Tuesday, July 1, 2025

ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ…

ಆತ್ಮೀಯ ರೈತ ಬಾಂಧವರೆ ಮುಂದಿನ ದಿನಗಳಲ್ಲಿ ಕೃಷಿ ಚಟುಟಿಕೆಗಳನ್ನು ಕೈಗೊಳ್ಳಲು ಹವಾಮಾನ ವರದಿ ರೈತಾಪಿ ವರ್ಗದವರಿಗೆ ಬಹಳ ಮುಖ್ಯವಾದ ಮಾಹಿತಿಯಾಗಿರುತ್ತದೆ. ಹಾಗಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳವ ಮುನ್ನ ರಾಜ್ಯದ ರೈತರು ದಿನ ನಿತ್ಯದ ಹವಾಮಾನ ವರದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ..


ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಏಪ್ರಿಲ್ 18ರಿಂದ ಏಪ್ರಿಲ್ 22 ವರೆಗೆ ಮಳೆ ಬೀಳುವ ಸಾಧ್ಯತೆ ಇದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಮೈಸೂರು ಮತ್ತು ತುಮಕೂರಿನಲ್ಲಿ ಏಪ್ರಿಲ್ 21ರಿಂದ ಮುಂದಿನ ಎರಡು ದಿನ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಬೇಸಿಗೆಯ ಬಿಸಿಲಿನಲ್ಲಿ ಜಾನುವಾರಗಳ ಆರೋಗ್ಯ ದೃಷ್ಟಿಯಿಂದ ತಪ್ಪದೇ ಈ ರೀತಿ ಮಾಡಿ.

ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ದಾಖಲಾಗಿದೆ ಎಂದು ತಿಳಿಯಿರಿ..


ಸೋಮವಾರ ದಿನಾಂಕ 17.04.2023 ರಂದು
ಕಲಬುರ್ಗಿ 40.7
ರಾಯಚೂರು 40
ಗದಗ 38.7
ವಿಜಯಪುರ 38
ಚಿತ್ರದುರ್ಗ ಮತ್ತು ಧಾರವಾಡದಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ : ಬೆಳೆಗಳು ಸಮೃದ್ದಿಯಾಗಿ ಬೆಳೆದು ಇಳುವರಿ ಹೆಚ್ಚಿಸಲು ಹಸಿರೆಲೆ ಗೊಬ್ಬರದ‌ ಪಾತ್ರ, ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹೇಗೇ??

ಇತ್ತೀಚಿನ ಸುದ್ದಿಗಳು

Related Articles