದ ಬಹುಬೆಳೆ ಅಂತರಬೆಳೆ, ಸರಣಿಬೆಳೆ, ಹಸಿರುಗೊಬ್ಬರದ ಬೆಳೆಗಾಗಿ ಹಾಗೂ ಮುಂಗಾರಿನ ಭತ್ತದ ನಂತರ ಉಳಿಕೆ ತೇವಾಂಶದಲ್ಲಿ ಬೆಳೆಯಬಹುಗಿದಾದೆ. ವಾತಾವರಣದಲ್ಲಿರುವ ಸಾರಾಜನಕವನ್ನು ತನ್ನ ಬೇರುಗಂಟುಗಳಲ್ಲಿರುವ ಸೂಕ್ಷ್ಮಜೀವಿಗಳ ಸಹಾಯದಿಂದ ಸ್ವಿಕರಿಸಿ ಗಿಡಕ್ಕೆ ಒದಗಿಸುವುದರ ಜೊತೆಗೆ ಮಣ್ಣಿನಫಲವತ್ತತೆಯನ್ನು ಹೆಚ್ಚಿಸುತ್ತದೆ.

ಹಳದಿ ನಂಜುರೋಗ :
ಈರೋಗಕ್ಕೆ ತುತ್ತಾದ ಗಿಡಗಳ ಎಲೆಗಳ ಮೆಲೆದಟ್ಟ ಮತ್ತು ತಿಳಿ ಹಳದಿ ಬಣ್ಣದ ಲಕ್ಷಣಗಳು ಕಂಡು ಬರುತ್ತದೆ. ಗಿಡಗಳ ಬೆಳವಣಿಗೆ ಕುಂಟಿತಗೊಂಡು ಕುಬ್ಜವಾಗುವವು. ಈ ರೋಗವು ತೀವ್ರವಾಗಿದ್ದರೆ ಕಾಯಿಬಿಡುವುದಿಲ್ಲ ಈ ರೋಗವು ಬಿಳಿ ನೊಣದ ಮೂಲಕ ಗಿಡದಿಂದ ಗಿಡಕ್ಕೆ ಹರಡುತ್ತದೆ.

ನಿರ್ವಹಣೆ:
ರೋಗದ ಪ್ರಾರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತದ ಸಸಿಗಳನ್ನು ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು ಹಾಗೂ ಈ ರೋಗದ ಹರಡುವಿಕೆ ಹತೋಟಿಗೆ 1.7 ಮಿಲಿ. ಡೈಮಿಥೋಪಿಟ್ 10ಇಸಿ ಅಥವಾ 0.5 ಮಿ.ಲಿ. ಪಾಸಾಮಿಡಾನ 85 ಡಬ್ಲ್ಯೂ ಎಸ್.ಸಿ ಯನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಿರಿ. ಮುಂಜಾಗ್ರತಾ ಕ್ರಮವಾಗಿ ಬಿಳಿರೋಗದ ಹತೋಟಿಗಾಗಿ (ಎನ್.ಎಸ್.ಕೆ.)ಅಥವಾ ಬೇವಿನ ಎಣ್ಣೆ ೧೯೦೦ ಪಿ.ಪಿ.ಎಂ. ನ್ನು ಮಿ.ಲಿ. ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಬೂದಿರೋಗ :
ಎಲೆಯ ಮೇಲೆ ಶಿಲೀಂದ್ರದ ಬಳಿಯ ಪುಡಿಯಂಥ ಬೆಳವಣಿಗೆಯನ್ನು ಕಾಣಬಹುದು. ನಂತರ ಎಲೆಯ ಕೆಳಭಾಗಕ್ಕೂ ಬಿಳಿಶಿಲೀಂದ್ರ ಹರಡುವುದು ರೋಗದ ಭಾದೆ ಅಧಿಕವಾದಾಗ ಗಿಡಗಳ ಎಲೆಗಳು ಉರಿದು ದ್ಯುತಿಸಂಶ್ಲೇಷಣೆ ಕ್ರಿಯೆ ಕುಂಟಿತಗೊಳ್ಳುವುದರಿಂದ ಪೂರ್ಣವಾಗಿ ಬಾಡುತ್ತದೆ. ಈ ರೋಗದಿಂದ ಇಳುವರಿಯಲ್ಲಿ ಪ್ರತಿ ಶತ 10-60 ರಷ್ಟು ನಷ್ಟವಾಗುವುದು.

ನಿರ್ವಹಣೆ:
ಈ ರೋಗದ ನಿರ್ವಹಣೆ 3.0 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ. ಕಾರ್ಬನ್ಡೈಜಿಯಂನ್ನು 1 ಲೀಟರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಎಲೆಚುಕ್ಕೆರೋಗ :
ಈ ರೋಗದಿಂದ ಬಳಲುತ್ತಿರುವ ಎಲೆಗಳ ಮೇಲೆ ವ್ರತ್ತಾಕಾರದ ಕಂದು ಅಥವಾ ಕಪ್ಪು ಚುಕ್ಕೆಗಳನ್ನು ಕಾಣಬಹುದು. ರೋಗದ ಬಾಧೆ ಅಧಿಕಗೊಂಡಾಗ ಮಚ್ಚೆಗಳು- ಒಂದಕ್ಕೊಂದು ಕೂಡಿಕೊಂಡು ಎಲೆಗಳು ಸುಟ್ಟಂತಾಗಿ ಹೂ ಬಿಡುವ ಹಾಗೂ ಕಾಯಿ ಕಟ್ಟುವಂತಹ ಸಮಯದಲ್ಲಿ ಒಣಗಿ ಉದುರುತ್ತವೆ. ಈ ರೀತಿ ಚುಕ್ಕೆಗಳು ರೆಂಬೆಗಳ ಮೇಲೆ ಕಾಯಿಗಳ ಮೇಲೆ ಸಹಗೋಚರಿಸಬಹುದು.

ನಿರ್ವಹಣೆ:
ಈ ರೋಗದ ನಿರ್ವಹಣೆಗೆ ಪ್ರತಿ ಲೀಟರ ನೀರಿಗೆ 2 ಗ್ರಾಂ. ಮ್ಯಾಂಕೊಜೆಟ್ ಅಥವಾ 3 ಗ್ರಾಂ. ಆಕ್ಷಿಕ್ಲೋರೈಡನ್ನು ಬೆರೆಸಿ ಸಿಂಪಡಿಸಬೇಕು.

ಬೀಜ ಮತ್ತು ಸಸಿ ಕೊಳೆ ರೋಗ :
ಈ ರೋಗವು ಮಣ್ಣಿನ ಮುಖಾಂತರ ಹರಡುವುದು. ಬೀಜ ಕವಚದ ಮೇಲೆ ಹರಡುವಂತಹ ಕೆಲವು ಶೀಲೀಂದ್ರಗಳು ಬೀಜಗಳನ್ನು ಕೊಳೆಯುವಂತೆ ಮಾಡುವುದರಿಂದ ಬೀಜಗಳು ಮೊಳಕೆ ಯೊಡೆಯುವುದಿಲ್ಲ ಹಾಗೂ ಕೊಳೆ ರೋಗಕ್ಕೆ ತುತ್ತಾದ ಸಸ್ಯಗಳ ಎಲೆಗಳು ಒಣಗಿ ಸಾಯುವಂತೆ ಕಾಂಡದ ಕೆಳಭಾಗವು ಕ್ಷಿಣಗೊಂಡು ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಒಣಗಿದ ಸಸ್ಯಗಳು ಹೊಲದಲ್ಲಿ ಅಲ್ಲಲ್ಲಿ ಬಿತ್ತಿದ ೩ವಾರಗಳ ನಂತರ ಕಂಡುಬರುತ್ತದೆ.

ನಿರ್ವಹಣೆ:
ಈ ರೋಗದ ನಿರ್ವಹಣೆಗೆ ಟ್ರೈಕೋಡರ್ಮಾ ಎಂಬ ಜೈವಿಕ ಶಿಲೀಂದ್ರನಾಶಕ (4-5ಗ್ರಾಂಪ್ರತಿಕೆ.ಜಿ. ಬೀಜಕ್ಕೆ) ಮತ್ತು 3 ಗ್ರಾಂ. ಥೈರಾಮ್ದಿಂದ ಬೀಜೋಪಚಾರ ಮಾಡುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು ಹಾಗೂ ಕಾರ್ಬನ? ಡೈಜಿಯಮ್ನ್ನು (1 ಗ್ರಾಂ. ಪ್ರತಿಲೀಟರ್ನೀರಿಗೆ) ಸಿಂಪರಣೆ ಮಾಡುವುದರಿಂದ ರೋಗ ಹತೋಟಿಯಾಗುವುದು.

ಎಲೆ ಜಿಗಿ ಹುಳು
ಕೀಟಗಳು ಎಲೆಗಳಿಂದ ರಸ ಹೀರುವುದರಿಂದ ಎಲೆಗಳಲ್ಲಿ ಬಿಳಿ ಮಚ್ಚೆಗಳು ಕಾಣಿಸಿಕೊಂಡು ಕ್ರಮೇಣ ಎಲೆಗಳು ಮುದುಡಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ.

ನಿರ್ವಹಣೆ:
ಹುಳುಗಳ ತೀವ್ರತೆ ಕಂಡು ಬಂದಾಗ ಪ್ರತಿ ಲೀಟರ್ನೀರಿಗೆ 1ಮೀ.ಲಿ. ಡೈಮಿಥೋಯೇಟ್ಬೆರೆಸಿ ಸಿಂಪಡಿಸಬೇಕು.

ಸಸ್ಯ ಹೇನು:
ನೂರಾರು ಸಸ್ಯ್ಹೇನುಗಳು ಸುಳಿ, ಎಲೆ, ಹೂ, ಮೊಗ್ಗು ಮತ್ತು ಕಾಯಿಲೆಗಳಿಂದ ರಸ ಹೀರುವುದರಿಂದ ಎಲೆಗಳು ಮುದುಡುವುದು. ಕಾಯಿಗಳ ಬೀಜ ಚೀಕಲಾಗುವುದು ಮತ್ತು ಕೆಳಗಿನ ಎಲೆಗಳಲ್ಲಿ ಕಪ್ಪು ಬೂಸ್ಟ್ಬೆಳೆದು ಉದುರುವುದು.

ನಿರ್ವಹಣೆ:
ಹುಳುಗಳ ತೀವ್ರತೆ ಕಂಡುಬಂದಾಗ ಪ್ರತಿ ಲೀ. ನೀರಿಗೆ 1.7 ಮೀ.ಲೀ ಡೈಮಿತೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.

ಎಲೆ ತಿನ್ನುವ ಹುಳು:
ಹುಳುಗಳು ಎಲೆಗಳನ್ನು ತಿಂದು ನಾಶಪಡಿಸುವುದರಿಂದ ಎಲೆಗಳಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿ ಇಳುವರಿಯ ಮೇಲೆ ಗಂಬೀರ ಪರಿಣಾಮ ಬೀರುತ್ತದೆ.

ನಿರ್ವಹಣೆ:
ಹುಳುಗಳ ತೀವ್ರತೆ ಕಂಡು ಬಂಡಾಗ ಪ್ರತಿ ಲೀ. ನೀರಿಗೆ 13 ಮೀ.ಲೀ. ಡೈಮಿಥೋಯೆಟ್ 10 ಇಸಿ ಬೆರೆಸಿ ಸಿಂಪಡಿಸಬೇಕು.

ಕಾಯಿ ಕೊರೆಯುವ ಹುಳು:
ಚಿಟ್ಟೆಗಳು ಕಾಯಿ ಕೊರೆದು ಮೊಟ್ಟೆಗಳನ್ನುಇಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಹುಳುಗಳು ಬೀಜಗಳನ್ನು ತಿನ್ನುವುದರಿಂದ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ.

ನಿರ್ವಹಣೆ:
ಪ್ರತಿ ಲೀ. ನೀರಿಗೆ ೫ಮೀ. ಲೀ. ಫೆನ್ಪರಲೇಟ್-20 ಇಸಿ ಅಥವಾ 2ಮಿ.ಲಿ. ಕ್ವಿನಾಲ್ಪಾಸ್ -25 ಇಸಿ ಬೆರೆಸಿ ಸಿಂಪಡಿಸಿ. ಎಕರೆಗೆ 200 ಲೀ ಸಿಂಪರಣಾ ದ್ರಾವಣ ಬಳಸಿ.

ಮೂತಿಹುಳು:
ಮೂತಿಹುಳದ ಮರಿಗಳು ಕಾಳುಗಳನ್ನು ತಿನ್ನುವುದರಿಂದ ಇಳುವರಿ ಕಡಿಮೆ ಆಗುವುದರ ಜೊತೆಗೆ ಹುಣಮಟ್ಟವೂ ಸಹಿತ ಕಡಿಮೆಯಾಗುವುದು.

ನಿರ್ವಹಣೆ:
ಪ್ರತಿ ಲೀ. ನೀರಿಗೆ 5 ಮೀ.ಲೀ. ಫೆನ್ಪರಲೇಟ್-20 ಇಸಿ ಅಥವಾ 2 ಮಿ ಲಿಕ್ವಿನಾಲ್ಪಾಸ್ -25 ಇಸಿ ಬೆರೆಸಿ ಸಿಂಪಡಿಸಿ. ಎಕರೆಗೆ 200 ಲೀ ಸಿಂಪರಣಾ ದ್ರಾವಣ ಬಳಸಿ.

ಕೊಂಬಿನ ಹುಳು(ಸ್ಪಿಂಜಿಡ್ಪತಂಗ):
ಈ ಕೀಡೆಯು ಹಸಿರು ಬಣ್ಣ ವಿದ್ದುಮೈಯ ಮುಂಭಾಗದಲ್ಲಿ ಚಿಕ್ಕದಾದ ಕೂದಲನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಎಲೆಗಳನ್ನು ತಿಂದು ಹಾಳು ಮಾಡುತ್ತದೆ. ಹಾನಿ ಅತಿಯಾದಾಗ ಎಲ್ಲಾ ಎಲೆಗಳನ್ನು ಭಕ್ಷಿಸಿ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.

ನಿರ್ವಹಣೆ:
ಬೆಳೆಯಲ್ಲಿ ಕವಲೊಡೆದ ಟೊಂಗೆಗಳನ್ನುಅಲ್ಲಲ್ಲಿ ನೆಡುವುದರಿಂದ ಪಕ್ಷಿಗಳು ಕೂತು ಹುಳುಗಳನ್ನು ತಿಂದು ನಾಶಪಡಿಸುತ್ತವೆ.

ದೊಡ್ಡ ಕೀಡೆಗಳನ್ನು ಆರಿಸಿ ನಾಶಪಡಿಸಬೇಕು :
2 ಮೀಲಿ. ಕ್ಲೋರೊಪೈರಿಪಾಸ್-20 ಇಸಿ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ನೀರಿನ ಅಭಾವ ವಿದ್ದ ಪ್ರದೇಶದಲ್ಲಿ ಪ್ರತಿ ಎಕರಗೆ 8 ರಿಂದ 10 ಕೆ.ಜಿ. ಶೇ 1.5 ಕ್ವಿನಾಲ್ಪಾಸ್ -20 ಅಥವಾ ಶೇ . 0.4 ಫೆನವಲರೆಡ್ಡೂಳಿಕರಣ ಮಾಡಾಬೇಕು.

ಕಾಂಡದ ನೊಣ :
ಈ ನೊಣವು ಎಳೆಯದಾದ ಭಾಗದಲ್ಲಿ ಮೊಟ್ಟೆಇಡುತ್ತದೆ. ಮರಿಹುಳು ಸಣ್ಣ ಸಸಿಗಳ ಕಾಂಡದ ಮೇಲ್ಭಾಗವನ್ನು ಕರೆದು ತಿನ್ನುವುದರಿಂದ ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಗಾಳಿಯಿಂದ ಮುರಿಯಬಹುದು ಅಥವಾ ಕಾಂಡದ ಅಂತಹ ಭಾಗ ಕೊಳೆಯುತ್ತದೆ.

ನಿರ್ವಹಣೆ :
ಮುಂಚಿತವಾಗಿ ಬಿತ್ತನೆ ಮಾಡುವುದು, ಬಾಡುತ್ತಿರುವ ಸಸಿಗಳನ್ನು ಕಿತ್ತು ನೆಲದಲ್ಲಿ ಹೂಳಿದರೆ ಮುಂದಿನ ಪೀಳಿಗೆಯನ್ನು ತಡೆಗಟ್ಟಬಹುದು. 20 ಮೀಲೀ ಕ್ಲೋರೋಪೈರಿಪಾಸ್ -20 ಇಸಿ ಪ್ರತಿ ಲೀಟ ರ್ ನೀರಿಗೆ ಬೆರೆಸಿ ಬಿತ್ತನೆ ಮಾಡಿದ 20 – 25ನೇ ದಿನಗಳಲ್ಲಿ ಕಾಂಡದ ಬುಡಕ್ಕೆ ಬೀಳುವಂತೆ ಸಿಂಪಡಿಸಬೇಕು.

ಇತ್ತೀಚಿನ ಸುದ್ದಿಗಳು

Related Articles