Friday, September 20, 2024

ಅಂತರಾಷ್ಟ್ರೀಯ ಮಾನ್ಯತೆ ಪಡೆದ ಜಿಲ್ಲೆಯ ಎರಡನೇ ಬೆಳೆ ತಾಲೂಕಿನ ರೈತರಿಗೆ ಹೆಚ್ಚಿದ ಗರಿಮೆ :

ಮಾವು ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವು ಭಾರತದ ಪ್ರಮುಖ ಹಣ್ಣಿನ ಬೆಳೆಯಾಗಿದೆ.ಇದರ ಹಣ್ಣುಗಳು ರುಚಿಕರವಾಗಿದ್ದು “ಎ” ಮತ್ತು “ಸಿ” ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.
ಮಾವಿನ ಹಣ್ಣುಗಳನ್ನು ತಾಜಾ ರೂಪದಲ್ಲಿ ಮತ್ತು ಸಂಸ್ಕರಿಸಿದ ಪದಾರ್ಥಗಳಲ್ಲಿ ಉಪಯೋಗಿಸಬಹುದಾಗಿದೆ.ವಿದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಪ್ತುಮಾಡಲಾಗುತ್ತದೆ.

ಕರಾವಳಿ ಪ್ರದೇಶಗಳಿಗೆ ಸೂಕ್ತ ತಳಿಗಳು :
1.ಬಾದಾಮಿ ,2. ರಸಪುರಿ,3.ನೀಲಂ,
4.ಕರಿಇಸಾಡ್5.ಬೆನೆಟ್-ಆಲ್ಪಾನ್ಸೋ, 6.ಕಲಪಾಡಿ,7.ಉಪ್ಪಿನ ಕಾಯಿ ತಳಿಗಳು :ಅಪ್ಪೆಮಿಡಿ,ಆಮ್ಲೆಟ್, ಕೌಸಜಿಪಟೇಲ.

ಇದನ್ನೂ ಓದಿ: ಮತದಾನ ಗುರುತಿನ ಚೀಟಿಯನ್ನು ಆನ್ ಲೈನ್ ನಲ್ಲಿ ನೋಂದಾಯಿಸಲು ಜಿಲ್ಲಾಧಿಕಾರಿಗಳು ಕರೆ ನೀಡಿರುತ್ತಾರೆ:

ಕರಾವಳಿ ಪ್ರದೇಶದಲ್ಲಿ ಮೇಲಿನ ಎಲ್ಲಾ ಮಾವು ತಳಿಗಳು ಸೂಕ್ತ ಅದರಲ್ಲೂ ಅಂಕೋಲಾ ತಾಲ್ಲುಕಿನ ಕರಿಇಸಾಡ್ ತಳಿ ಬಹಳ ಬೇಗ ಇಳುವರಿ ಕೊಡುವ ತಳಿಯಾಗಿದ್ದು, ಕರಾವಳಿ ಪ್ರದೇಶ ಹಾಗೂ ಘಟ್ಟ ಪ್ರದೇಶಗಳಿಗೆ ಸೂಕ್ತವಾದ ತಳಿ. ಬಹಳ ರುಚಿಕರವಾದ ಹಣ್ಣು . ತೋಟಗಾರಿಕೆ ಇಲಾಖೆ
ಜಿಐ ಟ್ಯಾಗ್ ಸಂಬಂಧ ಕಳೆದ ಮಾರ್ಚ 2022 ರಲ್ಲಿ ಅರ್ಜಿ ಸಲ್ಲಿಸಿತ್ತು.

ಇದೀಗ ಅಂಕೋಲಾದ ಕರಿ ಇಷಾಡ ಹಣ್ಣಿಗೆ ಭೌಗೋಳಿಕ ಗುರುತು(ಜಿ.ಐ.ಟ್ಯಾಗ್) ದೊರೆಯುತ್ತಿದ್ದು ಶಿರಸಿ ಸುಪಾರಿ ಬಳಿಕ ಈ ಗುರುತು ಪಡೆದ ಜಿಲ್ಲೆಯ ಎರಡನೇ ಬೆಳೆಯಾಗಿದೆ.
ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ ಸಂಸ್ಥೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಕರಿ ಇಷಾಡ ಮಾವಿನ ಹಣ್ಣನ್ನು ಜಿ.ಐ.ಟ್ಯಾಗ್ ಗೆ ಪರಿಗಣಿಸಿರುವ ಮಾಹಿತಿ ಪ್ರಕಟಿಸಿದೆ. 2032ರ ಮಾರ್ಚವರೆಗೆ ಜಿ.ಐ.ಟ್ಯಾಗ್ ಪರಗಣಿಸುವುದುದಾಗಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ರೈತರ ಆತ್ಮಹತ್ಯೆ ಪತ್ನಿಗೆ ವಿಧವಾ ವೇತನ,ವೃದಾಪ್ಯ ವೇತನ, ವಿವಿಧ ಸಹಾಯಧನ ಪಡೆಯುವ ಹೊಸ ಅರ್ಜಿಗೆ ಅವಕಾಶವಿಲ್ಲ, ಯಾಕೆ, ಕಾರಣವೇನು?

ಅಂಕೋಲಾ ತಾಲೂಕಿನಲ್ಲಿ ಸುಮಾರು 80 ಹೆಕ್ಟೇರ್ ಪ್ರದೇಶದಲ್ಲಿ ಈ ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತಿದೆ. ಬೇರೆಲ್ಲೂ ಸಿಗದ ಕರಿ ಇಷಾಡಕ್ಕೆ ಭಾರಿ ಬೇಡಿಕೆಯೂ ಇದೆ. ಇದೀಗ ಭೌಗೋಳಿಕ ಗುರುತು ಪಡೆಯುವ ಮೂಲಕ. ವಿಶಿಷ್ಟ ಬೆಳೆ ಎಂದು ಅಧೀಕೃತವಾಗಿ ಸಾಭೀತು ಗೊಂಡಿದೆ.

ಸಂಸದಅನಂತ ಕುಮಾರ ಹೆಗಡೆ ಸೋಚನೆ ಮೇರೆಗೆ ತೋಟಗಾರಿಕಾ ಇಲಾಕೆ, ನಬಾರ್ಡ ನೆರವಿನೊಂದಿಗೆ ಕರಿ ಇಷಾಡಕ್ಕೆ ಜಿ.ಐ.ಟ್ಯಾಗ್ ಪಡೆಯಲು ಪ್ರಯತ್ನ ನಡೆಸಿತ್ತು.
ಈ ಸಂಬಂಧಅಂಕೋಲಾದ ಮಾತಾ ತೋಟಗಾರ್ಸ್ ಫಾರ್ಮಸ್ ಪ್ರೊಟ್ಯೂಸರ್ ಕಂಪನಿ ಪರಿಸರ ತಜ್ಞೆ ಶಿವಾನಂದ ಕಳವೆ ಒದಗಿಸಿದ ದಾಖಲೆಯ ಸಹಾಯದೊಂದಿಗೆ ಜಿ.ಐ.ಟ್ಯಾಗ್ ಅರ್ಜಿ ಸಲ್ಲಿಸಿತ್ತು.

ಜಿ.ಐ. ಟ್ಯಾಗ್ ಶೀಘ್ರಲಭ್ಯ:


`ಜಿ.ಐ.ಟ್ಯಾಗ್ ಪ್ರಮಾಣ ಪತ್ರ ಲಭಿಸಬೇಕಿದ್ದು, ಈಗಾಗಲೇ ಅಧಿಕೃತ ವೆಬ್ಸೈಟ್ನಲ್ಲಿ ಮಾನ್ಯತೆ ಲಭಿಸಿರುವುದು ಪ್ರಕಟವಾಗಿದೆ. ನಬಾರ್ಡ ಸಹಯೋಗದೊಂದಿಗೆ ಭೌಗೋಳಿಕ ಗುರುತು ಪಟ್ಟ ಪಡೆಯಲು ತಾಂತ್ರಿಕ ಸಹಾಯಗಳನ್ನು ಒದಗಿಸಲಾಗಿತ್ತು’ ಎಂದು ತೊಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಪಿ.ಪಿ. ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಆಧುನಿಕ ರೈತರಿಗೆ ಮಾದರಿಯಾದ ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ ಸಾಮಾನ್ಯ ರೈತ

.ಅಂಕೋಲಾ ತಾಲೂಕಿನ ಪೂಜಗೇರಿ, ಹೊಸಗದ್ದೆ, ಶಿರೂರು,ಬಾಸಗೋಡ, ಬೆಳಂಬಾರ್‍,ಮುಂತಾದ ಹಳ್ಳಿಗಳಲ್ಲಿ ಈ ಹಣ್ಣನ್ನು ಬೆಳೆಲಾಗುತ್ತದೆ.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಬೇಡಿಕೆ ಹೊಂದಿರುವ ಕರಿಇಸಾಡ್ ಮಾವು ಸುವಾಸನೆ ಭರಿತ ಹಾಗೂ ವಿಶೇಷ ರುಚಿ ಹೊಂದಿದೆ. ಅಂಕೋಲಾ ತಾಲೂಕಿನಲ್ಲಿ 500-600 ಹೆಕ್ಟೇರ್‍ ಪ್ರದೇಶದಲ್ಲಿ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ.ಇದರಲ್ಲಿ 80-100 ಹೆಕ್ಟೇರ್‍ ಪ್ರದೇಶದಲ್ಲಿ ಕರಿಇಸಾಡ್ ವ್ಯಾಪಿಸಿದೆ.
ಐಜಿ ಟ್ಯಾಗ್ ಸಿಕ್ಕಿರುವುದು ಅಂಕೋಲಾ ತಾಲೂಕಿಗೆ ಇನ್ನು ಹೆಚ್ಚಿನ ಗರಿಮೆ ಮತ್ತು ಹಿರಿಮೆ ಬರುವುದು. ಮಾವು ಬೆಳೆಯುವ ರೈತರ ಮೂಖದಲ್ಲಿ ಉತ್ಸಹ ಕಾಣುವುದು ಖಚಿತ.

ಇತ್ತೀಚಿನ ಸುದ್ದಿಗಳು

Related Articles