Thursday, November 21, 2024

ಎರೆ ಗೊಬ್ಬರ ಉತ್ಪಾದನೆ ಮತ್ತು ತಯಾರಿಸುವ ವಿಧಾನ

ಎರೆಗೊಬ್ಬರ ಉತ್ಪಾದನೆ:

ತೊಟ್ಟಿಯಲ್ಲಿ ತೇವಾಂಶ ಇರುವ ಹಾಗೆ ನೀರನ್ನು ಹಾಕುತ್ತ ಹೋಗಬೇಕು. ತೊಟ್ಟಿಗೆ ನೆರಳಿಗಾಗಿ ಚಪ್ಪರವನ್ನು ಹಾಕಿರಿ, 80  ರಿಂದ 90 ದಿನಗಳಲ್ಲಿ ಎರೆಗೊಬ್ಬರವು ಹೇರಳವಾದ ಪ್ರಮಾಣದಲ್ಲಿ ಉತ್ಪಾದನೆಯಾಗಿರುತ್ತದೆ. ಗೊಬ್ಬರ ಸಂಗ್ರಹಿಸುವುದಕ್ಕಿಂತ 3 ದಿನ ಮೊದಲು ನೀರು ಹಾಕುವುದನ್ನು ನಲ್ಲಿಸಿ ತದ ನಂತರ ಎರೆಗೊಬ್ಬರವನ್ನು ಸಂಗ್ರಹಿಸಬೇಕು.

*ಎರೆಗೊಬ್ಬರದಲ್ಲಿ ಪೋಷಕಾಂಶಗಳು ಬೆಳೆಗಳಿಗೆ ಸುಲಭವಾಗಿ ದೊರೆಯುವ ರೂಪದಲ್ಲಿ ಇರುತ್ತದೆ.

*ಎರೆಗೊಬ್ಬರದಲ್ಲಿ ಲಘುಪೋಷಕಾಂಶಗಳು ಹಾಗೂ ಬೆಳೆವರ್ಧಕಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುತ್ತದೆ.

*ಎರೆಗೊಬ್ಬರವನ್ನು ಅತಿ ಕಡಿಮೆ ವೆಚ್ಚದಲ್ಲಿ ಎಲ್ಲಾ ತ್ಯಾಜ್ಯಗಳನ್ನು ಬಳಸಿ ಉತ್ಕಷ್ಠವಾಗಿ ತಯಾರಿಸಬಹುದಾಗಿದೆ.

*ಎರೆಗೊಬ್ಬರ ಬಳಕೆಯಿಂದ ಬೆಳಗಳಲ್ಲಿ ಶೇ.20 ರಷ್ಟು ಇಳುವರಿಯನ್ನು ಹೆಚ್ಚಿಸಬಹುದಾಗಿದೆ.

ಎರೆಗೊಬ್ಬರ ತಯಾರಿಸುವ ವಿಧಾನ :

ತೊಟ್ಟಿಯ ಅಳತೆ- 15 ಉದ್ದ, 8 ಅಗಲ, 2.1/2 ಎತ್ತರವಿರುವ ತೊಟ್ಟಿಯನ್ನು ತಳದಿಂದ ಅನುಕ್ರಮವಾಗಿ ಭರ್ತಿ ಮಾಡುವುದು.

1.ಭತ್ತದ ಹುಲ್ಲು , ಸಾವಿಯ ಹುಲ್ಲು , ಜೋಳದ ದಂಟು ಇತ್ಯಾದಿ.

2.ಎರೆಮಣ್ಣು ತೋಟದ ಮಣ್ಣು.

3.ಹಸಿರೆಲೆಗಳು(ಹುಲ್ಲು, ಕಳೆ ಇತ್ಯಾದಿ)

4.ಸಗಣಿ , ಬಯೋಗ್ಯಾಸ್ ಸ್ಲೆಡ್ಜ್ ಯಾವುದೇ ಪ್ರಾಣಿಯ ಹಿಕ್ಕೆ.

5.ಕೃಷಿ ತ್ಯಾಜ್ಯ ವಸ್ತುಗಳು ಅಥವಾ ಒಣಗಿದ ಕಸಕಡ್ಡಿ.

6.ತೆಂಗಿನ ಸಿಪ್ಪೆ ಅಥವಾ ನೀರು ಹಿಡಿಯುವ ವಸ್ತು

ಇತ್ತೀಚಿನ ಸುದ್ದಿಗಳು

Related Articles