Thursday, November 21, 2024

Fid registration-ರೈತರ ನೋಂದಣಿ (Fid) ಎಲ್ಲಿ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು!

ನಮಸ್ಕಾರ ರೈತರೇ, ಕೃಷಿಕರು ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಇನ್ನೂ ಮುಂದೆ ರೈತರ ನೋಂದಣಿ (Fid) ಮಾಡಿಸಿಕೊಂಡಿರಬೇಕು. ಈ ರೈತರ ನೋಂದಣಿಯನ್ನು (Fid) ಎಲ್ಲಿ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು ಏನು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಕರ್ನಾಟಕ ರಾಜ್ಯ ಸರಕಾರವು ರೈತರಿಗೆ ಅನುಕೂಲ ಮತ್ತು ಇಲಾಖೆಯ ಸೌಲಭ್ಯಗಳು ಹೆಚ್ಚಿನ ಜನರಿಗೆ ದೊರೆಯಲಿ ಎಂಬ ಉದ್ದೇಶದಿಂದ ರೈತರ ನೋಂದಣಿಯನ್ನು (Fid) ಮಾಡಿಸುವ ಕಾರ್ಯವನ್ನು ಜಾರಿಗೆ ತಂದಿದ್ದಾರೆ.

ಇನ್ನೂ ತುಂಬಾ ಜನ ರೈತರಿಗೆ ರೈತರ ನೋಂದಣಿ (Fid) ಎಲ್ಲಿ ಮಾಡಿಸಬೇಕು ಮತ್ತು ಅದರಿಂದ ಸಿಗುವ ಲಾಭಗಳು ಏನು ಎಂದು ಸರಿಯಾಗಿ ಮಾಹಿತಿ ಇಲ್ಲ. ಇದರಿಂದ ಇನ್ನೂ ತುಂಬಾ ಜನ ರೈತರು ರೈತರ ನೋಂದಣಿಯನ್ನು ಮಾಡಿಸಿಕೊಂಡಿಲ್ಲ. ಎಲ್ಲರೂ ತಪ್ಪದೇ ರೈತರ ನೋಂದಣಿ (Fid) ಮಾಡಿಸಿಕೊಳ್ಳಿ.

ಇದನ್ನೂ ಓದಿ:ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿಲ್ಲವೇ ಆದಷ್ಟು ಬೇಗನೆ ಸಮೀಕ್ಷೆಗಾರರನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿಸಿ. ಸಮೀಕ್ಷೆಗಾರರ ಮಾಹಿತಿ ಇಲ್ಲಿದೆ.

Fid registration-ರೈತರ ನೋಂದಣಿ (Fid) ಪ್ರಯೋಜನಗಳು:

1)ಕೃಷಿ ಮತ್ತು ತೋಟಗಾರಿಕೆ ವಿವಿಧ ಸವಲತ್ತು ಪಡೆಯಲು ಕಡ್ಡಾಯ.

2)ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿವಿಧ ಸಹಕಾರಿ ಬ್ಯಾಂಕಗಳಲ್ಲಿ ಕೃಷಿ ಸಾಲ ಪಡೆಯಲು ಕಡ್ಡಾಯ.

3)ಬೆಳೆ ವಿಮೆ ಕಟ್ಟಲು ಕಡ್ಡಾಯ.

4)ಬೆಳೆ ವಿಮೆ ಪರಿಹಾರ ಪಡೆಯಲು ಸಹ ಬೇಕಾಗುತ್ತದೆ.

5)ಪ್ರಾಕೃತಿಕ ಬೆಳೆ ಹಾನಿ ಪರಿಹಾರ ಜಮೆ ಮಾಡಲು (Fid) ಮಾಡಿರಬೇಕು.

6)ಕೃಷಿ ಇಲಾಖೆಯ ಬಿತ್ತನೆ ಬೀಜಗಳನ್ನು ಪಡೆಯಲು ಕಡ್ಡಾಯ.

7)ಕಂದಾಯ ಇಲಾಖೆಯಿಂದ ಸಿಗುವ ಮಳೆಯಿಂದ ಬೆಳೆ ಹಾನಿ ಪರಿಹಾರಕ್ಕೆ ಕಡ್ಡಾಯ.

(Fid) ರೈತರ ನೋಂದಣಿಯನ್ನು ಎಲ್ಲಿ ಮಾಡಿಸಬೇಕು?

ರೈತರ ನೋಂದಣಿಯನ್ನು (Fid) ಹತ್ತಿರದ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ) ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಮಾಡಿಸಬಹುದು. ಗ್ರಾಮ ಒನ್ ಮತ್ತು ನಾಗರಿಕ ಸೇವಾ ಸಿಂಧು ಸೈಬರ್ ನಲ್ಲಿ ಸಹ ಮಾಡಿಸಬಹುದು.

ಇದನ್ನೂ ಓದಿ:ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಬೆಳೆ ನಮೂದು ತಪ್ಪಾಗಿದ್ದರೆ ಹೀಗೆ ಆಕ್ಷೇಪಣೆ ಸಲ್ಲಿಸಬಹುದು.

ರೈತರ ನೋಂದಣಿ (Fid) ಮಾಡಲು ಬೇಕಾಗುವ ದಾಖಲೆಗಳು:

1)ಪಹಣಿ/RTC ಪ್ರತಿ

2)ಆಧಾರ್ ಕಾರ್ಡ್ ಪ್ರತಿ

3)ಬ್ಯಾಂಕ್ ಪಾಸ್ ಬುಕ್ ಪ್ರತಿ

4)1 ಪೋಟೋ

ಇತ್ತೀಚಿನ ಸುದ್ದಿಗಳು

Related Articles