Thursday, January 23, 2025

Farmer accidental death-ಕೃಷಿ ಕೆಲಸ ಮಾಡುವಾಗ ರೈತರಿಗೆ ಹಾವು, ವಿಷಜಂತುಗಳು ಕಡಿದು ಆಕಸ್ಮಿಕ ಮರಣ ಹೊಂದಿದರೆ ರೂ.2 ಲಕ್ಷದವರೆಗೆ ಪರಿಹಾರ ಸಿಗುತ್ತದೆ!

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ರೈತರು ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ ಪರಿಹಾರ ಧನ ಸಿಗುತ್ತದೆ. ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಕರ್ನಾಟಕ ರಾಜ್ಯದ ರೈತರು ಕೃಷಿ ಕೆಲಸ ಮಾಡುವಾಗ (Farmers Accidentally Death)ಆಕಸ್ಮಿಕವಾಗಿ ಮರಣ ಹೊಂದಿದರೆ ವಿವಿಧ ಇಲಾಖೆಗಳಿಂದ ಪರಿಹಾರ ಧನ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಯಾವೆಲ್ಲ ಮತ್ತು ಎಷ್ಟು ಇಲಾಖೆಗಳಿಂದ ರೈತರಿಗೆ ಪರಿಹಾರ ಧನ ಸಿಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮರದ ಮೇಲಿಂದ ಬಿದ್ದು, ಹಾವು, ವಿಷಜಂತು ಕಡಿದು ಮರಣ(Farmers Accidentally Death) ಹೊಂದಿದರೆ ಕೃಷಿ ಇಲಾಖೆ(Agriculture dept), ತೋಟಗಾರಿಕೆ ಇಲಾಖೆ (Horticulture dept), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆ(APMC) ಇವುಗಳಲ್ಲಿ ಯಾವುದಾದರೂ ಒಂದು ಇಲಾಖೆಯಿಂದ 2 ಲಕ್ಷದವರೆಗೆ ಪರಿಹಾರ ಧನ ಪಡೆಯಲು ಅರ್ಜಿ ಸಲ್ಲಿಸಬಹುದು.

ಕೃಷಿ ಕೆಲಸ ಮಾಡುವಾಗ ರೈತರು ಮರಣ ಹೊಂದುವ ವಿಧಗಳು:

1)ಕೃಷಿ ಕೆಲಸ ಮಾಡುವಾಗ ಹಾವು ಕಚ್ಚಿ ಮರಣ ಹೊಂದುವುದು.

2)ಕೃಷಿ ಕೆಲಸದಲ್ಲಿ ಹಾರ್ಟ್ ಫೇಲಾಗಿ ಮರಣ ಹೊಂದುವುದು.

3)ಕೃಷಿ ಕೆಲಸ ಮಾಡುವಾಗ ಸಿಡಿಲು ಬಡಿದು ಮರಣ ಹೊಂದುವುದು.

4)ಅಡಿಕೆ ಮರ, ತೆಂಗಿನ ಮರ ಇನ್ನಿತರ ಮರಗಳ ಮೇಲಿಂದ ಕೆಳಗೆ ಬಿದ್ದು ಮರಣ ಹೊಂದಿದರೆ.

5)ಕೃಷಿ ಕೆಲಸ ಮಾಡುವಾಗ ಕಾಡು ಪ್ರಾಣಿಗಳ(ಆನೆ,ಹುಲಿ) ದಾಳಿಯಿಂದ ಮರಣ ಹೊಂದುವುದು.(ಅರಣ್ಯ ಇಲಾಖೆ ಮೂಲಕ ಪರಿಹಾರ)

ಈ ಮೇಲೆ ತಿಳಿಸಲಾದ ವಿಧಗಳಲ್ಲಿ ಯಾವುದಾದರು ಒಂದು ವಿಧದಲ್ಲಿ ರೈತರು ಮರಣ ಹೊಂದಿದರೆ ಕೃಷಿ ಇಲಾಖೆ(Agriculture dept), ತೋಟಗಾರಿಕೆ ಇಲಾಖೆ (Horticulture dept), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆ(APMC). ಈ ಇಲಾಖೆಗಳಲ್ಲಿ ಯಾವುದಾದರು ಒಂದು ಇಲಾಖೆಗೆ (Farmers Accidentally Death)ಆಕಸ್ಮಿಕ ಮರಣ ಅರ್ಜಿ ಸಲ್ಲಿಸಿ 2 ಲಕ್ಷವರೆಗೆ ಪರಿಹಾರ ಧನವನ್ನು ರೈತ ಕುಟುಂಬದ ಒಬ್ಬರು ಪಡೆಯಬಹುದು.

ಆಕಸ್ಮಿಕ ಮರಣ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲುಬೇಕಾದ ದಾಖಲೆಗಳು:

1)ಪೋಲಿಸ್ ಅಂತಿಮ ವರದಿ(police report).

2)ವೈದ್ಯಾಧಿಕಾರಿಗಳ Post mortem report.

3)FIR ವರದಿ.

4)ಮರಣ ಪ್ರಮಾಣ ಪತ್ರ(Death certificate)  

5)ಆಧಾರ್ ಪ್ರತಿ-ಮೃತರು ಹಾಗೂ ಅರ್ಜಿದಾರರು

6)ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

7)ಪಡಿತರ ಚೀಟಿ ಪ್ರತಿ

8) APMC ರವರಿಂದ NOC

9)ಕಂದಾಯ ಇಲಾಖೆಯ ಮಹಜರು ವರದಿ

10)ವಂಶವೃಕ್ಷದ ದೃಢೀಕರಣ ಪ್ರತಿ

11)RTC ಮತ್ತು ಮೃತರು ಕೃಷಿ ಕಾರ್ಮಿಕರೆಂಬ  ಬಗ್ಗೆ ಕಂದಾಯ ಇಲಾಖೆ ದೃಢೀಕರಣ

12)ಅರ್ಜಿದಾರರ ಪೋಟೋ-2

13)ಮೃತರ ವಾರಿಸುದಾರರು, ವಯಸ್ಕರಾಗಿದ್ದಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಅಭ್ಯಂತರವಿಲ್ಲವೆಂಬ ಬಗ್ಗೆ ನೋಟರಿ ಒಪ್ಪಿಗೆ ಪತ್ರ

14)ಕೃಷಿ ಇಲಾಖೆ ಅಧಿಕಾರಿಯ ಮಹಜರು ವರದಿ

ಸೂಚನೆ: ರೈತರು ಆಕಸ್ಮಿಕ ಮರಣದ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು.

ಇತ್ತೀಚಿನ ಸುದ್ದಿಗಳು

Related Articles