Friday, September 20, 2024

ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ಕೃಷಿ ಉಪಕರಣಕ್ಕೆ NOC(ನೀರಾಕ್ಷೇಪಣಾ ಪತ್ರ) ಪಡೆಯುವುದು ಹೇಗೆ? ಅದರ ಅವಶ್ಯಕತೆ ಏನು?

ಆತ್ಮೀಯ ರೈತ ಬಾಂದವರೇ ನೀವು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ತುಂತುರು ನೀರಾವರಿ ಘಟಕ ಮತ್ತು ಇತರೆ ಉಪಕರಣ ಪಡೆಯಲು ಅತಿ ಮುಖ್ಯವಾಗಿ NOC(ನೀರಾಕ್ಷೇಪಣಾ ಪತ್ರ) ಬಹಳ ಮುಖ್ಯವಾಗಿರುತ್ತದೆ. ಹಾಗಿದ್ದರೆ ಈ ಪತ್ರ ಪಡೆಯುವುದು ಹೇಗೆ? ಈ ಪತ್ರ ಪಡೆಯಲು ದಾಖಲೆಗಳು ಏನುಬೇಕು? ಪಡೆಯುವ ಪ್ರಕ್ರಿಯೆ ಹೇಗೇ?ಯಾವ ಯಾವ ಇಲಾಖೆಯಿಂದ ತೆಗೆದುಕೊಳ್ಳುವುದು? ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ

ಮೊದಲು ನೀರಾಕ್ಷೇಪಣಾ ಪತ್ರ ಎಂದರೇನೂ? ತಿಳಿಯುವ

No Objection certificate,ಯಾವುದೇ ಅಕ್ಷೇಪಣೆ ಇಲ್ಲ ಎಂದು ಸ್ಥಾಪಿಸುವುದರ ಜೊತೆಗೆ NOCಯನ್ನು ಸಹ ನ್ಯಾಯಾಲಯದಲ್ಲಿ ಹಾಜರು ಪಡಿಸಬಹುದು ಮತ್ತು ನೀವು ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ನಿಮ್ಮ ಮುಗ್ದತೆಯನ್ನು ಸಾಬೀತುಪಡಿಸಲು ಈ ನೀರಾಕ್ಷೇಪಣಾ ಪತ್ರವನ್ನು ಬಳಸಬಹುದು.

ಬೇಕಾದ ದಾಖಲೆಗಳು?

ರೈತನ ಜಮೀನಿನ ಪಹಣಿ ಪತ್ರ
ರೈತರ ನೋಂದಣಿ ಸಂಖ್ಯೆ
ಆಧಾರ ಕಾರ್ಡ ಪ್ರತಿ
ಅರ್ಜಿ ನಮೂನೆ

ಇದನ್ನೂ ಓದಿ: ರೈತರ ಆತ್ಮಹತ್ಯೆ ಪತ್ನಿಗೆ ವಿಧವಾ ವೇತನ,ವೃದಾಪ್ಯ ವೇತನ, ವಿವಿಧ ಸಹಾಯಧನ ಪಡೆಯುವ ಹೊಸ ಅರ್ಜಿಗೆ ಅವಕಾಶವಿಲ್ಲ, ಯಾಕೆ, ಕಾರಣವೇನು?

ನೀರಾಕ್ಷೇಪಣಾ ಪತ್ರ ಪಡೆಯುವ ಪ್ರಕ್ರಿಯೆ ಹೇಗೇ?


ಮೊದಲು ರೈತರು ತಮ್ಮ ತಾಲೂಕಿನ ಹೋಬಳಿ ಮಟ್ಟದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅರ್ಜಿ ಭರ್ತಿ ಮಾಡಿ ಜೊತೆಗೆ ಮೇಲೆ ಕಾಣಿಸಿರುವ ದಾಖಲೆಗಳನ್ನು ನೀಡಬೇಕು
ನಂತರ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಪರಿಶೀಲನೆಯನ್ನು ಮಾಡಿ ಇಲಾಖೆಯ ತಾಲೂಕು ಹಿರಿಯ ಅಧಿಕಾರಿಗಳು ಅಂದರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಮತ್ತು ತೋಟಗಾರಿಕೆಯ ನಿರ್ದೇಶಕರು ಪರಿಶೀಲನೆಯನ್ನು ಮಾಡುತ್ತಾರೆ.

ಪರಿಶೀಲನೆಯಲ್ಲಿ ರೈತರು ಹಿಂದಿನ ವರ್ಷಗಳಲ್ಲಿ ಉಪಕರಣವನ್ನು ಪಡೆದಿದ್ದರೆ ಇಂತಿಷ್ಟು ಕಾಲಾವಕಾಶಗಳ ಅವಧಿಯಲ್ಲಿ ಪುನಃ ಅದೇ ಉಪಕರಣವನ್ನು ಪಡೆಯಲು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಅವಕಾಶವಿರುವುದಿಲ್ಲ. ಆ ಎಲ್ಲಾ ಹಂತದಲ್ಲೂ ಅಧಿಕಾರಿಗಳು ಪರಿಶೀಲನೆಯನ್ನೂ ಮಾಡಿಕೊಂಡು ಅಧಿಕಾರಿಗಳು ಈ ಪತ್ರವನ್ನು ನೀಡುತ್ತಾರೆ.

ವಿಶೇಷ ಮಾಹಿತಿ: ರೈತರು ತುಂತುರು ನೀರಾವರಿ ಘಟಕ ಪಡೆಯಲು ಏಳು ವರ್ಷದ ಒಳಗಾಗಿ ಪುನಃ ಅದೇ ಉಪಕರಣ ಪಡೆಯಲು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅವಕಾಶವಿರುವುದಿಲ್ಲ.


ತೋಟಗಾರಿಕೆ ಇಲಾಖೆಯಿಂದ ತುಂತುರು ನೀರಾವರಿ ಘಟಕ ಪಡೆಯಲು ಕೃಷಿ ಇಲಾಖೆಯಿಂದ NOC(ನೀರಾಕ್ಷೇಪಣಾ ಪತ್ರ) ಪಡೆಯಬೇಕು.

ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಘಟಕ ಪಡೆಯಲು ತೋಟಗಾರಿಕೆ ಇಲಾಖೆಯಿಂದ NOC(ನೀರಾಕ್ಷೇಪಣಾ ಪತ್ರ) ಪಡೆಯಬೇಕು

ಇದನ್ನೂ ಓದಿ: ತೋಟಗಾರಿಕೆ ವಿವಿಧ ಬೆಳೆಗಳಲ್ಲಿ ರೋಗ ನಿವಾರಕವಾದ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಹೆಚ್ಚಿನ ಮಾಹಿತಿಗಾಗಿ: ನಿಮ್ಮ ತಾಲೂಕಿನ ಅಥವಾ ಹೋಬಳಿ ಮಟ್ಟದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles