Saturday, October 5, 2024

Poultry farm:ಕೋಳಿ ಸಾಕಾಣಿಕೆಗೆ ? ಯಾವೆಲ್ಲ ಅನುಮತಿ ಪಡೆಯಬೇಕು? ಸರ್ಕಾರದ ಸಹಾಯಧನದ ಯೋಜನೆಗಳು?

Poutry farm:ಕೋಳಿ ಸಾಕಾಣಿಕೆಗೆ ? ಯಾವೆಲ್ಲ ಅನುಮತಿ ಪಡೆಯಬೇಕು? ಸರ್ಕಾರದ ಸಹಾಯಧನದ ಯೋಜನೆಗಳು?

ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಇತ್ತೀಚಿಗೆ ದಶಕಗಳಲ್ಲಿ ಕೋಳಿ ಸಾಕಾಣಿಕೆ ಒಂದು ಕೈಗಾರಿಕೋದ್ಯಮವಾಗಿ ಬೆಳೆಯುತ್ತಿದೆ. ಒಂದು ಅಂದಾಜಿನ ಪ್ರಕಾರ 11 ಲಕ್ಷಕ್ಕೂ ಹೆಚ್ಚು ಜನ ಕೋಳಿ ಸಾಕಾಣಿಕೆ ಉದ್ಯಮದ ಮೇಲೆ ಅವಲಂಬಿಸಿದ್ದಾರೆ.ಕೋಳಿಗಳು ಕಡಿಮೆ ಆಹಾರ ಹಗೂ ವರ್ಜಿತ ಪದಾರ್ಥಗಳನ್ನು ತಿಂದು ನಮಗೆ ಉತ್ತಮ ಪ್ರಾಣಿಜನ್ಯ ಪ್ರೋಟಿನ್ ಗಳನ್ನು ಒದಗಿಸುತ್ತವೆ. ಕೋಳಿ ಗಾತ್ರದಲ್ಲಿ ಸಣ್ಣದಿದ್ದು ತಿನ್ನುವ ಆಹಾರ ಕಡಿಮೆ,ಅದಕ್ಕೆ ಬೇಕಾಗುವ ಸ್ಥಳವಕಾಶ ಸ್ವಲ್ಪ, ಕೋಳಿ ಸಾಕಣಿಕೆ ಸುಲಭ,ಶ್ರಮ ಕಡಿಮೆ,ಲಾಭ,ಹೆಚ್ಚು,ಕೇವಲ ಬೆರೆಳೆಣಿಕೆ ದಿನಗಳಲ್ಲಿ ಲಾಭವನ್ನು ಪಡೆಯಬಹುದಾಗಿದೆ.

ಕೋಳಿ ಸಾಕಾಣಿಕೆಗೆ(poultry farm) ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲ ಅನುಮತಿ ಪಡೆಯಬೇಕು? ಪಡೆಯುವ ವಿಧಾನ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದರ ಜೊತೆ ಕೋಳಿ ಸಾಕಾಣಿಕೆ ಆರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದ ವಿವರ ಮತ್ತು ಸಹಾಯಧನ ಯೋಜನೆಗಳ (Poutry farm loan)ಮಾಹಿತಿಯನ್ನು ತಿಳಿಸಲಾಗಿದೆ.


ಗ್ರಾಮೀಣ ಭಾಗದಲ್ಲಿ ರೈತಾಪಿ ಕುಟುಂಬದವರು ಒಂದೇ ಆದಾಯ ಮೂಲವನ್ನು ನಂಬಿಕೊಳ್ಳದೇ ಕೃಷಿ ಜೊತೆಯಲ್ಲಿ ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆ, ಜೇನು ಕೃಷಿ, ಮೀನುಗಾರಿಕೆ ಹೀಗೆ ಉಪಕಸಬುಗಳನ್ನು ಸಹ ಅಳವಡಿಕೆ ಮಾಡಿಕೊಂಡಲ್ಲಿ ರೈತರು ಉತ್ತಮ ಆದಾಯವನ್ನು ಪಡೆಯಬಹುದು.

ಇದನ್ನೂ ಓದಿ: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

ಈ ಕೆಳಗೆ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆಗೆ(poultry farm) ಪಾರ್ಮ್ ಅನ್ನು ನಿರ್ಮಾಣ ಮಾಡಲು ಯಾವೆಲ್ಲ ಅನುಮತಿ ಪಡೆಯಬೇಕು? ಪಡೆಯುವ ವಿಧಾನ ಇತ್ಯಾದಿ ಮಾಹಿತಿಯನ್ನು ವಿವರಿಸಿದ್ದೇವೆ, ಇದರ ಜೊತೆ ಕೋಳಿ ಸಾಕಾಣಿಕೆ ಆರಂಭಿಸಲು ತರಬೇತಿ ಪಡೆಯಲು ನಮ್ಮ ರಾಜ್ಯದಲ್ಲಿ ಇರುವ ಕೋಳಿ ಸಾಕಾಣಿಕೆ ಕೇಂದ್ರದ ವಿವರ ಮತ್ತು ಸಬ್ಸಿಡಿ ಯೋಜನೆಗಳ ಮಾಹಿತಿಯನ್ನು ತಿಳಿಸಲಾಗಿದೆ.

ಪ್ರಶ್ನೆ-1: ಗ್ರಾಮಾಂತರ ಪ್ರದೇಶದಲ್ಲಿ ಕೋಳಿ ಫಾರಂ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯಿಂದ ಕಟ್ಟಡ ಪರವಾನಿಗೆ ನೀಡಲು ಜಮೀನಿನ ಭೂಪರಿವರ್ತನೆ ಅವಶ್ಯಕತೆ ಇದೆಯೇ?

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಪ್ರಕರಣ 2(ಎ)(ಡಿ) ಮತ್ತು ಪ್ರಕರಣ 81 ರಡಿ ಕೋಳಿ ಫಾರಂಗಳು (ಕೋಳಿ ಸಾಕಾಣಿಕೆ) ಕೃಷಿ ಕಸುಬಾಗಿ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶದ ವ್ಯಾಪ್ತಿಗೆ ಒಳಪಡುವ ಕೋಳಿ ಫಾರಂ ಕಟ್ಟಡವನ್ನು ನಿರ್ಮಿಸಲು ಭೂ ಪರಿವರ್ತನೆ ಅಗತ್ಯವಿರುವುದಿಲ್ಲ.

ಪ್ರಶ್ನೆ-2: ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಾದ ಇನ್ನಿತರ ದಾಖಲಾತಿಗಳು ಯಾವುವು?

ಕಟ್ಟಡ ಪರವಾನಿಗೆ ಪಡೆಯಲು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್.ಓ.ಸಿ, ತಹಶೀಲ್ದಾರ ರವರಿಂದ ನಿರಾಕ್ಷೇಪಣಾ ಪತ್ರ ಮತ್ತು ಪಹಣಿ ನೀಡಬೇಕಾಗಿರುತ್ತದೆ.

ಪ್ರಶ್ನೆ-3: ಕೋಳಿ ಫಾರಂಗೆ ಸಂಬಂಧಪಟ್ಟಂತೆ ಉದ್ಯಮ ಪರವಾನಿಗೆ ನೀಡುವ ಪ್ರಾಧಿಕಾರ ಯಾವುವು?

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 64 ರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ವಿಧವಾದ ಕಟ್ಟಡವನ್ನು ನಿರ್ಮಿಸಲು ಗ್ರಾಮ ಪಂಚಾಯತಿಯಿಂದ ಅನುಮತಿಯನ್ನು ಪಡೆಯಬೇಕಾಗಿರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶುಸಂಗೋಪನೆ ಇಲಾಖೆಯ ವಿಧಿಸುವ ಷರತ್ತುಗಳನ್ನು ಪಾಲಿಸುವ ನಿಬಂಧನೆಗೊಳಪಟ್ಟು ಗ್ರಾಮ ಪಂಚಾಯತಿಯ ಪರವಾನಿಗೆ ನೀಡಲು ಸಕ್ಷಮ ಪ್ರಾಧಿಕಾರವಾಗಿರುತ್ತದೆ.

ಪ್ರಶ್ನೆ-4: ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹಾಗೂ ಗ್ರಾಮ ಪಂಚಾಯತಿಗೆ ಒದಗಿಸಬೇಕಾದ ದಾಖಲೆಗಳ ಯಾವುವು?

ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಹಶೀಲ್ದಾರ ರವರಿಂದ ನಿರಾಕ್ಷೇಪಣಾ ಪತ್ರ,
ಪಹಣಿ,(RTC)
ಕಟ್ಟಡ ಅನುಮತಿ ಪತ್ರ ಮತ್ತು ಕಂದಾಯ ರಶೀದಿ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

National Livestock Mission-ಕೋಳಿ ಸಾಕಾಣಿಕೆಗೆ ಆರಂಭಿಸಲು ಸಹಾಯಧನ (Poutry farm loan schemes):


ಈ ಯೋಜನೆ ವರದಿ ತಯಾರಿಕೆ ಆಧಾರದ ಮೇಲೆ ಕೋಳಿ ಸಾಕಾಣಿಕೆಗೆ ಸಾಲ ಮತ್ತು ಸಹಾಯಧನವನ್ನು ಪಡೆಯಬವುದು ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಪಶು ಸಂಗೋಪನೆ ಸಹಾಯಕ ನಿರ್ದೇಶಕರನ್ನು ಕಛೇರಿಯನ್ನು ಸಂಪರ್ಕಿಸಿ.

ಕೋಳಿ ಸಾಕಾಣಿಕೆ ಮಾಡಲು ಆಸಕ್ತಿಯಿರುವ ಗ್ರಾಮೀಣ ಭಾಗದ ಯುವಕ- ಯುವತಿಯರು AgriClinic or Agri Business(ACABC) ಯೋಜನೆಯಡಿ 2 ತಿಂಗಳ ತರಬೇತಿ ಪಡೆದು ಶೇ 35 ಕ್ಕಿಂತ ಹೆಚ್ಚಿನ ಸಹಾಯಧನದಲ್ಲಿ ಬ್ಯಾಂಕ್ ಸಾಲ ಸಹಿತ ಕೋಳಿ ಸಾಕಾಣಿಕೆಯನ್ನು ಮಾಡಬವುದು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವೆಬ್ಬೆಟ್ ಭೇಟಿ ಮಾಡಿ:
ಹೆಚ್ಚಿನ ಮಾಹಿತಿಗಾಗಿ ಈ ಇಲ್ಲಿ ಕ್ಲಿಕ್ ಮಾಡಿ
https://www.agriclinics.net/

ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಕುರಿತು ತರಬೇತಿ ನೀಡುವ ಕೇಂದ್ರಗಳ ವಿವರ:
ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ವಿಜಯಪುರ. ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ರಾಯಚೂರು. ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಕೋಲಾರ. ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ದಕ್ಷಿಣ ಕನ್ನಡ. ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ, ಉತ್ತರ ಕನ್ನಡ,

ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ

ಇನ್ನು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ: 8277100200

ಇತ್ತೀಚಿನ ಸುದ್ದಿಗಳು

Related Articles