ಆತ್ಮೀಯರೇ, ಹೊಸ ಹೊಸ ಉದ್ಯಮ ಮಾಡಲು ಬಯಸುವ ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಹಾಗೂ ನೋಂದಣಿಯಾದ ಸಂಘ ಸಂಸ್ಥೆಗಳಿಗೆ ಮತ್ತು ಅಂಗವಿಕಲರಿಗೆ ಇಲ್ಲಿದೆ ಸುವರ್ಣ ಅವಕಾಶ. ಈ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಿ…
ಹೊಸ ಪಡಿತರ ಮಳಿಗೆ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸ ಬೇಕಾಗಿ ಕರೆ ನೀಡಲಾಗಿದ್ದು.
ಅರ್ಜಿ ಆಹ್ವಾನಿಸಿದ ಸ್ಥಳ:
ಕಲಬುರಗಿ ಆಳಂದ ತಾಲೂಕಿನ ಝಲ್ಕಿ ಗ್ರಾಮಕ್ಕೆ ಹೊಸದಾಗಿ ಪಡಿತರ ಮಳಿಗೆ ಮಂಜೂರು ಮಾಡಲಾಗಿದ್ದು, ಡೀಲರಿಪ್ ಪಡೆಯಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ
ಅರ್ಜಿ ಸಲ್ಲಿಸಲು ಅರ್ಹತೆಗಳು :
- ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು
- ಮಹಿಳಾ ಸ್ವ-ಸಹಾಯ ಗುಂಪುಗಳು, ವೈಯಕ್ತಿಕವಾಗಿ ಅಂಗವಿಕಲರು ಹಾಗೂ ತೃತೀಯ ಲಿಂಗಿಗಳು
- ನಗರ ಸ್ಥಳೀಯ ಸಂಸ್ಥೆಗಳು, ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ನಿ), ಕಂಪನಿಗಳು ಅಥವಾ ಗ್ರಾಮ ಪಂಚಾಯತ್
- ತೋಟಗಾರಿಕೆಯ ಉತ್ಪಾದಕರ ಸಹಕಾರ ಮಾರ್ಕೆಟಿಂಗ್ ಮತ್ತು ಸಂಸ್ಕರಣೆ ಸಂಘ ನಿಯಮಿತ (ಹಾಪಕಾಮ್ಸ್), ನೋಂದಾಯಿತ ಸಹಕಾರಿ ಸಂಘಗಳು
- ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘಗಳು, ಲ್ಯಾಂಪ್ಸ್ ಸಹಕಾರಿ ಸಂಘಗಳು (ಬೃಹತ್ ಗ್ರಾಹಕ ಆದಿವಾಸಿ ವಿವಿದೋದ್ದೇಶ ಸಂಘ)
- ನೋಂದಾಯಿತ ನೇಕಾರರ ಸಹಕಾರಿ ಸಂಘ, ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ವ್ಯವಸಾಯ ಸೇವಾ ಸಹಕಾರಿ ಸಂಘ
*ವಿವಿಧೋದ್ದೇಶ ಸಹಕಾರಿ ಸಂಘ, ವಿಕಲಚೇತನ ಕಲ್ಯಾಣ ಸಹಕಾರಿ ಸಂಘ, ಸಹಕಾರಿ ಸಂಘಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್‌ಗಳು, ಸ್ಥಳೀಯ ಸ್ತ್ರೀಶಕ್ತಿ ಗುಂಪುಗಳು, ಈ ಮೇಲೆ ತಿಳಿಸಿರುವಂತೆ ಎಲ್ಲಾ ಅರ್ಹತೆಗಳನ್ನು ಒಳಗೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
ನಿಗದಿತ ನಮೂನೆ-(ಎ)ರಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ದ್ವಿಪ್ರತಿಯಲ್ಲಿ ಸಂಬಂದ ಪಟ್ಟ ಭೌತಿಕ ದಾಖಲಾತಿಗಳೊಂದಿಗೆ
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ಸಹಾಯಕ ನಿರ್ದೇಶಕರು, ಜಿಲ್ಲಾಡಳಿತ ಭವನ, ಇಲ್ಲಿ ನಿಗದಿತ ನಮೂನೆ ಎ ರಲ್ಲಿ ನಿಗದಿಪಡಿಸಿರುವ ದಾಖಲೆಗಳನ್ನು ಆ ಅರ್ಜಿಯೊಂದಿಗೆ ಭೌತಿಕ ಮಾಹಿತಿಯೊಂದಿಗೆ ಇಲ್ಲಿ ಸೂಚಿಸಿರುವ ಕಛೇರಿಗೆ ನಿಮ್ಮ ಅರ್ಜಿಯನ್ನು ಲಗತ್ತಿಸಿರಿ.
ಇದನ್ನೂ ಓದಿ: ರೈತರಿಗೊಂದು ಸಿಹಿಸುದ್ದಿ! ಪಿತ್ರಾರ್ಜಿತ ಹೆಸರಿನಲ್ಲಿರುವ ಆಸ್ತಿಯನ್ನು ವರ್ಗಾವಣೆ ಹೇಗೆ??
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಇದೆ ತಿಂಗಳ 31 ಮಾರ್ಚ್ 2023-24 ರೊಳಗೆ ಅರ್ಜಿಯನ್ನು ಸಲ್ಲಿಸಿ.
ಈ ಒಂದು ವಿಷಯಕ್ಕೆ ಸಂಬಂದಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಹಶೀಲ್ದಾರರ ಕಚೇರಿಯನ್ನು ಸಂಪರ್ಕಿಸಿ.