Sunday, November 10, 2024

Free Coconut Tree Climbing Machine: ತೆಂಗಿನ ತರಬೇತಿ ಜೊತೆಗೆ ಉಚಿತ ತೆಂಗಿನಮರ ಹತ್ತುವ ಯಂತ್ರ ವಿತರಣೆ:

ಆತ್ಮೀಯ ರೈತ ಬಾಂದವರೇ ನೀವು ತೆಂಗು ಬೆಳೆಗಾರರು ಆಗಿದ್ದರೇ ಅವಶ್ಯಕವಾಗಿ ಈ ಮಾಹಿತಿಯನ್ನು ತಿಳಿಯಿರಿ. ಹಾಗೂ ನಿಮ್ಮ ನೇರೆ ಹೊರೆಯವರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.

ತೆಂಗಿನ ಕಾಯಿ ಬೆಳೆಗಾರರಿಗೆ ಮುಖ್ಯವಾಗಿ ಇತ್ತೀಚೀನ ದಿನಗಳಲ್ಲಿ ತೆಂಗಿನಕಾಯಿ ಕೀಳಲು ಕಾರ್ಮಿಕರ ಸಮಸ್ಯೆ ಬಹಳ ಕಾಡುತ್ತಿದೆ. ಸೂಕ್ತ ಸಮಯಕ್ಕೆ ತೆಂಗು ಕೀಳಲಾಗದೆ ಪೂರೈಕೆಯಲ್ಲಿ ವ್ಯತ್ಯಾಸ. ತೋಟದ ನಿರ್ವಹಣೆ ಬಗ್ಗೆ ಮಾಹಿತಿ ಕೊರತೆ.

ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ತೆಂಗಿನಕಾಯಿ ಕೃಷಿಕರಿಗೆ ಅನುಕೂಲವಾಗುವ ನೂತನ ಯೋಜನೆ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೆಂಗು ಅಭಿವೃದ್ಧಿ ಮಂಡಳಿ, ಪ್ರಾಯೋಜಿತ ರೈತರಿಗೆ 2023-24ನೇ ಸಾಲಿನ ತೆಂಗಿನ ಮರ ಹತ್ತುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: ಆಳ್ವಾಸ್ ಪತಿಷ್ಠಾನ ಶಿಕ್ಷಣ ಸಂಸ್ಥೆ, ಸಂಪೂರ್ಣ ಉಚಿತ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಅರ್ಜಿ ಆಹ್ವಾನ

ತರಬೇತಿಯಲ್ಲಿ ನೀಡಲಾಗುವ ವಿಷಯಗಳು:
ತೆಂಗಿನ ಮರ ಏರುವ ಸಾಧನ ಬಳಸಿ ತೆಂಗಿನ ಮರ ಏರುವುದು,
ತೆಂಗಿನ ಕಾಯಿ ಕೀಳುವುದು, ಬಲಿತ ತೆಂಗಿನ ಕಾಯಿ ಗುರುತಿಸುವುದು,
ತೆಂಗಿನ ಮರಕ್ಕೆ ಬರುವ ರೋಗ ಮತ್ತು ಕೀಟ ಬಾಧೆ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು,


ರಸಗೊಬ್ಬರ ಕೊಡುವ ವಿಧಾನ, ತೆಂಗು ಉತ್ಪನ್ನ ತಯಾರಿಕೆ,
ತೆಂಗಿನ ತಳಿ ನಾಟಿ, ತೆಂಗಿನ ನರ್ಸರಿ ನಿರ್ವಹಣೆ ಹಾಗೂ ವೌಲ್ಯವರ್ಧಿತ ಉತ್ನನ್ನಗಳ ಬಗ್ಗೆ ಮಾಹಿತಿಯನ್ನು ತರಬೇತಿ ಅವಧಿಯಲ್ಲಿ ಕೃಷಿಕರಿಗೆ ನೀಡಲಾಗುವುದು.

ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೆಂಗು ಅಭಿವೃದ್ಧಿ ಮಂಡಳಿ, ಪ್ರಾಯೋಜಿತ ರೈತರಿಗೆ 2023-24ನೇ ಸಾಲಿನ ತೆಂಗಿನ ಮರ ಹತ್ತುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ತರಬೇತಿಯ ವಿವರಗಳು ಈ ಕೆಳಗಿನಂತಿವೆ.

ವಯೋಮಿತಿ 18 ರಿಂದ 40 ವರ್ಷದ ಒಳಗಿನ ಯುವಕ ಯುವತಿಯರಿಗೆ ಅವಕಾಶ.
6 ದಿನಗಳ ತರಬೇತಿ ಕಾರ್ಯಕ್ರಮ
ತರಬೇತಿ ಪಡೆದ ಫಲಾನುಭವಿಗಳಿಗೆ ಉಚಿತ ಮರ ಹತ್ತುವ ಉಪಕರಣವನ್ನು ವಿತರಿಸಲಾಗುವುದು.
ತರಬೇತಿ ಪಡೆದ ಫಲಾನುಭವಿಗಳಿಗೆ ಒಂದು ವರ್ಷದ ಉಚಿತ ವಿಮಾ ಯೋಜನೆ
ತರಬೇತಿ ಕಾರ್ಯಕ್ರಮವು ಜನವರಿ ತಿಂಗಳಿನಲ್ಲಿ 2024ರಲ್ಲಿ ನಡೆಯಲಿರುವುದು…

ಇದನ್ನೂ ಓದಿ: ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ವಿಜೇತರಿಗೆ ಆಕರ್ಷಕ ನಗದು ಬಹುಮಾನ

ಕೃಷಿ ವಿಜ್ಞಾನ ಕೇಂದ್ರ, ಮಂಗಳೂರುನಲ್ಲಿ ಕೇರ ಸುರಕ್ಷಾ ವಿಮೆ ಅರ್ಜಿ ಭರ್ತಿ ಮಾಡಿ ಕೊಟ್ಟ ಮೊದಲು 20 ಜನಕ್ಕೆ ಆದ್ಯತೆಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 8088131431

ತರಬೇತಿಯಲ್ಲಿ ತೆಂಗಿನ ಏರುವ ಹಾಗು ತೆಂಗು ಕೃಷಿ ಮಾತ್ರವಲ್ಲದೆ ಪ್ರತಿದಿನ ಯೊಗಾಭ್ಯಾಸ, ಸಂವಹನ, ವ್ಯಕ್ತಿತ್ವ ವಿಕಸನ ತರಬೇತಿ ಕೂಡಾ ನೀಡಲಾಗುತ್ತದೆ.

ಇದನ್ನೂ ಓದಿ: Interim Crop Insurance: ಈ ಜಿಲ್ಲೆಯ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರು.

ಇತ್ತೀಚಿನ ಸುದ್ದಿಗಳು

Related Articles