Friday, September 20, 2024

ಆಧಾರ್‍ ಕಾರ್ಡನಲ್ಲಿ ಪೋಟೋ ಬದಲಾವಣೆ ಮಾಡಬೇಕೇ ? ಹಾಗಿದ್ದರೆ ಈ ಲೇಖನದಿಂದ ತಿಳಿಯಿರಿ.

ಆತ್ಮೀಯ ಸ್ನೇಹಿತರೆ ಇತ್ತಿಚೀನ ದಿನಗಳಲ್ಲಿ ಎಲ್ಲಾ ಸೇವೇಗಳಲ್ಲಿ ಬಹಳ ಅವಶ್ಯಕ ದಾಖಲೆಯಾಗಿ ಮಾರ್ಪಟ್ಟಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಿಸುವ ಕೆಲಸ ಮಾಡುತ್ತದೆ. ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಅನೇಕ ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯವಾದ ದಾಖಲೆಯಾಗಿದೆ.

ಇದನ್ನೂ ಓದಿ:ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ

ಆಧಾರ್ ಕಾರ್ಡ್ ನಲ್ಲಿ ಅಭ್ಯರ್ಥಿಯ ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಮುಂತಾದ ಮಾಹಿತಿಗಳು ಒಳಗೊಂಡಿರುತ್ತದೆ. ಆಧಾರ್ ಸಂಖ್ಯೆಯು ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್ ಜೊತೆಗೆ ಕೂಡ ಲಿಂಕ್ ಮಾಡುವುದು ಕೆಲವು ದಿನಗಳ ಹಿಂದೆ ಕಡ್ಡಾಯಗೊಳಿಸಲಾಗಿದೆ. ಇದರಿಂದ ಆಧಾರ್ ಕಾರ್ಡ್ ಬಳಸಿ ವಿವಿಧ ಸೇವೆಗಳು ಹಾಗೂ ಪ್ರಯೋಜನಗಳನ್ನು ಪಡೆಯೋದು ಸುಲಭವಾಗಲಿದೆ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ಲ, ಅದನ್ನು ಬದಲಾಯಿಸಬೇಕು ಎಂದು ನಿಮಗೆ ಅನಿಸಿದರೆ ಅದನ್ನು ಬದಲಾಯಿಸೋದು ಹೇಗೆ? ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್ ಮಾಡ್ಬಹುದು?


ಹೆಸರು, ವಿಳಾಸ, ಜನ್ಮದಿನಾಂಕ, ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಸಂಬಂಧದ ಸ್ಟೇಟಸ್ ಅನ್ನು ಅಪ್ಡೇಟ್ ಮಾಡಬಹುದು. ಹಾಗೆಯೇ ಕಣ್ರೆಪ್ಪೆ, ಬೆರಳಚ್ಚು ಹಾಗೂ ಮುಖದ ಫೋಟೋ ಕೂಡ ಅಪ್ಲೋಡ್ ಮಾಡಬಹುದಾಗಿರುತ್ತೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮ್ಮ ಸ್ನೇಹಿತರಿಗೂ ಕಳುಹಿಸಿ.

ಇದನ್ನೂ ಓದಿ: ಕರ್ನಾಟಕ ರಾಜ್ಯದ ನಿವಾಸಿ ದೃಡೀಕರಣ ಪಡೆಯುವುದು ಹೇಗೆ?.

ಅಪ್ಡೇಟ್ ಮಾಡೋದು ಹೇಗೆ ತಿಳಿಯಿರಿ:


ಎರಡು ಹಂತದಲ್ಲಿ ನಾವು ಆಧಾರ್‍ ಕಾರ್ಡನಲ್ಲಿ ಅಪ್ಡೇಟ್ ಮಾಡಬಹುದು.
ಒಂದು ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟನೀಡುವ ಮೂಲಕ ಈ ಕೆಲಸ ಮಾಡಬಹುದು. uidai.gov.in ವೆಬ್ ಸೈಟ್ ನಲ್ಲಿ ‘Locate an Enrolment Center’ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಗಳನ್ನು ಪತ್ತೆ ಮಾಡಬಹುದಾಗಿರುತ್ತದೆ.

ಎರಡೆನೇ ಹಂತ : myAadhaar ಅಪ್ಲಿಕೇಷನ್ ಬಳಸಿ ಕೂಡ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು.

ಫೋಟೋ ಬದಲಾಯಿಸೋದು ಹೇಗೆ?


ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾಯಿಸಲು ನೀವು ಸಮೀಪದ ಆಧಾರ್ ಸೇವಾ ಅಥವಾ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಈ ಮೇಲೆ ವಿವರಿಸಿದಂತೆ https://appointments.uidai.gov.in ವೆಬ್ ಸೈಟ್ ನಲ್ಲಿ ನೀವು ಸಮೀಪದ ಆಧಾರ್ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು

ಮೊದಲೆ ಹಂತ : ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿ.
ನೋಂದಣಿ ಕೇಂದ್ರಕ್ಕೆ ಸಲ್ಲಿಕೆ ಮಾಡಬೇಕು.

ಎರಡನೆ ಹಂತ: ಈ ಕೇಂದ್ರದಲ್ಲಿರುವ ನಿರ್ವಾಹಕರು ನೀವು ನೀಡಿರುವ ಅರ್ಜಿಯಲ್ಲಿರುವ ಮಾಹಿತಿ ಅನ್ವಯ ಬಯೋಮೆಟ್ರಿಕ್ ಮಾಹಿತಿಗಳನ್ನು ಪರಿಶೀಲನೆ ಮಾಡುತ್ತಾರೆ.

ಮೂರನೇ ಹಂತ: ನೀವು ಈ ಅರ್ಜಿಯಲ್ಲಿ ಫೋಟೋ ಬದಲಾವಣೆ ಬಗ್ಗೆ ಮಾಹಿತಿಯನ್ನು ಭರ್ತಿ ಮಾಡಿದ್ದರೆ ನಿರ್ವಾಹಕರು ನಿಮ್ಮ ಫೋಟೋ ತೆಗೆಯುತ್ತಾರೆ.

ನಾಲ್ಕನೆ ಹಂತ: ಅಪ್ಡೇಟ್ ಮನವಿ ಸಂಖ್ಯೆ (URN) ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ರೆಫರೆನ್ಸ್ ಗಾಗಿ ಸೃಷ್ಟಿಸಲಾಗುತ್ತದೆ.

ಇದನ್ನೂ ಓದಿ: ಪಾನ್ ಕಾರ್ಡ ಗೆ ಆಧಾರ್‍ ಕಾರ್ಡ ಲಿಂಕ್ ಅಗಿರುವುದನ್ನು ಚೆಕ್ ಮಾಡುವುದು ಹೇಗೇ ? ನಿಮ್ಮ ಮೊಬೈಲ್ ಚೆಕ್ ಮಾಡಿಕೊಳ್ಳಿ.

ಫೋಟೋ ಅಪ್ಡೇಟ್ ಮಾಡಿದ ಬಳಿಕ ನೀವು ಆಧಾರ್ ಕಾರ್ಡ್ ಡಿಜಿಟಲ್ (ಇ-ಆಧಾರ್) ಪ್ರತಿಯನ್ನು UIDAI ಅಧಿಕೃತ ವೆಬ್ ಸೈಟ್ uidai.gov.in ಇಲ್ಲಿಂದ ಡೌನ್ಲೋಡ್ ಮಾಡಬಹುದು.

ಆಧಾರ್ ಕಾರ್ಡ್ ನಲ್ಲಿ ಕೆಲವು ಮಾಹಿತಿಗಳನ್ನು ಆನ್ ಲೈನ್ ನಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಫೋಟೋ ಬದಲಾವಣೆ ಮಾಡಲು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದು ಬಹಳ ಒಳ್ಳೆಯದು.

ಇತ್ತೀಚಿನ ಸುದ್ದಿಗಳು

Related Articles