Thursday, November 14, 2024

GKVK krishi mela-ಇಂದಿನಿಂದ 4 ದಿನಗಳ ಕಾಲ ಬೆಂಗಳೂರು ಕೃಷಿ ಮೇಳ ಆರಂಭ! ವೀಕ್ಷಣೆಗೆ ಮುಕ್ತ ಅವಕಾಶ.

ಇಂದಿನಿಂದ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ  ಆವರಣದಲ್ಲಿ 4 ದಿನಗಳ ಕಾಲ ಕೃಷಿ ಮೇಳ(KRISHI MELA) ಆಯೋಜನೆ ಮಾಡಲಾಗಿದೆ. ಈ ಬಾರಿಯ ಕೃಷಿ ಮೇಳದ ವಿಶೇಷತೆಗಳು ಏನು ಎಂದು ಈ ಲೇಖನದಲ್ಲಿ ನೀಡಲಾಗಿದೆ.

ಈ ಬಾರಿಯ ಕೃಷಿ ಮೇಳದ ಘೋಷ ವಾಕ್ಯವು “ಹವಾಮಾನ ಚತುರ ಡಿಜಿಟಲ್ ಕೃಷಿ” ಎಂದು ನೀಡಲಾಗಿದೆ. ಈ ಬಾರಿಯ ಕೃಷಿ ಮೇಳದಲ್ಲಿ ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಷಾನಗಳ ಬಳಕೆ ಕುರಿತು ಮಾಹಿತಿ ಇರಲಿದೆ.

ಕೃಷಿ ಮೇಳದಲ್ಲಿ ಒಟ್ಟು 700 ವಿವಿಧ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳನ್ನು ಹಾಕಲಾಗಿದೆ. ಹಾಗೂ ಕೃಷಿಗೆ ಸಂಬಂಧ ಪಟ್ಟ ತಂತ್ರಜ್ಞಾನ ಮಳಿಗೆಗಳು ಕೂಡ ಇರಲಿವೆ. ಕೃಷಿ ಮೇಳದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಹ ಮಾಡಲಾಗುತ್ತದೆ.

ರೈತರ ಕೃಷಿ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳಿಂದ ವೈಜ್ಞಾನಿಕ ಸಲಹೆ, ವಿವಿಧ ತಜ್ಞರಿಂದ ಕೃಷಿ ಸಂಬಂದಿತ ಪ್ರಶ್ನೆಗಳಿಗೆ ನೇರ ಪರಿಹಾರ ಮತ್ತು ಸಲಹೆ ಸೂಚನೆಗಳು ದೊರೆಯಲಿದೆ.

ಇದನ್ನೂ ಓದಿ:ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹ ಕೃಷಿ ಹೊಂಡ(ಕೆರೆ) ನಿರ್ಮಾಣ ಮಾಡಿಕೊಳ್ಳಲು 80% ಸಹಾಯಧನ!

KRISHI MELA-ಈ ಬಾರಿಯ ಕೃಷಿ ಮೇಳದ ವಿಶೇಷತೆಗಳು.

1)1 ಎಕರೆಯಲ್ಲಿ ಡಿಜಿಟಲ್ ಕೃಷಿ ಅನಾವರಣ.

2)ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ.

3)ಮಣ್ಣು ರಹಿತ ಕೃಷಿ.

4)ವಿವಿಧ ಬೆಳೆಗಳ ತಳಿಗಳ ಪ್ರಾತ್ಯಕ್ಷಿಕೆ.

5)ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು.

6)ಸಾವಯವ ಕೃಷಿ ಪದ್ಧತಿಗಳು.

7)ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ.

8)ಜಲಾನಯನ ನಿರ್ವಹಣೆ .

9)ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ.

10)ರೇಷ್ಮೆ ಕೃಷಿ.

11)ಕೃಷಿ ಮಾರುಕಟ್ಟೆ ನೈಪುಣ್ಯತೆ.

12)ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು.

13)ಮಳೆ ಹಾಗೂ ಮೇಲ್ಚಾವಣಿ ನೀರಿನ ಕೊಯ್ಲು.

14)ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ.

15)ಕೃಷಿ ಸ್ವಯಂಚಾಲಿತ ತಂತ್ರಜ್ಞಾನಗಳು.

ಇದನ್ನೂ ಓದಿ:ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಿದ್ದರೆ ನಿಮ್ಮ ಮೊಬೈಲ್ ಗೆ ಈ ರೀತಿಯ SMS ಬಂದಿದಿಯೇ?

ನಮ್ಮ ರಾಜ್ಯದಲ್ಲಿ ಒಟ್ಟು ನಾಲ್ಕು ಕೃಷಿ ವಿಶ್ವವಿದ್ಯಾನಿಯಗಳಿದ್ದು ಪ್ರತಿ ವಿಶ್ವವಿದ್ಯಾನಿಲಗಳಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles