Friday, September 20, 2024

ಗುಡ್ ನ್ಯೂಸ್: ಆಧಾರ್‌ ಕಾರ್ಡಗೆ ಈ ಗುರುತಿನ ಚೀಟಿ ಜೋಡಣೆ ಮಾಡುವ ಅವಧಿ ವಿಸ್ತರಣೆ !

ಆತ್ಮೀಯ ಗೆಳೆಯರೇ ಇತ್ತೀಚೀನ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಬಂದ ನಂತರ ಜನಸಾಮಾನ್ಯರು ಕೂಡಾ ಅಷ್ಟೇ ಡಿಜಿಟಲೀಕರಣಕ್ಕೆ ಹೊಂದಿಕೊಳ್ಳಬೇಕಾಗಿರುತ್ತೆ. ಹಾಗೂ ಸರ್ಕಾರಗಳು ಹೊರಡಿಸುವ ಆದೇಶಗಳನ್ನು ಪಾಲನೆ ಮಾಡಬೇಕಾಗಿರುತ್ತೆ.ಸರ್ಕಾರಗಳು ನಮಗೆ ನೀಡಿರುವ ಗುರುತಿನ ಚೀಟಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನಾವುಗಳು ಕೆಲವು ಪ್ರಕ್ರಿಯನ್ನು ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಕೆಲಸಗಳಿಗೆ ಉಪಯೋಗವಾಗಲಿದೆ. ಪ್ಯಾನ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವಂತೆಯೇ, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಸರ್ಕಾರ ತಿಳಿಸಿರುತ್ತದೆ.

ಇದನ್ನೂ ಓದಿ: ನಿರುದ್ಯೋಗ ಯುವಕರಿಗೆ ಜನೌಷಧಿ ತೆರೆಯಲು ಉತ್ತಮ ಅವಕಾಶ

ಭಾರತ ಸರ್ಕಾರವು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಲಿಂಕ್‌ ಮಾಡಲು ನೀಡಿರುವ ಅವಧಿವನ್ನು ವಿಸ್ತರಣೆ ಮಾಡಿದೆ. ಆರಂಭದಲ್ಲಿ ಇವೆರಡು ಪ್ರಮುಖ ದಾಖಲೆಗಳನ್ನು ಲಿಂಕ್‌ ಮಾಡಲು ನೀಡಿದ್ದ ಕೊನೆಯ ದಿನಾಂಕ 2023ರ ಮಾರ್ಚ್‌ 31ಆಗಿತ್ತು.
ಆದರೆ, ಇದೀಗ ಆ ದಿನಾಂಕವನ್ನು ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದ್ದು, 2024ರ ಮಾರ್ಚ್‌ 31 ಆಧಾರ್ ವೋಟರ್ ಐಡಿ ಲಿಂಕ್ ಅವಧಿಯಾಗಿದೆ.

ಈ ಮೂಲಕ ಮತದಾರರ ಗುರುತಿನ ಚೀಟಿದಾರರಿಗೆ ರಿಲೀಫ್‌ ನೀಡಲಾಗಿದೆ.ಆದರೆ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜತೆ ಲಿಂಕ್‌ ಮಾಡುವುದು ಕಡ್ಡಾಯವಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇದು ಬಳಕೆದಾರರ ಆದ್ಯತೆ ಮೇಲೆ ಅವಲಂಬಿತವಾಗಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯವು ಜೂನ್ 17, 2022 ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಈ ಹಿಂದಿನ ಗಡುವು 2023ರ ಮಾ.31 ಆಗಿತ್ತು. ಆದರೆ ಇದೀಗ ಈ ಅವಧಿಯನ್ನು 2024ರವರೆಗೆ ವಿಸ್ತರಣೆ ಮಾಡಿದ್ದು, ಹೀಗಾಗಿ ಗುರುತಿನ ಚೀಟಿಯನ್ನು ಆಧಾರ್‌ ಜತೆ ಲಿಂಕ್‌ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಕಾಲಾವಕಾಶ ನೀಡಲಾಗಿರುತ್ತೆ.

ಇದನ್ನೂ ಓದಿ: ಈ ಕಾರಣಗಳಿಂದ ನಿಮ್ಮ ರೇಶನ್ ಕಾರ್ಡ ರದ್ದಾಗಬಹುದು ಎಚ್ಚರ ರೇಶನ್ ಕಾರ್ಡ ಹೊಂದಿರುವವರು ಗಮನಿಸಬೇಕಾದ ಮುಖ್ಯ ಮಾಹಿತಿ.

ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ವಿಧಾನ :

*ಇಲ್ಲಿ ಕೊಟ್ಟಿರುವ ಪೋರ್ಟಲ್ nvsp.in ಮೇಲೆ ಓತ್ತಿ,
*ಹೋಮ್ ಪೇಜ್ ನಲ್ಲಿ ಆಯ್ಕೆಯನ್ನು ಆರಿಸಿ. ನಂತರ ವೈಯಕ್ತಿಕ ಮಾಹಿತಿ ಮತ್ತು ಆಧಾರ್ ಸಂಖ್ಯೆಯನ್ನು ನಂಬರ್‍ ಹಾಕಿ,
*ನಂತರ ಆಧಾರ್‌ನೊಂದಿಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ. . ಎರಡು ಐಡಿಗಳನ್ನೂ 10 ನಿಮಿಷ ಸಮಯದಲ್ಲಿ ಜೋಡಣೆ ಮಾಡಲಾಗುತ್ತದೆ.

ಕೊನೆಯ ದಿನಾಂಕ ವಿಸ್ತರಣೆಯಿಂದ ಈ ಎರಡು ಐಡಿ ಲಿಂಕ್‌ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಹೆಚ್ಚಿನ ಸಮಯ ಇರುತ್ತದೆ.

ಗ್ರಾಮ ಓನ್ ಕೇಂದ್ರಕ್ಕೆ ತೆರಳಿ ಲಿಂಕ್ ಮಾಡಿಕೊಳ್ಳಬಹುದಾಗಿರುತ್ತೆ.

ಆಧಾರ್‍ ಕಾರ್ಡ ಮತ್ತು ಮತದಾರ ಚೀಟಿ ಲಿಂಕ್ ಮಾಡಲು ಪಾವತಿ :
ಆಧಾರ್‍ ಕಾರ್ಡ ಮತ್ತು ಮತದಾರ ಚೀಟಿ ಲಿಂಕ್ ಮಾಡಲು NVSP ಯಿಂದ ಯಾವುದೇ ಶುಲ್ಕವಿರುವುದಿಲ್ಲ.

ಇದನ್ನೂ ಓದಿ: ಮುಂಗಾರು ಹಂಗಾಮಿನ ಮದ್ಯಂತರ ಬೆಳೆವಿಮೆ ಬಿಡುಗಡೆ 5.59 ಲಕ್ಷ ರೈತರಿಗೆ ರೂ.297.93 ಕೋಟಿ

ಜೋಡಣೆಯಿಂದ ಪ್ರಯೋಜನಗಳು:


*ವಿವಿಧ ಸರ್ಕಾರಿ ಯೋಜನೆಗಳು ಮತ್ತು ಲಾಭ ಸುಲಭವಾಗಿ ಪಡೆಯಬಹುದು.
*ಆಧಾರ್‌ ಮತ್ತು ವೋಟರ್ ಐಡಿ ಜೋಡಣೆಯಾದರೆ ಮುಖ್ಯವಾಗಿ ನಕಲಿ ಮತದಾನದ ಕಿರಿಕಿರಿ ತಪ್ಪಲಿದೆ.

*ಮತದಾನದ ವೇಳೆ ಒಮ್ಮೆ ಮತದಾರರ ಆಧಾರ್‌ ಕಾರ್ಡ್‌ ಸಂಖ್ಯೆ ದಾಖಲೆಕೊಂಡರೆ, ಮತ್ತೊಂದು ಬೂತ್‌ಗೆ ಹೋಗಿ, ಅಥವಾ ಆತನ ಹೆಸರಿನಲ್ಲಿ ಮತ್ತೋರ್ವ ನಕಲಿ ಮತದಾನ ಮಾಡಿ ವಂಚಿಸುವುದು ತಪ್ಪಲಿದೆ.

ಡಿಸೆಂಬರ್ 2021 ರಲ್ಲಿ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅಧಿಕೃತಗೋಳಿಸಲಾಗಿದೆ.

ಇತ್ತೀಚಿನ ಸುದ್ದಿಗಳು

Related Articles