Saturday, October 5, 2024

ಗೃಹಲಕ್ಷ್ಮೀ ಯೋಜನೆಯ ಒಂದನೇ ಕಂತಿನ ಅರ್ಹ ಅರ್ಜಿದಾರರ ಪಟ್ಟಿ!!

ಗೃಹಲಕ್ಷ್ಮೀ ಯೋಜನೆಯ ಒಂದನೇ ಕಂತಿನ ಅರ್ಹ ಅರ್ಜಿದಾರರ ಪಟ್ಟಿ!!
ಬ್ಯಾಂಕ್ ಗೆ ಆಧಾರ್‍ ಜೋಡಣೆ ? ಅರ್ಜಿ ಸ್ಥಿತಿ ? ಅಧಿಕಾರಿಗಳ ಸಂಪರ್ಕ ನಂಬರ್‍ ? ಸಂಪೂರ್ಣ್ ಮಾಹಿತಿ ಈ ಲೇಖನದಲ್ಲಿ.

ಆತ್ಮೀಯ ನಾಗರಿಕರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ
ಗೃಹಲಕ್ಷ್ಮೀ ಯೋಜನೆಗೆ ಇದೇ ಆಗಸ್ಟ್ 30 ರಂದು ಮೈಸೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದ್ದು ಅಂದು ಏಕಕಾಲದಲ್ಲಿ ಮನೆಯ ಯಜಮಾನಿಯರ ಖಾತೆಗೆ 2,000 ರೂ. ಜಮಾ ಆಗಲಿದೆ.
ಆದರೇ ಎಲ್ಲಾ ಅರ್ಜಿ ಸಲ್ಲಿಸಿದ ಅರ್ಜಿದಾರರು ಬಹಳ ಮುಖ್ಯವಾಗಿ ಕೆಲವು ಪ್ರಕ್ರಿಯೆಗಳನ್ನು ಮಾಡಿರಬೇಕಾಗುತ್ತದೆ. ಅವುಗಳೆಂದರೆ

ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವ ಗೃಹಲಕ್ಷ್ಮೀ ಅರ್ಜಿದಾರರು ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಮಾಹಿತಿಯನ್ನು ತಿಳಿಸಿರುತ್ತಾರೆ.
ಆದ್ದರಿಂದ ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.

ಅರ್ಜಿ ಸಲ್ಲಿಸಿದ್ದರು ಕೂಡ
ಖಾತೆಗೆ ಲಿಂಕ್ ಮಾಡಬೇಕು.ಅರ್ಜಿ ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡಿಸಬೇಕಾಗಿರುತ್ತದೆ. ನಂತರ ಪಡಿತರ ಚೀಟಿ ಸಂಖ್ಯೆಯನ್ನು 8147500500 ಈ ಸಹಾಯವಾಣಿ ಸಂಖ್ಯೆಗೆ SMS ಮಾಡುವ ಮೂಲಕ ನೀವು ನಿಮ್ಮ ಅರ್ಜಿ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬಹುದು.


ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಬೇಕು. ನಂತರ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದ್ದರೆ. ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಯಶಸ್ವಿಯಾಗಿ ಸಲ್ಲಿಕೆ ಆಗಿದೆ ಎಂದು ನಿಮ್ಮ ಅರ್ಜಿ ಸಂಖ್ಯೆ ಜೊತೆ SMS ಗೆ ರಿಪ್ಲೇ ಬರುತ್ತದೆ. ಒಂದೇ ವೇಳೆ ಆಗಿಲ್ಲವಾದರೆ ಪುನಃ ಹೋಗಿ ಮತ್ತೆ ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು.


ಈ ನಿಯಮಗಳನ್ನು ಪಾಲಿಸದವರಿಗಿಲ್ಲ ಒಂದನೇ ಕಂತು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ರೇಷನ್ ಕಾರ್ಡ ತಿದ್ದಿಪಡಿಗೆ ಅರ್ಜಿ ಸಲ್ಲಿಸಿ ಅರ್ಜಿ ತಿದ್ದುಪಡಿ ಅಗದಿರುವವರಿಗೆ ಹಣ ಜಮಾ ಅಗುವುದಿಲ್ಲ. ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಮಂಜೂರು ಪತ್ರ ದೊರೆಯದೆ ಒಂದು ವಾರದ ನಂತರ ಮಂಜೂರು ಪತ್ರ(Sanction order) ಡೌನ್ ಲೋಡ್ ಮಾಡಿಕೊಳ್ಳಿ ಒಂದುವೇಳೆ ಆಗಸ್ಟ್ 30 ಒಳಗಾಗಿ ಮಂಜೂರು ಪತ್ರ ದೊರೆಯದವರಿಗೂ ಸಿಗುವುದಿಲ್ಲ ಮೊದಲನೆ ಕಂತಿನ ಹಣ.

ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರ ಕೊಡದೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಲು ತಿಳಿಸಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದ್ದಿದರೆ ಹಣ ಜಮಾ ಆಗುವುದು ಅನುಮಾನ. ಈ ಮೇಲಿನ ಕಾರಣಗಳಿಂದ ಮೊದಲನೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುವುದನ್ನು ತಪ್ಪಿಸಿಕೊಳ್ಳಲು ಅರ್ಜಿ ಸಲ್ಲಿಸದವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಂಜೂರು ಪತ್ರ ಪಡೆಯಿರಿ.

ಇದನ್ನೂ ಓದಿ: ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಆಹಾರ ಇಲಾಖೆ ಅತೀ ಅವಶ್ಯಕ ಮಾಹಿತಿ ಪ್ರಕಟಣೆ:

Gruhalakshmi final list- ಯೋಜನೆ ಅಂತಿಮ ಪಟ್ಟಿ ವೀಕ್ಷಿಸಿ:

ಇಲ್ಲಿ ಕಾಣುವ ಲಿಂಕ್ ಬಳಸಿಕೊಂಡು

ಗೃಹಲಕ್ಷ್ಮೀ ಯೋಜನೆಗೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪಡೆಯಲು ಈ

https://ahara.kar.nic.in/Home/EServices
ಮೇಲೆ ಕ್ಲಿಕ್ ಮಾಡಿ “ಹಳ್ಳಿಯ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಂತರ ನಿಮ್ಮ ಜಿಲ್ಲೆ ತಾಲ್ಲೂಕು, ಗ್ರಾಮ, ಹಳ್ಳಿ ಆಯ್ಕೆಯನ್ನು ಮಾಡಿಕೊಂಡು “GO” ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮೀ ಯೋಜನೆಯ ಅರ್ಹ ಪಟ್ಟಿ ಪಡೆಯಬವುದು.

ಮಂಜೂರು ಪತ್ರ ಮತ್ತು ಆಧಾರ್‍ ಲಿಂಕ್ ಖಚಿತ ಪಡಿಸಿಕೊಳ್ಳಿ:

ಅರ್ಜಿ ಸಲ್ಲಿಸಿದ ನಂತರ ಇ-ಕೆವೈಸಿ ಅಗಿರುತ್ತದೆ ಮಂಜೂರು ಪತ್ರ ಡೌನ್ಹೋಡ್ ಮಾಡಲು ಒಂದು ವಾರದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಡೌನ್ಸ್ಡ್ ಲಿಂಕ್ ಮೇಲೆ ಒತ್ತಿ ಮಂಜೂರು ಪತ್ರ ಬಂದಿರುವುದನ್ನು ಖಚಿತಪಡಿಸಿಕೊಳ್ಳಿ.


ಆಧಾರ್ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆ ಆಯ್ಕೆಯನ್ನು ಕೊಟ್ಟಿರುವವರು ಒಮ್ಮೆ Myadhar app ಡೌನಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದಲ್ಲಿ ಖಚಿತಪಡಿಸಿಕೊಳ್ಳಿ.

How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ ನೋಡಿ:

ಹಂತ -1: ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮೊಬೈಲ್ ನಲ್ಲ ಮೆಸೇಜ್ ಬಾಕ್ಸ್ ಅನ್ ಒಪನ್ ಮಾಡಿಕೊಂಡು 8147500500 ಮೊಬೈಲ್ ಸಂಖ್ಯೆಗೆ ಅರ್ಜಿದಾರರ ರೇಷನ್ ಕಾರ್ಡ ಸಂಖ್ಯೆಯನ್ನು ಮೆಸೇಜ್ ಮಾಡಬೇಕು.

ಹಂತ -2: ನೀವು ಈ ಮೊಬೈಲ್ ಸಂಖ್ಯೆಗೆ ನಿಮ್ಮ ರೇಷನ್ ಕಾರ್ಡ ಸಂಖ್ಯೆಯನ್ನು ಮೆಸೇಜ್ ಮಾಡಿದ ನಂತರ ನಿಮಗೆ ಈ ಕೆಳಗೆ ತೋರಿಸಿದ ರೀತಿ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎನ್ನುವ ಸಂದೇಶದ ಜೊತೆಗೆ ನಿಮ್ಮ ಅರ್ಜಿಯ ರೆಪ್ರೆನ್ಸ್ ನಂಬರ್ ಬರುತ್ತದೆ.ಈ ರೀತಿ ಬಂದರೆ ನಿಮ್ಮ ಅರ್ಜಿ ಯಶಸ್ವಿಯಾಗಿದೆ ಅಂತ ಅರ್ಥ. ಒಂದೊಮ್ಮೆ ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ ಸಂಖ್ಯೆಯನ್ನು ಮೇಸೆಜ್ ಕಳುಹಿಸಿದ ನಂತರ “ನಿಮ್ಮ ಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ಗೃಹಲಕ್ಷ್ಮಿ ದಯವಿಟ್ಟು ಹತ್ತಿರದ ಬೆಂಗಳೂರು ಒನ್/ ಕರ್ನಾಟಕ ಒನ್ /ಗ್ರಾಮ್ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.- ಕರ್ನಾಟಕ ಸರ್ಕಾರ” ಎಂದು ಮರು ಸಂದೇಶ ಬಂದರೆ ನೀವು ಅರ್ಜಿ ಸಲ್ಲಿಸಬೇಕು ಎಂದು.

ನಿಮ್ಮ ಅರ್ಜಿಯ ಕುರಿತು ಹೆಚ್ಚಿನ ಮಾಹಿತಿ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ನಿಮ್ಮ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬವುದು.

ನಿಮ್ಮ ತಾಲ್ಲೂಕಿನಲ್ಲಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ(CDPO) ಕಚೇರಿಯ ವಿಳಾಸ ಮತ್ತು ಕಚೇರಿಯ ದೂರವಾಣಿ ಸಂಖ್ಯೆಯನ್ನು ಪಡೆಯಲು ಇಲ್ಲಿಓತ್ತಿ ಕ್ಲಿಕ್ ಮಾಡಿ.

ಗೃಹ ಲಕ್ಷ್ಮಿ ಯೋಜನೆ ಸಹಾಯವಾಣಿ ಸಂಖ್ಯೆಗಳು: 8147500500 /8277000555

ಇತ್ತೀಚಿನ ಸುದ್ದಿಗಳು

Related Articles