ಆತ್ಮೀಯ ಸ್ನೇಹಿತರೇ ಗ್ರಾಮೀಣ ಪ್ರದೇಶದ ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಮಹಿಳೆಯರೂ, ಹಾಗೂ ಶಾಲಾ ಕಾಲೇಜು ಮುಗಿಸಿ ಮನೆಯಲ್ಲೇ ಇರುವ ಅಕ್ಕ, ತಂಗಿಯರು ಇದ್ದರೆ ಅವರಿಗೆ ಸುವರ್ಣ ಅವಕಾಶ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಈ ವೇಳೆಯಲ್ಲಿ ಹೊಲಿಗೆ (ಟೇಲರಿಂಗ್ )ತರಬೇತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಸ್ಥಳ: ಬಳ್ಳಾರಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿರುತ್ತದೆ.
ವಿದ್ಯಾರ್ಹತೆ
ಕನಿಷ್ಟ 7ನೇ ತರಗತಿ ಪಾಸಾಗಿರಬೇಕು.
ತರಬೇತಿಯ ಬಗ್ಗೆ ಪ್ರಾಥಮಿಕ ಅನುಭವ ಹೊಂದಿದವರಿಗೆ ಆದ್ಯತೆ ಕೊಡಲಾಗುವದು.
35 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸ್ವ-ವಿವರವುಳ್ಳ ಮಾಹಿತಿಯನ್ನು ಬಿಳಿ ಹಾಳೆ ಮೇಲೆ ಬರೆದು, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ರೇಷನ್ ಕಾರ್ಡ್ನ ಝೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕಾಗಿರುತ್ತದೆ.
ಇದನ್ನೂ ಓದಿ: POST ಆಫೀಸ್ ನಿಂದ ಹೊಸ ಯೋಜನೆ -ಮಾಸಿಕ ಆದಾಯಕ್ಕೆ ಉತ್ತಮ ಅವಕಾಶ.
ಅರ್ಜಿ ಸಲ್ಲಿಸಲು ವಯಸ್ಸು:
20 ರಿಂದ 45 ವಯೋಮಿತಿಯೊಳಗಿನ ನಿರುದ್ಯೋಗಿ ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:
ಅರ್ಜಿಯನ್ನು ಏಪ್ರಿಲ್ 20 ರೊಳಗೆ ಬಳ್ಳಾರಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ನೀಡಬೇಕು.
ಏಪ್ರಿಲ್ 24 ರಿಂದ ತರಬೇತಿಗಳು ಆರಂಭವಾಗಲಿದೆ. ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಯಲ್ಲಿ ಪಾಲ್ಗೊಳ್ಳಲು ತಗುಲುವ ಪ್ರಯಾಣ ಭತ್ಯೆಯನ್ನು ತಾವೇ ಭರಿಸಬೇಕು.
ಇದನ್ನೂ ಓದಿ: ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಯುವಕ ಯುವತಿಯರಿಗೆ ತರಬೇತಿಗೆ ಅರ್ಜಿ ಆಹ್ವಾನ:
ಹೆಚ್ಚಿನ ಮಾಹಿತಿಗಾಗಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಡಿ.ಐ.ಸಿ ಕಾಂಪೌಂಡ್ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರ ಕಚೇರಿ ಅಥವಾ ಸಂಸ್ಥೆಯ ದೂ:08392-299117, ಮೊ.9663770207 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರವೀಣ್ ಬಸವರಾಜು ಅವರು ತಿಳಿಸಿದ್ದಾರೆ.