Thursday, November 21, 2024

Free training mobile repair-ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ರುಡ್ ಸೆಟ್ ಸಂಸ್ಥೆ ಅರಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆವತಿಯಿಂದ ಉಚಿತ ವಸತಿ-ಊಟ ಸಹಿತ ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆಯು ಅತೀ ತೀವ್ರ ಗತಿಯಲ್ಲಿ ಹೆಚ್ಚುತ್ತಿದ್ದು ಮೊಬೈಲ್ ರಿಪೇರಿ ಬ್ಯುಸಿನೆಸ್ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಅವಕಾಶವಿರುವ ಕಾರಣ ನಿರುದ್ಯೋಗಿ ಯುವಕರು ಈ ತರಬೇತಿಯನ್ನು ಪಡೆದುಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಬಹುದು.

ರುಡ್ ಸೆಟ್ ಸಂಸ್ಥೆ ಅರಶಿನಕುಂಟೆ,(ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ದಿನಾಂಕ 11/ಸೆಪ್ಟಂಬರ್/2024 ರಿಂದ 11/ಅಕ್ಟೋಬರ್/2024 ರವರೆಗೆ mobile repair training ಈ ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ.

ಇದನ್ನೂ ಓದಿ:ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2.ಫಾಸ್ಟ ಫುಡ್ ತಯಾರಿಕೆ (10 ದಿನಗಳು)

3.ಅಣಬೆ ಬೇಸಾಯ (10 ದಿನಗಳು)

4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6.ಬೇಕರಿ ಆಹಾರ ತಯಾರಿಕೆ (1 ತಿಂಗಳು)

ಇದಲ್ಲದೇ ಇನ್ನೂ ಹಲವಾರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.

How to join training- ತರಬೇತಿಯನ್ನು ಯಾರೆಲ್ಲ ಸೇರಬಹುದು?

1.ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು.

2.ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಲ್ ಅಥವಾ ಅಂತ್ಯೋದಯ ಅಥವಾ ನರೇಗಾ ಜಾಬ್ ಕಾರ್ಡ್ ಹೊಂದಿರಬೇಕು.

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಯಾಣ ಪತ್ರ ನೀಡಲಾಗುತ್ತದೆ.

ಇದನ್ನೂ ಓದಿ:ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಮೂಲಕ ಮಾಡಲಾಗುತ್ತಿದ್ದು, ನಿಮ್ಮ ಜಮೀನಿನ ಸಮೀಕ್ಷೆ ಆಗಿದೆಯೇ? ಹೀಗೆ ತಿಳಿದುಕೊಳ್ಳಿ.

training -ತರಬೇತಿ ನಡೆಯು ಸ್ಥಳ:

ಉಚಿತ ಮೊಬೈಲ್ ರಿಪೇರಿ ತರಬೇತಿಯು ರುಡ್ ಸೆಟ್ ಸಂಸ್ಥೆ ಅರಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುತ್ತದೆ.

ರುಡ್ ಸೆಟ್ ಸಂಸ್ಥೆ,ದಕ್ಷಿಣ ಕನ್ನಡ(ಮಂಗಳೂರು)(ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ) ಇಲ್ಲಿಯು ಈ ತರಬೇತಿ ಕೆಲವು ಬಾರಿ ಆಯೋಜನೆ ಮಾಡಿರುತ್ತಾರೆ ಅದರ ಬಗ್ಗೆ ತಿಳಿದುಕೊಳ್ಳಲು ಈ ಮೊಬೈಲ್ ನಂಬರಗೆ ಸಂಪರ್ಕಿಸಿ. 08256236404/9591044014/9900793675 Whatspp ಮೂಲಕ ಅರ್ಜಿ ಸಲ್ಲಿಸಲು:6364561982

ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಲು ಈ ಕೆಳಗೆ ನೀಡಲಾದ ಮೊಬೈಲ್ ಸಂಪರ್ಕಿಸಬಹುದು. 9740982585, 9380162042

ಇತ್ತೀಚಿನ ಸುದ್ದಿಗಳು

Related Articles