Thursday, November 21, 2024

How to check FID-ರೈತರ ನೋಂದಣಿ(FID) ಆಗಿದೆಯೇ ಇಲ್ಲವೇ ತಿಳಿಯಲು ಇಲ್ಲಿದೆ ಮಾಹಿತಿ!

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸೌಲಭ್ಯಗಳು ಪಡೆಯಬೇಕೆಂದರೆ ಕಡ್ಡಾಯವಾಗಿ ರೈತರ ನೋಂದಣಿ (FID) ಮಾಡಿಸಬೇಕು. ಈ ರೈತರ ನೋಂದಣಿ (FID) ಆಗಿದೆಯೇ ಇಲ್ಲವೇ ತಿಳಿಯಲು ಇಲ್ಲಿದೆ ಮಾಹಿತಿ!

ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಸೌಲಭ್ಯಗಳು, ಕೃಷಿ ಸಾಲ, ಬೆಳೆ ವಿಮೆ ಪರಿಹಾರ ಹಾಗೂ ಇನ್ನಿತರ ಸೌಲಭ್ಯಗಳಿಗೆ ರೈತರ ನೋಂದಣಿ (FID) ಮಾಡಿಸುವುದು ಕಡ್ಡಾಯ ಮಾಡಲಾಗಿದೆ ಈ ರೈತರ ನೋಂದಣಿ ಎಲ್ಲಿ ಮಾಡಿಸಬೇಕು ಮತ್ತು ಅದನ್ನೂ ಆನ್ಲೈನ್‌ ನಲ್ಲಿ ನೋಡುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಈ ಒಂದು ರೈತರ ನೋಂದಣಿ (FID) ಕಾರ್ಯವನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಯ ಮೂಲಕ ಮಾಡಲಾಗುತ್ತಿತ್ತು. ಈಗ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಹಾಗೂ ನಾಗರೀಕ ಸೇವಾ ಸಿಂಧು, ಗ್ರಾಮ ಒನ್‌, ಕರ್ನಾಟಕ ಒನ್‌ ಸೈಬರ್‌ ಗಳಲ್ಲಿ ಈ ರೈತರ ನೋಂದಣಿ (FID) ಮಾಡಿಸಬಹುದು.

ಇದನ್ನೂ ಓದಿ: ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಕೃಷಿಕರಿಗೆ ಲಕ್ಷದವರೆಗೂ ಸಹಾಯಧನ.

ರೈತರ ನೋಂದಣಿಯ(FID) ಉಪಯೋಗಗಳು:

1)ಕೃಷಿ ಮತ್ತು ತೋಟಗಾರಿಕೆ ಸೌಲಭ್ಯ ಪಡೆಯಲು ಕಡ್ಡಾಯ.

2)ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಮೆ ಮಾಡಲು ಬೇಕು.

3)ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಪರಿಹಾರ ಪಡೆಯಲು.

4)ಕೃಷಿ ಪತ್ತಿನ ಬ್ಯಾಂಕ್‌ ಹಾಗೂ ರಾಷ್ರ್ಟೀಕೃತ ಬ್ಯಾಂಕಗಳಲ್ಲಿ ಕೃಷಿ ಸಾಲಕ್ಕೆ ಬೇಕು.

5)ಬೆಳೆ ವಿಮೆ ಪರಿಹಾರ ಪಡೆಯಲು.

6)ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಹಣ ಪಡೆಯಲು ಬೇಕು.

 ರೈತರ ನೋಂದಣಿ(FID) ಆಗಿದೆಯೇ ಇಲ್ಲವೇ ತಿಳಿಯಬೇಕೇ?ಹೀಗೆ ಮಾಡಿ.

ಮೊದಲಿಗೆ ಇಲ್ಲಿ ನೀಡಲಾದ (FRUITS-FID) ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನಿಮಗೆ ರಾಜ್ಯ ಸರಕಾರದ FRUITS-PMKISAN ಪೋರ್ಟಲ್‌ ತೆರೆದುಕೊಳ್ಳುತ್ತದೆ.

ವಿಧಾನ-1: FRUITS-PMKISAN ಪೋರ್ಟಲ್‌ ತೆರೆದುಕೊಂಡ ನಂತರ GET DEATAILS BY AADHAR ಮೇಲೆ ಕ್ಲಿಕ್‌ ಮಾಡಿ.

ವಿಧಾನ-2:ನಂತರ ನಿಮಗೆ ನಿಮ್ಮ ಆಧಾರ್‌ ಸಂಖ್ಯೆ ನಮೂದಿಸಿ search ಕೊಡಬೇಕು.

ವಿಧಾನ-3:ನಂತರ ನಿಮಗೆ ಅಲ್ಲಿ FRUITS-FID, PMKISAN FID, ಮತ್ತು ನಿಮ್ಮ ಹೆಸರು ಕಾಣಿಸುತ್ತದೆ.

ವಿಧಾನ-4:ನಿಮಗೆ ನಿಮ್ಮ FRUITS-FIDಗೆ ಪಹಣಿ/RTC ಲಿಂಕ್‌ ಆಗಿದೆಯೇ ಇಲ್ಲವೇ ಎಂದು ತಿಳಿಯಲು ನಿಮ್ಮ ಹತ್ತಿರದ ಕೃಷಿ ಇಲಾಖೆ ಕಛೇರಿಗಳಿಗೆ ಭೇಟಿ ಮಾಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ:ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು APP ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೇ ಮಾಡಿಕೊಳ್ಳಿ.

FRUITS-FIDಗೆ ಪಹಣಿ/RTC ಗಳನ್ನು ಲಿಂಕ್‌ ಮಾಡಲು ಏನು ಮಾಡಬೇಕು?

ನಿಮ್ಮ FRUITS-FID ಆಗಿದ್ದರೂ  ಸರ್ವೇ ನಂಬರಗಳನ್ನು ಸೇರಿಸಲು ಬಾಕಿ ಆಗಿದ್ದರೇ ನೀವು ನಿಮ್ಮ ಎಲ್ಲಾ RTC ಗಳನ್ನು ತೆಗೆದುಕೊಂಡು ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಸರ್ವೇ ನಂಬರಗಳನ್ನು ಲಿಂಕ್‌ ಮಾಡಿಸಬಹುದು.

ಇತ್ತೀಚಿನ ಸುದ್ದಿಗಳು

Related Articles