ಆತ್ಮೀಯ ರೈತ ಬಾಂದವರೇ ನರೇಗಾ ಯೋಜನೆಯಡಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಹಲವಾರು ಕಾಮಗಾರಿಗಳನ್ನು ವೈಯಕ್ತಿಕ ಮತ್ತು ಸಾಮೂಹಿಕವಾಗಿ ಮಾಡಿಕೊಳ್ಳಲು ಅವಕಾಶವಿರುತ್ತದೆ.ಈ ಯೋಜನೆಯಡಿ ನಿಮ್ಮ ತಾಲ್ಲೂಕು ಮತ್ತು ಹೋಬಳಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿರುತ್ತದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಪ್ರತಿ ಹೊಲದಲ್ಲಿ ಬದು, ರೈತನ ಮೊಗದಲ್ಲಿ ನಗು.
ಕಂದಕ ಬದು ಮತ್ತು ಕೃಷಿ ಹೊಂಡ ನಿರ್ಮಾಣದ ಲಾಭಗಳು
ಪ್ರವಾಹ ನಿಯಂತ್ರಣ ಸವಕಳಿ ತಡೆ, ಮಣ್ಣಿನ ತೇವಾಂಶದಲ್ಲಿ ಹೆಚ್ಚಳ,
ಪ್ರತಿ ಹನಿಗೂ ಹೆಚ್ಚು ಬೆಳೆ.
ಪ್ರತಿ ಎಕರೆ ಪ್ರದೇಶದಲ್ಲಿ ಕಂದಕ ಬದು ನಿರ್ಮಾಣದಿಂದ 2,00,000 ಲೀ,ಹಾಗೂ ಪ್ರತಿ ಕೃಷಿ ಹೊಂಡದಿಂದ 1,23,000 ಲೀ ಮಳೆ ನೀರು ಸಂಗ್ರಹ.
ಶೇಕಡಾ 15 ರಷ್ಟು ಅಧಿಕ ಇಳುವರಿ.
ಕೃಷಿಹೊಂಡದಿಂದ ಮೀನುಗಾರಿಕೆಗೂ ಅನುಕೂಲ.
ಕೃಷಿಹೊಂಡ:
ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ
ಕೃಷಿ ಹೊಂಡ ಅಳತೆ ಆರ್ಥಿಕ ನೆರವಿನ ಮೊತ್ತ
ಕೃಷಿ ಹೊಂಡ ಅಳತೆ | ಆರ್ಥಿಕ ನೆರವಿನ ಮೊತ್ತ |
9x9x3 ಮೀ | ರೂ. 67,365/- |
10x10x3 ಮೀ | ರೂ. 77,465/- |
12x12x3 ಮೀ | ರೂ. 1,02,840/- |
15x15x3 ಮೀ | ರೂ. 1,53,465/- |
ರೇಷ್ಮೆ ಕೃಷಿ:
ಹಿಪ್ಪು ನೇರಳೆ ಅಭಿವೃದ್ಧಿ (ಪ್ರತಿ ಎಕರೆಗೆ) ಆರ್ಥಿಕ ನೆರವಿನ ಮೊತ್ತ
ಹಿಪ್ಪು ನೇರಳೆ ಅಭಿವೃದ್ಧಿ (ಪ್ರತಿ ಎಕರೆಗೆ) | ಆರ್ಥಿಕ ನೆರವಿನ ಮೊತ್ತ |
ಹಿಪ್ಪು ನೇರಳೆ ನರ್ಸರಿ | ರೂ.1,55,604/- |
ಹಿಪ್ಪು ನೇರಳೆ ಜೋಡಿ ಸಾಲು ಪದ್ದತಿ ಮತ್ತು 2 ವರ್ಷದ ನಿರ್ವಹಣೆ ಸೇರಿ | ರೂ.2.00/-ಲಕ್ಷದವರೆಗೆ |
ಹಿಪ್ಪು ನೇರಳೆ ಮರಗಡ್ಡಿ ಪದ್ದತಿ ನಾಟಿ ಮತ್ತು 2 ವರ್ಷದ ನಿರ್ವಹಣೆ ಸೇರಿ | ರೂ.1,16,533/- |
ಇದನ್ನೂ ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ
ತೋಟಗಾರಿಕೆ:
ತೋಟಗಾರಿಕೆ ಬೆಳೆ(ಪ್ರ.ಹೆ.) ಆರ್ಥಿಕ ನೆರವಿನ ಮೊತ್ತ
ತೋಟಗಾರಿಕೆ ಬೆಳೆ(ಪ್ರ.ಹೆ.) | ಆರ್ಥಿಕ ನೆರವಿನ ಮೊತ್ತ |
ತೆಂಗು | ರೂ.66,480/- |
ಮಾವು/ಸಪೋಟಾ | ರೂ.47,275/- |
ದಾಳಿಂಬೆ | ರೂ.62,503/- |
ಸೀಬೆ | ರೂ.1,01,866/- |
ಸೀತಾಫಲ | ರೂ.56,001/- |
ನುಗ್ಗೆ | ರೂ.1,24,396/- |
ಗುಲಾಬಿ (0.4ಹೆ) | ರೂ.2,00,000/- |
ಮಲ್ಲಿಗೆ (0.4ಹೆ) | ರೂ.66,880/- |
ಇದನ್ನೂ ಓದಿ: ಈ ಮೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ:
ನಿಮ್ಮ ಗ್ರಾಮ ಪಂಚಾಯತಿಯನ್ನು ಇಂದೇ ಸಂಪರ್ಕಿಸಿ: ಕುಟುಂಬಕ್ಕೆ 100 ದಿನಗಳ ಕೆಲಸ ಗ್ಯಾರಂಟಿ ದಿನಕ್ಕೆ ರೂ.275/- ಕೂಲಿ.
ವಿಶೇಷ ಸೂಚನೆ ಅನುದಾನ ಅನುಗುಣವಾಗಿ ಈ ಕಾಮಗಾರಿಗಳನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಪ್ರಯೋಜನೆಯನ್ನು ಪಡೆದುಕೊಳ್ಳಿ.