ರೈತ ಬಾಂದವರೇ, ನಿಮಗೇ ಬಹಳ ಅವಶ್ಯಕವಾಗಿ ಗೊತ್ತಿರಬೇಕಾದ ಮಾಹಿತಿ ಇತ್ತಿಚೀನ ದಿನಗಳಲ್ಲಿ ಹಳ್ಳಿಗಳಲ್ಲಿ ಎಷ್ಟೂ ಕುಟುಂಬಗಳು ಜಮೀನನ ಅಳತೆ ಹೆಚ್ಚು, ಅಥವಾ ಕಡಿಮೆ ಅಗಿರುವುದಕ್ಕೆ ಜಗಳವಾಡಿ ಕೋರ್ಟ ಮೆಟ್ಟಿಲೆರುವುದು ನಾವು ನೋಡಿರುತ್ತೆವೆ!! ಹಾಗಾಗಿ
ಜಮೀನಿಗೂ ಹದ್ದು ಬಸ್ತು ಎನ್ನು ವುದು ಬಹಳ
ಮುಖ್ಯ ವಾಗಿರುತ್ತದೆ.
ಜಮೀನಿಗೆ ಹದ್ದು ಬಸ್ತು ಹಾಕಿಲ್ಲವೆಂದರೆ ಜಮೀನು ಭವಿಷ್ಯದಲ್ಲಿ
ಕಡಿಮೆಯಾಗಬಹುದು ಅಥವಾ ಜಾಸ್ತಿಯೂ ಆಗಬಹುದು.ಹಾಗಾದರೆ ಹದ್ದು ಬಸ್ತು ಎಂದರೆ
ಏನು? ಹದ್ದು ಬಸ್ತಿ ಗೆ ಅರ್ಜಿ ಎಲ್ಲಿ ಸಲ್ಲಿ ಸಬೇಕು?ದಾಖಲಾತಿಗಳು ಏನೇನು ಬೇಕು? ಜಮೀನಿಗೆ
ಹದ್ದು ಬಸ್ತು ಹಾಕಿದ್ರೆ ಏನುಲಾಭ? ಹದ್ದು ಬಸ್ತಿನ ಪ್ರಕ್ರಿಯೆ ಏನಿರುತ್ತದೆ? ಎಂದು ವಿವರವಾಗಿ
ತಿಳಿದುಕೊಳ್ಳೋ ಣ.
ಭೂಮಾಪಕರು ಜಮೀನಿಗೆಬಂದು ಸರ್ವೆದಾಖಲೆಗಳ ಆಧಾರದಮೇಲೆ ಜಮೀನು ಅಳತೆಮಾಡಿ
ಅಳಿಸಿಹೋಗಿರುವ ಗಡಿಭಾಗವನ್ನು ಪುನಃ ಪತ್ತೆ ಹಚ್ಚಿ ಗುರುತುಮಾಡುವುದಕ್ಕೆ ಹದ್ದು ಬಸ್ತು
ಎಂದು ಕರೆಯುತ್ತಾರೆ.
ಹದ್ದುಬಸ್ತು ಮಾಡಿಸಿಕೊಳ್ಳಲು ಮುಖ್ಯ ವಾಗಿಬೇಕಾಗುವ ದಾಖಲೆಗಳು:
*ಜಮೀನಿನಮಾಲೀಕನ ಆಧಾರ ಕಾರ್ಡ್.
*ಇತ್ತೀ ಚಿನ ಪಹಣಿ/ಉತಾರ್/ಆರ್.ಟಿ.ಸಿ.
*ಅರ್ಜಿ ನಮೂನೆ
ಇದನ್ನೂ ಓದಿ: E-Kyc ಆಗದವರ ಲಸ್ಟ್ ಬಿಡುಗಡೆ! ಆಧಾರ ಸಂಖ್ಯೆ ಹಾಕಿ ಸ್ಟೇಟಸ್ ಚೆಕ್ ಮಾಡಿ! ಇಲ್ಲವಾದರೆ ಈ ಕಂತಿನ ಹಣ ನಿಮಗೆ ಸಿಗಲ್ಲ!
ಈಮೇಲಿನ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರ ಅಥವಾ
ಹೋಬಳಿಯಲ್ಲಿರುವ ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ಇದಕ್ಕಿಂತ ಮೊದಲು ನೆಮ್ಮದಿ ಕೇಂದ್ರ ಅಥವಾ ನಾಡಕಚೇರಿ ಹತ್ತಿರವಿರುವ ಝರೆಕ್ಸ್
ಅಂಗಡಿಗಳಲ್ಲಿ ಹದ್ದು ಬಸ್ತಿಗೆ ಸಂಬಂಧಿಸಿದ ಅರ್ಜಿ ಸಿಗುತ್ತದೆ. ಅದನ್ನು ತೆಗೆದುಕೊಂಡು ಸರಿಯಾಗಿ
ಭರ್ತಿಮಾಡಬೇಕು. ಅರ್ಜಿಯಲ್ಲಿ ಮುಖ್ಯ ವಾಗಿ ಚೆ್ಕ್ಕುಬಂದಿ ವಿವರ ಕೇಳಿರುತ್ತಾರೆ.
ಜೊತೆಗೆ
ಜಮೀನಿನ ಅಕ್ಕ ಪಕ್ಕ ದವರ ಹೆಸರು, ಅವರ ಮೊಬೈಲ ನಂಬರ್ ಸರ್ವೆನಂಬರ ಹಾಗೂ ವಿಳಾಸವನ್ನು
ಭರ್ತಿಮಾಡಿ ನಾಡಕಚೇರಿಗೆ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿ ಸಿದ ನಂತರ ಅಕ್ಲೋ ಸ್ ಮೆಂಟ್
ಸ್ಲಿಪ್ ಅಂದರೆ ಸಲ್ಲಿಸುವ ಬಗ್ಗೆ ರಶೀದಿ ಪಡೆದುಕೊಳ್ಳಬೇಕು.
ಪ್ರ ಕ್ರಿಯೆ:
ಸದರಿ ಅರ್ಜಿಯನ್ನು ಭೂಮಾಪಕರಿಗೆ ರವಾನಿಸಲಾಗುತ್ತದೆ.ಭೂಮಾಪಕರು ಅರ್ಜಿದಾರರಿಗೆ
ಹಾಗೂ ಬಾಜುದಾರರಿಗೆ ಮುಂಚಿತವಾಗಿ ನೋಟಿ ನೀಡಿ ದಿನಾಂಕವನ್ನು ನಿಗದಿಪಡಿಸುತ್ತಾರೆ.
ಅವರು ಹೇಳಿರುವ ದಿನಾಂಕದಂದು ಅರ್ಜಿದಾರರ ಮತ್ತು ಬಾಜುದಾರರ ಸಮ್ಮುಖದಲ್ಲಿ
ಸರ್ವೆದಾಖಲೆಗಳ ಆಧಾರದಮೇಲೆ ಜಮೀನಿನ ಅಳತೆ ಕಾರ್ಯ ನಡೆಯುತ್ತದೆ. ಅಳತೆ ಕಾರ್ಯ
ಸಲ್ಲಿ ಸಿದ ತಕ್ಷಣ ಅರ್ಜಿದಾರನು ಕಲ್ಲುಗಳನ್ನು ಹಾಕಿಕೊಳ್ಳಬೇಕು. ಈ ಬಗ್ಗೆ ಹೇಳಿಕೆ ಪಡೆದಿಕೊಂಡು
ನಕ್ಷೆ ತಯಾರಿಸಿ ಒತ್ತುವರಿ ಇದ್ದ ಲ್ಲಿ ಒತ್ತುವರಿ ಇದೆ ಎಂದು ಅದರ ಅಳತೆ, ವಿಸ್ತಿರ್ಣವನ್ನು
ನಮೂದಿಸಿ ಕಚೇರಿಗೆ ನೀಡುವರು.
ಇದನ್ನೂ ಓದಿ: ಗ್ರಾಮ ಪಂಚಾಯತಿಯಲ್ಲಿ ಆಸ್ತಿ ನೋಂದಣಿ ಹೇಗೆ ಮಾಡುವುದು? ಇ-ಸ್ವತ್ತು ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಜಮೀನಿಗೆ ಅವಶ್ಯ ಕ ಹದ್ದು ಬಸ್ತು, ಎಲ್ಲಿ ಅರ್ಜಿ ಸಲ್ಲಿ ಸಬೇಕು? ಪ್ರ ಕ್ರಿಯೆ ಏನಿರುತ್ತದೆ? –
ತಾಲೂಕು ಕಚೇರಿಯ ಮುಖಾಂತರ ಹೇಳಿಕೆ ಪ್ರ ತಿಯಾಗಲಿ ಅಥವಾ ನೋಟಿಸ್ ಪ್ರತಿ ಮತ್ತು
ಹದ್ದು ಬಸ್ತಿನ ನಕ್ಷೆ ಪ್ರ ತಿಗಳನ್ನು ಅರ್ಜಿದಾರರಾಗಲಿ ಅಥವಾ ಬಾಜುದಾರರಾಗಲಿ ಪ್ರತ್ಯೇಕ ಅರ್ಜಿ
ಸಲ್ಲಿ ಸಿ ಶುಲ್ಕ ಪಾವತಿಮಾಡಿ ಪಡೆದುಕೊಳ್ಳಬಹುದು.
ಹದ್ದುಬಸ್ತಿ ಗೆ ಅರ್ಜಿಯಾವಾಗ ಸಲ್ಲಿ ಸಬೇಕು.
ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲು ಗಳ ನಾಶವಾಗಿದ್ದಲ್ಲಿ
ಪಕ್ಕ ದ ಹಿಡುವಳಿದಾರರು ನಿಮ್ಮ ಜಮೀ ನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ
ಬಂದಾಗ
ಪಹಣಿಯಲ್ಲಿ ಇರುವುದ್ದ ಕ್ಕಿಂ ತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಮುಖ್ಯ ವಾದ
ಮಾಹಿತಿ
ಅರ್ಜಿದಾರರಿಗಾಗಲಿ ಅಥವಾ ಬಾಜುದಾರನಿಗಾಗಲೀ ಈ ಅಳತೆಯಿಂದ
ಸಮಾಧಾನಾಗಿಲ್ಲವೆಂದರೆ ಅಥವಾಬಾಧಿತನಾದರೆ ಮೇಲ್ಮನವಿ ಸಲ್ಲಿಸುವುದ್ಕಕೆ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳು( ಶಾನಭೋಗರು) ಕಛೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯುಬಹುದು.ಅಥವಾ ತಾಲ್ಲೂಕು ತಹಶೀಲ್ದಾರರ ಕಛೇರಿ ಸಂಪರ್ಕಿರಿಸಿ