Saturday, October 5, 2024

ಭತ್ತದಲ್ಲಿ ಬೆಂಕಿ ರೋಗ ನಿರ್ವಹಣೆಗೆ ಈ ಕ್ರಮ ಅನುಸರಿಸಿ

ಇದು ಪ್ರಮುಖ ರೋಗವಾಗಿದ್ದು ಇಳುವರಿಯಲ್ಲಿ ಅಪಾರ ನಷ್ಟಕ್ಕೆ ಕಾರಣವಾಗಿದೆ. ತಪ್ಪದೇ ಬೀಜೋಪಚಾರಮಾಡಿ ಬಿತ್ತನೆ ಮಾಡಿರಿ 2-3 ಗ್ರಾಂ ಕಾರ್ಬಂಡೈಜಿಮ್ ಪ್ರತಿ 1 ಕೆಜಿ ಬೀಜಕ್ಕೆ ಸಸಿಮಡಿ ಮತ್ತು ಮುಖ್ಯಭೂಮಿಯಲ್ಲಿ ರೋಗ ಲಕ್ಷಣ ಕಂಡ ತಕ್ಷಣ 0.6 ಗ್ರಾಂ ಟ್ರೈಸೈಕ್ಲೋಜೋಲ್ ಪ್ರತಿ 1 ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಕೈಗೊಳ್ಳಿರಿ.

ಗಮನಿಸಿ :
* ಸಾಲುನಾಟಿ ಮಾಡಿರಿ
* ಪ್ರತಿ ಚದರ್‌ ಮೀಟರ್‌ಗೆ ಸಸಿಗಳ ಸಂಖ್ಯೆ ಕಾಪಾಡಿರಿ.
* ಸಮತೋಲನ ಪೋಷಕಾಂಶಗಳನ್ನು ಒದಗಿಸಿರಿ.
* ಗದ್ದೆಗಳ ಬದುಗಳನ್ನು ಸ್ವಚ್ಚಗೊಳಿಸುತ್ತಿರಬೇಕು.
* ರೋಗನಾಶಕ ಔಷಧಿಯನ್ನು ಬೆಳೆಗಳ ಮೇಲೆ ಅಲ್ಲದೆ ಬದುಗಳ ಮೇಲೆಯೂ ತಪ್ಪದೇ ಸಿಂಪರಣೆ ಕೈಗೊಳ್ಳಿರಿ.
* ಬಾಧೆಗೊಳಗಾದ ಗದ್ದೆಗಳಿಗೆ ಯೂರಿಯಾ ರಸಗೊಬ್ಬರ ಕೊಡಬಾರದು.
* ಸಾಮೂಹಿಕ ಪ್ರಯತ್ನಅತೀ ಅವಶ್ಯ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles