ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಲೆಂದು ಕರ್ನಾಟಕ ರಾಜ್ಯ ಸರಕಾರವು ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಗ್ರಾಮ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ನಮ್ಮ ಭಾರತ ದೇಶವು ದಿನೇ ದಿನೇ ಹೋದಂತೆ ಡಿಜಿಟಲ್ ಇಂಡಿಯಾವಾಗಿ ರೂಪಗೊಳ್ಳುತ್ತಿದೆ. ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ಇಲಾಖೆಯ ಕೆಲಸಗಳು ಸಹ ಡಿಜಿಟಲ್ ಇಂಡಿಯಾ ಕಾರ್ಯ ರೂಪಕ್ಕೆ ತರಲು ಹಲವಾರು ಪ್ರಯತ್ನಗಳು ನಡೆಯುತ್ತಿದೆ. ಈ ಒಂದು ಕಾರ್ಯಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳ ಸ್ಥಾಪನೆ ಕೂಡ ಬರುತ್ತದೆ.
ಸರಕಾರಿ ಕಛೇರಿ ಕೆಲಸಗಳನ್ನು ಡಿಜಟಲೀಕರಣಗೊಳಿಸಲು ಗ್ರಾಮ ಮಟ್ಟದಲ್ಲಿ ಕಾರ್ಯ ರೂಪಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಹಾಗೂ ಸರಕಾರಿ ಕೆಲಸಗಳಿಗೆ ಸಾರ್ವಜನಿಕರು ಹಾಗೂ ರೈತರು ಹೋಬಳಿ ಮತ್ತು ತಾಲೂಕುಗಳಿಗೆ ಅಲೆದಾಡಬಾರದೆಂದು ಗ್ರಾಮಮಟ್ಟದಲ್ಲೇ ಅವರಿಗೆ ಅನುಕೂಲವಾಗಲೇ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿವೆ.
ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸಿಗುವ ಸೌಲಭ್ಯಗಳು:
1)ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಕೆ
2) ರೇ಼ಷನ್ ಕಾರ್ಡ್ ಹೊಸತು ಮತ್ತು ತಿದ್ದುಪಡಿ
3)ಆಧಾರ್ ತಿದ್ದುಪಡಿ ಮತ್ತು ಮಕ್ಕಳ ಆಧಾರ್ ಮಾಡಿಸಬಹುದು
4)ಸ್ಟೂಡೆಂಟ್ ಸ್ಕಾಲರ್ ಸಿಪ್ ಅರ್ಜಿ ಸಲ್ಲಿಕೆ
5)ಆಯುಸ್ಮಾನ್ ಭಾರತ್ ಆರೋಗ್ಯ ಕಾರ್ಡ್(ಅಭಾ ಕಾರ್ಡ್)
6)ಕಟ್ಟಡ ಕಾರ್ಮಿಕ ಮಕ್ಕಳ ಸ್ಕಾಲರ್ ಸಿಪ್ ಹಾಗೂ ಮದುವೆ ಸಹಾಯಧನ ಅರ್ಜಿ ಸಲ್ಲಿಕೆ
7)voter id ಹೊಸತು ಮತ್ತು ತಿದ್ದುಪಡಿ
8)ಕಟ್ಟಡ ಕಾರ್ಮಿಕರ ಹೊಸ ಕಾರ್ಡ್ ಮತ್ತು ರಿನಿವಲ್
9)ಮನಸ್ವಿನಿ ಯೋಜನೆ
10)ವೃದ್ಧಾಪ್ಯ ವೇತನ
11)ಸಂಧ್ಯಾ ಸುರಕ್ಷಾ ಯೋಜನೆ
12)ಕಿಸಾನ್ ಸಮ್ಮಾನ್ ನಿಧಿ ಯೋಜನೆ
13)ಫುಡ್ ಲೈಸನ್ಸ್
14)RTC/ಪಹಣಿ ತೆಗೆದುಕೊಡುವುದು
15)ಪಾನ್ ಕಾರ್ಡ್ ಹೊಸತು ಹಾಗೂ ತಿದ್ದುಪಡಿ
16)ಸಣ್ಣ ಮತ್ತು ಅತೀ ಸಣ್ಣ ರೈತರ ಹಿಡುವಳಿ ಪತ್ರ
17)ವಾಸ‍್ತವ್ಯ ಪ್ರಮಾಣ ಪತ್ರ
18)ಕಲರ್ ಪ್ರಿಂಟರ್
19)ಜೀವಂತ ಧೃಡೀಕರಣ ಪತ್ರ
20)ಮರಣ ಪ್ರಮಾಣ ಪತ್ರ
21)ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ
ಸಾರ್ವಜನಿಕರು ಕಛೇರಿ ಕೆಲಸ ಕಾರ್ಯಗಳಿಗೆ ತಾಲೂಕು ಮತ್ತು ನಗರಗಳಿಗೆ ಅಲೆಯುದನ್ನು ತಪ್ಪಿಸಲು ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಕಂದಾಯ ಇಲಾಖೆಯ ಮಾರ್ಗದರ್ಶನದಲ್ಲಿ ಗ್ರಾಮಕ್ಕೆ ಒಂದರಂತೆ ಸ್ಥಾಪಿಸಲಾಗಿವೆ.