ಆತ್ಮೀಯ ರೈತ ಬಾಂದವರೇ ರೈತರ ಹಕ್ಕು ಪತ್ರ ಅರ್ಜಿ ವಿಲೇವಾರಿಯು ಕಳೆದ ಹಲವು ವರ್ಷಗಳಿಂದ ಹಾಗೆಯೇ ಉಳಿದ್ದು ಈ ಅರ್ಜಿಯ ವಿಲೇವಾರಿ ಕುರಿತು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಮಹತ್ವದ ಮಾಹಿತಿಯನ್ನು ವ್ಕಕ್ತಪಡಿಸಿದ್ದಾರೆ. ಹಾಗಿದ್ದರೆ ಈ ಹಕ್ಕು ಪತ್ರ ಅಂದರೇನು? ಅದರಿಂದ ಪ್ರಯೋಜನವೇನು? ಇದಕ್ಕೆ ಅರ್ಹರು ಯಾರು? ವಿತರಣೆ ಯಾವಾಗ? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ…
ಹಕ್ಕು ಪತ್ರ ಎಂದರೇನು?
ಒಬ್ಬ ವ್ಯಕ್ತಿ ಅಥವಾ ನಾಗರಿಕನು ಆಸ್ತಿಯನ್ನು ಹೊಂದಿದ್ದರೂ ಅದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲದಂತಹ ಸನ್ನಿವೇಶದಲ್ಲಿ ಆ ವ್ಯಕ್ತಿಗೆ ತನ್ನ ಜಮೀನನ್ನ ಕಾನೂನಾತ್ಮಕವಾಗಿ ಹಕ್ಕನ್ನು ಸಾಬೀತುಪಡಿಸಲು ಸರಕಾರದಿಂದ ನೀಡುವ ಪ್ರತ್ರಕ್ಕೆ ಹಕ್ಕು ಪತ್ರ ಎಂದು ಕರೆಯುತ್ತಾರೆ.
ಹೌದು ಈ ಹಕ್ಕು ಪತ್ರ ಅರ್ಜಿ ವಿಲೇವಾರಿಯ ಸಂಭಂಧ ರಾಜ್ಯದ ಕರಾವಳಿ ಮತ್ತು ಮಲೆನಾಡು ಇತರೆ ಭಾಗದ ಜನರು ಯಾವುದೇ ಇಲಾಖೆಯ ಯೋಜನೆಗಳ ಸಹಾಯಧನ ಪಡೆಯಲು ಮತ್ತು ಫಲಾನುಭವಿಗಳು ಆಗಲು ಅನರ್ಹರಾಗಿದ್ದರು. ಈಗ ಈ ಹಕ್ಕು ಪತ್ರ ಸಿಗುವುದರಿಂದ ಯೋಜನೆಗಳ ಲಾಭ ಪಡೆಯಲು ಅರ್ಹರಾಗಬಹುದು.
ಈಗಾಗಲೇ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿರುವ ರೈತರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದ್ದು ಇಲಾಖೆಯ ಮಾಹಿತಿಯ ಪ್ರಕಾರ ಇಲ್ಲಿಯವರೆಗೆ ಒಟ್ಟು 13,750 ಅರ್ಜಿಗಳು ಸಲ್ಲಿಕೆಯಾಗಿದ್ದು.
ಒಟ್ಟು ಸಲ್ಲಿಕೆಯಾದ ಅರ್ಜಿಯ ಪ್ರಕಾರ 31,864 ಎಕರೆ ಭೂಮಿಯನ್ನು ಹೊಂದಿರುತ್ತದೆ ಈ ಅರ್ಜಿಯಲ್ಲಿ ಮಾರ್ಗಸೂಚಿ ಪ್ರಕಾರ ಅರ್ಹ ರೈತರನ್ನು ಗುರುತಿಸುವ ಪ್ರಕ್ರಿಯೆ ಇಲಾಖೆ ನಡೆಯುತ್ತಿದೆ.
ಏಳು ಸಾವಿರ ರೈತರಿಗೆ ಹಕ್ಕು ಪತ್ರ ವಿತರಣೆ:
ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಮಾಹಿತಿ ನೀಡಿರುತ್ತಾರೆ.
Hakku patra- ಹಕ್ಕು ಪತ್ರ ಪಡೆಯಲು ಅರ್ಹರು ಯಾರು?
ಸಚಿವರು ಹಂಚಿಕೊಂಡಿರುವ ಮಾಹಿತಿಯನ್ವಯ ಅರಣು ಇಲಾಖೆಗೆ ಸೇರಿದ ಭೂಮಿಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೂ ಮುನ್ನ ಕೃಷಿ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Forest department- ಜನವರಿ ತಿಂಗಳ ಒಳಗಾಗಿ 7 ಸಾವಿರ ರೈತರಿಗೆ ಹಕ್ಕುಪತ್ರ:
ಅರ್ಜಿ ವಿಲೇವಾರಿ ಪ್ರಕ್ರಿಯೆಯು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿದ್ದು ಅರ್ಹ ಫಲಾನುಭವಿ ರೈತರಿಗೆ ಈ ತಿಂಗಳ ಒಳಗಾಗಿ ಅಂದರೆ ಜನವರಿ-2024ರ ಒಳಗಾಗಿ 7 ಸಾವಿರ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿರುತ್ತಾರೆ.
ಇದನ್ನೂ ಓದಿ: ಭೂಮಿ ಸೇವೇಗಳು, ಮೋಜಿನಿ ಸೇವೆಗಳು, ಇತರೆ ಸೇವೆಗಳ ದರಪಟ್ಟಿ?
ಇಲ್ಲಿ ಓತ್ತಿ ನಿಮಗೆ ಅರಣ್ಯ ಸಂರಕ್ಷಣಾ ಕಾಯಿದೆ– ಪ್ರತಿ ದೊರೆಯುವುದು.
Claim letter Benefit: ಹಕ್ಕು ಪತ್ರ ಪ್ರಯೋಜನವೇನು?
ವ್ಯಕ್ತಿಗೆ ಭೂಮಿಯನ್ನು ಹೊಂದಿರುವ ಕುರಿತು ಅಧಿಕೃತ ದಾಖಲೆ ಇದಾಗಿರುತ್ತದೆ. ಸರಕಾರವೇ ಈ ದಾಖಲೆಯನ್ನು ನೀಡುವುದರಿಂದ ಯಾವುದೇ ರೀತಿಯ ದಾಖಲೆ ಸಂಶೋಧನೆ ಮಾಡುವುದು ಅವಶ್ಯವಿರುವುದಿಲ್ಲ.
ಸ್ಥಳಿಯವಾಗಿ ಇಲಾಖೆಯಗಳ ಯೋಜನೆಗಳ ಲಾಭ ಮತ್ತು ಸಹಾಯಧನವಾಗಲಿ, ಅಥವಾ ಯೋಜನೆಗಳ ಫಲಾನುಭವಿಗಳು ಆಗಲು ಅರ್ಹರಾಗಿರುತ್ತಾರೆ.