Wednesday, December 4, 2024

Gruhalakshmi amount: 4 ನೇ ಕಂತಿನ ಗೃಹಲಕ್ಷ್ಮಿ ಹಣ ಈ ಜಿಲ್ಲೆಯವರಿಗೆ ಆಧಾರ್‍ ನಂಬರ್‍ ಹಾಕಿ ಚೆಕ್ ಮಾಡಿ:

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು “ಗೃಹ ಲಕ್ಷ್ಮೀ” (Gruhalakshmi ) ಯೋಜನೆ ಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2,000 ಜಮಾ ಮಾಡಲು ಯೋಜನೆ ಅನುಷ್ಠಾನ ಮಾಡಿದೆ.

ಗೃಹಲಕ್ಷ್ಮಿ Gruhalakshmi ಯೋಜನೆಯ 4ನೇ ಕಂತಿನ ಹಣವು ವರ್ಗಾವಣೆಯಾಗುತ್ತಿದ್ದು, ಮೊದಲ ಹಂತದಲ್ಲಿ 15 ಜಿಲ್ಲೆಗಳ ಫಲಾನುಭವಿಗಳು ಪಡೆದುಕೊಳ್ಳಲಿದ್ದಾರೆ ಅಂತ ತಿಳಿದು ಬಂದಿದೆ. ಇನ್ನು 5,96,268 ಫಲಾನುಭವಿಗಳ ಖಾತೆ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿಲ್ಲ. ಆದರೆ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿದ್ದು, ಅವರಿಗೆ ಯೋಜನೆಯ ಹಣ ಜಮಾವಾಗಿರುತ್ತದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ Child Development Project Officer ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ವಹಿಸಲಾಗಿದೆ.

4 instalment :4 ನೇ ಕಂತಿನ ಗೃಹಲಕ್ಷ್ಮಿಹಣ ಯಾವಾಗ?
ಈಗಾಗಲೇ ಮೂರು ಕಂತಿನ ಆಧಾರದ ಮೇಲೆ ಎರಡು ಸಾವಿರ ರೂಪಾಯಿಗಳಂತೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಬಹುತೇಕ 80%ಕ್ಕಿಂತ ಹೆಚ್ಚು ಮಹಿಳೆಯರ ಖಾತೆಗೆ ಹಣ ವರ್ಗಾವಣೆಆಗಿದೆ.


ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಡಿಸೆಂಬರ್ 15 ರಿಂದ 20ನೇ ತಾರೀಕಿನ ಒಳಗೆ ಬಿಡುಗಡೆ ಆಗುವ ಸಾಧ್ಯತೆ ಇದೆ, ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದು ಸಂದೇಶ ನಿಮ್ಮ ಮೊಬೈಲಿಗೆ ಬಾರದೆ ಇದ್ದರೆ ನೇರವಾಗಿ ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿಕೊಳ್ಳಿ.ಕೆಲವರಿಗೆ ಈವರೆಗೂ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗಿಲ್ಲ. ಹೀಗಾಗಿ ಖಾತೆಗೆ ಜಮಾ ಆಗದವರು ರೇಷನ್ ಕಾರ್ಡ್ ನಲ್ಲಿರುವ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಆಹಾರ ಇಲಾಖೆ ಸೂಚನೆ ನೀಡಿದೆ.


ರಾಜ್ಯ ಸರ್ಕಾರ I ಯೋಜನೆಯ ಅಡಿಯಲ್ಲಿಯೂ ಈಗಾಗಲೇ 4 ಕಂತಿನ ಹಣ ಬಿಡುಗಡೆ ಮಾಡಿದೆ. ಇದೇ ಡಿಸೆಂಬರ್ ತಿಂಗಳಿನಲ್ಲಿ ಹಣವನ್ನು 15 ಮತ್ತು 20 ತಾರೀಖಿನ ಒಳಗೆ ಬಿಡುಗಡೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿರುತ್ತದೆ.

ಇದನ್ನೂ ಓದಿ:Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:

Gruhalakshmi amount: 4 ನೇ ಕಂತಿನ ಹಣ ಕೆಳಗೆ ಕಾಣಿಸಿದ ಈ ಜಿಲ್ಲೆಗಳಿಗೆ

  • ಚಿತ್ರದುರ್ಗ
  • ಬೆಂಗಳೂರು
  • ಕೋಲಾರ
  • ಮಂಡ್ಯ
  • ಬೆಳಗಾವಿ
  • ಬಾಗಲಕೋಟೆ
  • ಧಾರವಾಡ
  • ಹಾಸನ
  • ಬಿಜಾಪುರ
  • ಉತ್ತರ ಕನ್ನಡ
  • ದಾವಣಗೆರೆ
  • ಗದಗ
  • ರಾಯಚೂರು
  • ಕಲ್ಬುರ್ಗಿ
  • ಮೈಸೂರು

ಇದನ್ನೂ ಓದಿ:Drought relief fund: ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ:

Method of cash deposit check: ವರ್ಗಾವಣೆ ಆಗಿರುವ ಹಣ ಚೆಕ್ ಮಾಡುವ ವಿಧಾನ:
ಆತ್ಮೀಯರೇ ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ ಸರಕಾರದ ಇ-ಆಡಳಿತ ವಿಭಾಗದ ರಾಜ್ಯ “DBT Karnataka” ಅಧಿಕೃತ ಮೊಬೈಲ್ ಅಪ್ಲಿಕೇಶನ್ ಡೌನ್ಹೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಸರಕಾರಿ ಯೋಜನೆಗಳ ನೇರ ನಗದು ವರ್ಗಾವಣೆ(DBT)ಯ ಹಣ ಜಮಾ ಅಗಿರುವುದನ್ನು ತಿಳಿಯಬವುದಾಗಿರುತ್ತದೆ.

ಹಂತ 1: ಮೊದಲಿಗೆ ಇಲ್ಲಿ ಕಾಣಿಸಿರುವ ಲಿಂಕ್ ಓತ್ತಿ
https://play.google.com/store/apps/details? id=com.dbtkarnataka
ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ “DBT Karnataka” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಫೋಡ್ ಮಾಡಿಕೊಳ್ಳಬೇಕು.
ನಂತರ ಫಲಾನುಭವಿಯ 12 ಅಂಕಿಯ ಆಧಾರ್ ನಂಬರ್ ನಮೂದಿಸಿ ಆಧಾ‌ರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ ಒಟಿಪಿಯನ್ನು ನಮೂದಿಸಿ “VERIFY OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 2: ಈ ಪ್ರಕ್ರಿಯೆ ಮುಗಿಸಿದ ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ 4 ಅಂಕಿಯ Secure code ಅನ್ನು ಹಾಕಿ “SUBMIT” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ-3: ತದನಂತರ ಫಲಾನುಭವಿಯ ವಿವರ ತೋರಿಸುತ್ತದೆ ಈ ಪುಟದ ಕೊನೆಯ ಕಾಲಂ ನಲ್ಲಿ ಮೊಬೈಲ್ ನಂಬರ್ ಹಾಕಿ “OK” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ -4: ಈ ಪೇಜ್ ನಲ್ಲಿ “Payment Status” ಮೇಲೆ ಕ್ಲಿಕ್ ಮಾಡಿ ನಂತರ ಯೋಜನೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಹಣ ಜಮಾ ಅಗಿರುವುದರ ಕುರಿತು ಮಾಹಿತಿ ತಿಳಿಯುತ್ತದೆ.

ಇದನ್ನೂ ಓದಿ:ree fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:
ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ ಎಂದು 3 “Seeding status of Aadhar in B NEW Account ಬಟನ್ ಮೇಲೆ ಕ್ಲಿಕ್ ಮಾಡಿದರೆ ವಿವರ ಗೋಚರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles