Thursday, September 19, 2024

Free Training : ಡಿಜಿಟಲ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಉಚಿತ ತರಬೇತಿ,

Free Training : ಡಿಜಿಟಲ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಉಚಿತ ತರಬೇತಿ, ನಿರುದ್ಯೋಗಿ ಯುವಕರಿಗೆ ಉಚಿತ ತರಬೇತಿ SSLC/PUC/Degree ನಂತರ ಮುಂದೇನು?


ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ವರೆಗೆ ತರಬೇತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಶಿಕ್ಷಣ ವಂಚಿತರಿಗೆ/ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಒಂದು ಸುವರ್ಣವಕಾಶ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಉಚಿತ ಉಚಿತ ಡಿಜಿಟಲ್ ಪೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ಉಚಿತ ತರಬೇತಿ ಅರ್ಜಿ ಆಹ್ವಾನ ಮಾಡಲಾಗಿದೆ.

ಆತ್ಮೀಯ ಸ್ನೇಹಿತರೇ ನೀವು ಏನಾದರೂ ಸ್ವ-ಉದ್ಯೋಗ ಪ್ರಾರಂಭಿಸಬೇಕು ಅಂತ ಆಸಕ್ತಿಯಿದ್ದು, ಮತ್ತು ಸೂಕ್ತ ತರಬೇತಿ ಬೇಕಾದರೆ ಇಲ್ಲಿ ನಿಮಗೆ ಒಂದು ಸುವರ್ಣ ಅವಕಾಶವಿರುತ್ತದೆ.

ಹೌದು
ಗ್ರಾಮೀಣ ಭಾಗದ ನಿರೂದ್ಯೋಗಿ ಯುವಕರಿಗೆ ಸ್ವ- ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನ ಮತ್ತು ಪ್ರಾರಂಭಿಕ ಹಂತದಲ್ಲಿ ಅರ್ಥಿಕ ಸಹಾಯಧನಕ್ಕೆ ಬ್ಯಾಂಕ್‌ ಗಳಿಂದ ಸಾಲ ಸೌಲಭ್ಯ ಪಡೆಯಲು ಇತ್ಯಾದಿ ವಿಷಯಗಳ ಕುರಿತು ಅಧಿಕೃತ ಸಂಪನ್ಮೂಲ ವ್ಯಕ್ತಿಗಳಿಂದ ಈ ತರಬೇತಿಯಲ್ಲಿ ಅಗತ್ಯ ಮಾಹಿತಿಯನ್ನು ಕೊಡಲಾಗುತ್ತದೆ ಈ ಸಂಸ್ಥೆಯಿಂದ ನೀಡಲಾಗುತ್ತದೆ.

ತರಬೇತಿ ಅವಧಿ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಇಲ್ಲಿ ಶಿಕ್ಷಣ ವಂಚಿತರಿಗೆ/ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಪ್ರಾಯೋಗಿಕವಾಗಿ 30/10/2023 ರಿಂದ 28/11/2023 ರವರೆಗೆ ಒಂದು ತಿಂಗಳ ಕಾಲ ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಕಾಲ ತರಬೇತಿ ಜೊತೆಗೆ ತರಬೇತಿದಾರರಿಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ.ಜೊತೆಗೆ ತರಬೇತಿ ಪಡೆದ ಮೇಲೆ ಸ್ವ-ಉದ್ಯೋಗ ಮಾಡುವವರಿಗೆ ಬ್ಯಾಂಕ್ ನಿಂದ ಸಾಲ ಸೌಲಬ್ಯವನ್ನು ಒದಗಿಸಿಕೊಡುವ ಅವಕಾಶವಿರುತ್ತದೆ.

ತರಬೇತಿ ಸೇರಲು ಬೇಕಾದ ದಾಖಲೆಗಳು:

ಅಭ್ಯರ್ಥಿಗಳ ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ
ಬ್ಯಾಂಕ ಪಾಸ್
ರೇಷನ್ ಕಾರ್ಡ
ಆಧಾರ ಕಾರ್ಡ
ಇಲ್ಲಿ ತಿಳಿಸಿದ ಎಲ್ಲಾ ದಾಖಲೆಗಳ 2 set ಝೆರಾಕ್ಸ ಪ್ರತಿ ನೀಡಬೇಕಾಗಿರುತ್ತದೆ.
ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಮೊದಲ ಅವಕಾಶ ನೀಡಲಾಗಿರುತ್ತದೆ.

ತರಬೇತಿಯಲ್ಲಿ ಭಾಗವಹಿಸುವವರು ವಯಸ್ಸಿನ ಮಿತಿ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ತರಬೇತಿ ಸೇರಬಯಸುವವರು ವಯಸ್ಸು 18- 45 ವಯಸ್ಸಿನವರಾಗಿರಬೇಕು.

ತರಬೇತಿ ನಡೆಯುವ ಸ್ಥಳ ಮತ್ತು ಸಂಪರ್ಕ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಇಂಡಸ್ಟ್ರಿಯಲ್ ಏರಿಯಾ,ಹೆಗಡೆ ರಸ್ತೆ,ಕುಮಟಾ, ಉತ್ತರ ಕನ್ನಡ ಜಿಲ್ಲೆ -581343
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449860007, 9538281989, 9916783825, 8880444612, 9620962004. ಇಲ್ಲಿ ನೀಡಿರುವ ಮೊಬೈಲ್ ಕರೆ ಮಾಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಇದನ್ನೂ ಓದಿ: Post Office Scholarship:ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಇದನ್ನೂ ಓದಿ: ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೊರೆವೆಲ್ ಕೊರೆಸಲು ಸಹಾಯಧನ
ಇದನ್ನೂ ಓದಿ: ವಾಹನ ಖರೀದಿಸಲು ಧನಸಹಾಯ ಇಂದೇ ಅರ್ಜಿ ಸಲ್ಲಿಸಿ !!
ಇದನ್ನೂ ಓದಿ: ಟ್ರಾಕ್ಟರ್ ಜಂಕ್ಷನ್ (Tractor Juction) ನಲ್ಲಿ ಯಾವೆಲ್ಲ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು ಲಭ್ಯ?

ಇತ್ತೀಚಿನ ಸುದ್ದಿಗಳು

Related Articles