Friday, September 20, 2024

Gruhalksmi Scheme: ಮನೆಯ ಯಜಮಾನಿಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ ಈ ರೀತಿ ಮಾಡಿ ಎಲ್ಲಾ ಕಂತು ಜಮಾ !!ಆಧಾರ್‍ ಕಾರ್ಡ ಯಾವ ಖಾತೆಗೆ ಲಿಂಕ್ ಆಗಿದೆ? ಲಿಂಕ್ ಆಗದೇ ಇದ್ದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ.

Gruhalksmi Scheme: ಮನೆಯ ಯಜಮಾನಿಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ ಈ ರೀತಿ ಮಾಡಿ ಎಲ್ಲಾ ಕಂತು ಜಮಾ !!
ಆಧಾರ್‍ ಕಾರ್ಡ ಯಾವ ಖಾತೆಗೆ ಲಿಂಕ್ ಆಗಿದೆ? ಲಿಂಕ್ ಆಗದೇ ಇದ್ದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ.

ಆತ್ಮೀಯರೇ ಗೆಳೆಯರೇ ನಿಮ್ಮ ಮನೆಯ ಯಜಮಾನಿಗೆ ಅಥವಾ ಕುಟುಂಬದ ರೇಷನ್ ಕಾರ್ಡ ಮುಖ್ಯಸ್ಥರಿಗೆ ಗೃಹಲಕ್ಷ್ಮೀ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲವಾದರೆ, ಹಣ ಬರಲು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ತಿಳಿಯೋಣ.

ರಾಜ್ಯ ಸರ್ಕಾರದ ಗೃಹಲಕ್ಷ್ಮೀ (Gruhalakshmi Scheme) ಯೋಜನೆಯ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡುವ ಈ ಯೋಜನೆಗೆ ರಾಜ್ಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಯೋಜನೆ ಜಾರಿಯಾಗಿ ಹಲವು ತಿಂಗಳು ಕಳೆದರೂ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಹಣ ಬಂದಿಲ್ಲ. ಇಷ್ಟಕ್ಕೂ ಗೃಹಲಕ್ಷ್ಮೀ ಖಾತೆಗೆ ಹಣ ಬಾರದೇ ಇದ್ದ ಮಹಿಳೆಯರು ಏನು ಮಾಡೋಕು ಎಂಬ ಆತಂಕಕ್ಕೆ ಇಲ್ಲಿದೆ ಸರಿಯಾದ ಮಾಹಿತಿ. ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

1) ಗೃಹಲಕ್ಷ್ಮಿ ಯೋಜನೆ ಅರ್ಜಿಯ ಸ್ಟೇಟಸ್ ಪರಿಶೀಲನೆ ಮಾಡಿಕೊಳ್ಳಿ.ನಿಮಗೆ ಇದುವರೆಗೂ ಗೃಹಲಕ್ಷ್ಮಿ ಯೋಜನೆ ಮೆಸೇಜ್ ಬಂದಿಲ್ಲವಾದರೆ, ಖಂಡಿತ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು, ಹೇಗೆಂದರೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಗೃಹಲಕ್ಷ್ಮಿ ಯೋಜನೆಯ ಈ ಸಂಖ್ಯೆಗೆ 8147500500 ಟೆಕ್ಸ್ ಮೆಸೇಜ್ ಮಾಡಬೇಕು.

2) ನೀವು ಮೊದಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಈ ಮೂರರಲ್ಲಿ ಕೂಡ ಕುಟುಂಬದ ಮುಖ್ಯಸ್ಥೆಯ ಹೆಸರು ಒಂದೇ ರೀತಿ ಇರಬೇಕು. ಇದನ್ನು ಮೊದಲು ಚೆಕ್ ಮಾಡಿಕೊಳ್ಳಿ. ಉದಾಹರಣೆಗೆ : ಭಾಗ್ಯಲಕ್ಷ್ಮೀ ಎಂದು ಆಧಾರ್ ಕಾರ್ಡ್ ನಲ್ಲಿ ಇರುತ್ತೆ ರೇಷನ್ ಕಾರ್ಡ್ ನಲ್ಲಿ ಲಕ್ಷ್ಮೀ ಎಂದು ಮಾತ್ರ ಇರುತ್ತದೆ. ಇಂತಹ ತಪ್ಪುಗಳು ಆಗಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಿ.ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ವಿವರದಲ್ಲಿ ಮಾಹಿತಿಗಳು ಹೊಂದಾಣಿಕೆ ಆಗಿರಬೇಕು.( Name Mismatch) ಆಗಿ ಅರ್ಜಿ ರದ್ದಾಗುತ್ತದೆ.

3) ಹಣ ವರ್ಗಾವಣೆ ಮಾಡುವಾಗ ಅವರ ಖಾತೆಗಳು error ಬರುತ್ತಿವೆ ಎನ್ನಲಾಗಿದೆ. ಮಹಿಳೆಯರು ಅವರ ಖಾತೆಗಳನ್ನು ಬಳಕೆ ಮಾಡದ ಕಾರಣ ಅವುಗಳು ಕ್ಲೋಸ್ ಆಗಿದೆ. ಹಾಗಾಗಿ error ಬರುತ್ತಿದೆ ಎನ್ನಲಾಗಿದೆ. ಬ್ಯಾಂಕ್ ಖಾತೆ ರದ್ದಾಗಿರುವ ಕಾರಣದಿಂದ ಅಂತಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಹಣ ಬಾರದ ಮಹಿಳೆಯರು ಕೂಡಲೇ ತಮ್ಮ ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಬ್ಯಾಂಕ್ ಗೆ ತೆರಳಿ ಈ ಬಗ್ಗೆ ಪರಿಶೀಲನೆ ಮಾಡಿಸಿ.

ಆಧಾರ್‍ ಕಾರ್ಡ, ಬ್ಯಾಂಕ್ ಖಾತೆಗೆ ಲಿಂಕ್ ಮತ್ತು NPCI ಲಿಂಕ್ ತಿಳಿಯಲು ಈ ಕೆಳಗಿನ ಹಂತ ಅನುಸರಿಸಿ:

ಇದನ್ನೂ ಓದಿ: ಆಧಾರ್ ಕಾರ್ಡ ಯಾವ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ತಿಳಿಯಲು ಜಾಲತಾಣದ ಲಿಂಕ್:

ಹಂತ 1: ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ಜಾಲತಾಣಕ್ಕೆ ಭೇಟಿ
https://resident.uidai.gov.in/bank-
ಹಂತ 2: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನೋಂದಣಿ ಮಾಡಿ ಹಾಗೆ ಕ್ಯಾಪ್ಟರ್ ಅನ್ನು ಹಾಕಿ
ಹಂತ 3: ನಂತರ ನಿಮ್ಮ ಆಧಾರ್ ನಂಬರಿಗೆ ಲಿಂಕ್ ಆಗಿರುವ ಮೊಬೈಲ್ ನಂಬ‌ರ್‍ OTP ಬರುತ್ತೆ ಅದನ್ನು ನಮೂದಿಸಿ, ನಂತರ Submit ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರ ಅದು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಕಾಣಿಸುತ್ತದೆ.
ಹಂತ 5: ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಲಿಂಕ್ ಮಾಡಿಸಬೇಕು.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ATM ಗಳ ಮೂಲಕ ಕೂಡ ಮಾಡಿಸಬಹುದು, ಆನೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು. ಅಥವಾ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?
ಇದನ್ನೂ ಓದಿ: ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :

ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಆಗಿದೆಯೇ ಇಲ್ಲವೋ ಎನ್ನುವುದನ್ನು Confirm ಮಾಡಿಕೊಳ್ಳಿ ಹಾಗೂ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಇ ಕೆವೈಸಿ ಆಗದೇ ಇದ್ದರೆ ಹತ್ತಿರದ ಸೇವಾ ಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ ನೀಡಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಿ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಆಧಾರ್ ಲಿಂಕ್ ಮಾತ್ರವಲ್ಲ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಕೂಡ ಆಗಿರಬೇಕು.
ಹೌದು ಇ-ಕೆವೈಸಿ ಮತ್ತು NPCI ಈ ಪ್ರಕ್ರಿಯೆ ಸರ್ಕಾರದ ಯಾವುದೇ ಯೋಜನೆ DBT ಹಣ ನಿಮ್ಮ ಖಾತೆಗೆ ಜಮಾ ಆಗಲು ನೀವು ಇದನ್ನು ಮಾಡಲೇಬೇಕು.

ಇತ್ತೀಚಿನ ಸುದ್ದಿಗಳು

Related Articles