Saturday, October 5, 2024

ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ: ಮೊಬೈಲ್ ನಲ್ಲಿ ಚೆಕ್ ಮಾಡಿ.

ಪ್ರೀಯ ವಿದ್ಯಾರ್ಥಿಗಳೇ ಕೆಲವು ದಿನಗಳ ಹಿಂದೆ ಅಷ್ಟೇ ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರ ಮುಂದುವರೆದು ಭಾಗವಾಗಿ ಇತ್ತೀಚೆಗೆ ರಾಜ್ಯವಾರು ಮೂಲ ದಾಖಲೆಗಳ ಅರ್ಹತಾ ಪಟ್ಟಿಯನ್ನು ಅಂಚೆ ಇಲಾಖೆ ಬಿಡಿಗಡೆ ಮಾಡಿರುತ್ತಾರೆ. ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇರಬಹುದು ಚೆಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ.

ಇದನ್ನೂ ಓದಿ: ಕೃಷಿ ಜೊತೆಗೆ ಉಪಕಸಬು ಮಾಡಿ ರೂ. 4,00,000/-ಕ್ಕಿಂತ ಅಧಿಕ ಆದಾಯ ಗಳಿಸುತ್ತಿರುವ ಸಾಧಕ ರೈತ

ಭಾರತ ಅಂಚೆ ಇಲಾಖೆಯ 40,000 ಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಫಲಿತಾಂಶ ಪ್ರಕಟವಾಗಿದೆ. ರಾಜ್ಯವಾರು ಮಾತ್ರವಲ್ಲದೇ ಪ್ರತಿ ರಾಜ್ಯದಲ್ಲಿನ ವೃತ್ತವಾರು (ಜಿಲ್ಲಾವಾರು) ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮಿಸ್ ಮಾಡದೇ ಜಿಲ್ಲಾವಾರು ಪಟ್ಟಿಯಲ್ಲಿ ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: ತೋಟಗಾರಿಕೆ ವಿಶ್ವವಿದ್ಯಾಲಯದಿಂದ ರೈತರ ಮಕ್ಕಳಿಗೆ ಮಾಸಿಕ ಶಿಷ್ಯವೇತನದ ಜೊತೆಗೆ ಉಚಿತ ತೋಟಗಾರಿಕೆ ತರಬೇತಿ

ಕರ್ನಾಟಕ ಅಭ್ಯರ್ಥಿಗಳು ಫಲಿತಾಂಶ ಚೆಕ್ ಮಾಡುವುದು ಹೇಗೆ?

  • ವೆಬ್ಸೈಟ್ ವಿಳಾಸ https://indiapostgdsonline.cept.gov.in/Home.aspx ಕ್ಕೆ ಭೇಟಿ ನೀಡಿ.
  • ನಂತರ ಓಪನ್ ಆಗುವ ಪುಟದಲ್ಲಿ ‘Karnataka’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಕರ್ನಾಟಕದ ಎಲ್ಲ ವೃತ್ತವಾರು ಅರ್ಹತಾ ಪಟ್ಟಿಯನ್ನು ನೀಡಿರುವ ವೆಬ್ಪೇಜ್ ಓಪನ್ ಆಗುತ್ತದೆ.
  • ನೀವು ಯಾವ ಜಿಲ್ಲೆ (ವೃತ್ತಕ್ಕೆ)ಗೆ ಅರ್ಜಿ ಸಲ್ಲಿಸಿದ್ದೀರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿ, ತಮ್ಮ ಹೆಸರು ಇರುವ ಬಗ್ಗೆ ಚೆಕ್ ಮಾಡಿಕೊಳ್ಳಿ.

ಮೂಲ ದಾಖಲೆಗಳ ಪರಿಶೀಲನೆಗೆ ಕೊನೆ ದಿನಾಂಕ: 21-03-2023 ವಾಗಿರುತ್ತದೆ.

ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದವರು ದಿನಾಂಕ 21-03-2023 ರೊಳಗೆ ಅವರ ಹೆಸರಿನ ಮುಂದೆ ನೀಡಿರುವ ಅಂಚೆ ವಿಭಾಗ ಅಧಿಕಾರಿಗಳ ಮುಂದೆ ಹಾಜರಾಗಿ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕಾಗಿರುತ್ತದೆ.

ಶೈಕ್ಷಣಿಕ ಅರ್ಹತೆ, ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರ ಸೇರಿದಂತೆ ಎಲ್ಲ ಮೂಲ ದಾಖಲೆಗಳು ಹಾಗೂ 2 ಸೆಟ್ ಜೆರಾಕ್ಸ್ ಕಾಪಿಗಳನ್ನು ತೆಗೆದುಕೊಂಡು ಹಾಜರಾಗಿ ದಾಖಲೆ ಪರಿಶೀಲನೆ ಪೂರ್ಣಗೊಳಿಸಿಕೊಳ್ಳಬೇಕು.


ಇನ್ನೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ https://indiapostgdsonline.cept.gov.in/Home.aspx ಕ್ಕೆ ಭೇಟಿ ನೀಡಿ.

ಇತ್ತೀಚಿನ ಸುದ್ದಿಗಳು

Related Articles