Thursday, November 21, 2024

Gruhalakshmi amount-ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ಗೃಹಲಕ್ಷ್ಮಿ ಹಣ ಬಿಡುಗಡೆ! ಚೆಕ್ ಮಾಡಲು ಇಲ್ಲಿದೆ ವಿಧಾನ.

ಆತ್ಮೀಯ ಗ್ರಾಹಕರೇ, ಕರ್ನಾಟಕ ರಾಜ್ಯದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ರೂ.2000 ಹಣವನ್ನು ಇಂದು ಸೆಪ್ಟಂಬರ್ 7 ಮತ್ತು 9 ರಂದು ಹಣ ಬಿಡುಗಡೆ ಮಾಡಲಾಗುತ್ತದೆ. ಪ್ರತಿ ತಿಂಗಳು ಮನೆ ಯಜಮಾನಿ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

ಇಲ್ಲಿಯವರೆಗೆ ನಿಮಗೆ ಕಂತುಗಳು ಬಂದಿರಬಹುದು ಒಂದು ವೇಳೆ ಬಂದರೂ ಕೂಡ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರದೆ ಇರಬಹುದು ಆದರೆ ಖಂಡಿತವಾಗಿಯೂ ಹಣ ಜಮಾ ಆಗಿದೆ, ಅದನ್ನು ಹೇಗೆ ತಿಳಿಯಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಸೆಪ್ಟಂಬರ್ ತಿಂಗಳ ಹಣ ಕಡ್ಡಾಯವಾಗಿ ಜಮೆಯಾಗಲಿದೆ ಆದರೆ ನಿಮ್ಮ ಹೆಸರು ಪಟ್ಟಿಯಲ್ಲಿರುವುದು ಕಡ್ಡಾಯವಾಗಿದೆ. ಹಾಗಾಗಿ ಪಟ್ಟಿಯನ್ನು ಆನ್ಲೈನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಕಂಡಿತವಾಗಿ ಹಣ ಬರುತ್ತದೆ ಎಂದು ತಿಳಿಯಬಹುದು.

Gruhalakshmi amount status-ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮಗೆ ಬಂತಾ ಚೆಕ್‌ ಮಾಡಿ:

Step-1:ಈ ಲಿಂಕ್‌ ಮೇಲೆ Gruhalakshmi amount status ಕಿಕ್ಲ್‌ ಮಾಡಿ ಗೂಗಲ್‌ ಪ್ಲೇ ಸ್ಟೋರ್‌ ಪ್ರವೇಶ ಮಾಡಿ ಅಧಿಕೃತ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರ ತಿಳಿಯಲು ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್‌ ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಬೇಕು.

Step-2:ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಡಿ ಬಿ ಟಿ ಕರ್ನಾಟಕ(DBT Karnataka mobile app)ಮೊಬೈಲ್‌ ಅಪ್ಲೀಕೇಶನ್‌ ಅನ್ನು ಡೌನ್ಲೋಡ್‌ ಮಾಡಿಕೊಂಡ ನಂತರ ನಿಮ್ಮ ಮೊಬೈಲ್‌ ನಲ್ಲಿ ಈ ಅಪ್ಲಿಕೇಶನ್‌ ತೆರೆದು ಮೊದಲಿಗೆ ಅರ್ಜಿದಾರರ ಆಧಾರ್‌ ಕಾರ್ಡ ಸಂಖ್ಯೆಯನ್ನು ಹಾಕಿ ಬಳಕೆದಾರರ ನೊಂದಣಿಯನ್ನು ಮಾಡಿಕೊಳ್ಳಬೇಕು.
ಇದಕ್ಕಾಗಿ  ಆಧಾರ್‌ ಕಾರ್ಡ ನಂಬರ್‌ ಹಾಕಿ ನಂತರ ಆಧಾರ್‌ ನಲ್ಲಿರುವ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ(OTP) ನ್ನು ನಮೂದಿಸಿ ತದನಂತರ ಈ ಅಪ್ಲಿಕೇಶನ್‌ ಗೆ ನಾಲ್ಕು ಅಂಕಿಯ ಪಾಸ್ವರ್ಡ(Password) ಅನ್ನು ರಚನೆ ಮಾಡಿಕೊಳ್ಳಬೇಕು.

Step-3:ಈ ಅಪ್ಲಿಕೇಶನ್ ಅನ್ನು ತೆರೆಯಲು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಲಾಗಿನ್(Login) ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4:ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಅಪ್ಲಿಕೇಶನ್ ನ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಮೊದಲಿಗೆ ಕಾಣುವ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ(Gruhalakshmi) “ಗೃಹಲಕ್ಷ್ಮಿ” ಎಂದು ತೋರಿಸುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕದಂದು ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಜೊತೆಗೆ ಹಣ ಜಮಾ ಅದ ಬ್ಯಾಂಕ್ ಹೆಸರು, ಯು.ಟಿ.ಆರ್(UTR) ನಂಬರ್ ಮತ್ತು ಫಲಾನುಭವಿ ಖಾತೆಯ ಹೆಸರು ತೋರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles