ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ಪರಿಶೀಲನೆ ( Verification ) ಮಾಡಿ ಅರ್ಹ ಇಲದೇ ಇರುವ ಫಲಾನುಭವಿಗಳ ರೇಷನ್ ಕಾರ್ಡಗಳನ್ನು ರದ್ದುಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದೆ. ಈ ಒಂದು ಸರಧಿಯಲ್ಲಿ( List ) ನಲ್ಲಿ ಇರುವ ಪಡಿತರ ಚೀಟಿದಾರರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳು ಸಿಗುವುದಿಲ್ಲ ಎಂದು ಇಲಾಖೆ ಬಹಿರಂಗ ಪಡಿಸಿದೆ.
ಹಾಗಿದ್ದರೆ ಅನರ್ಹಗೊಳಿಸಿದ ಪಡಿತರ ಚೀಟಿ ಪರಿಶೀಲನೆ ಮಾಡವುದು ಹೇಗೆ? ಈ ಕೆಳಗೆ ವಿವರಿಸಲಾಗಿದೆ.
Ineligible ration card list: ರದ್ದಾದ ಪಡಿತರ ಚೀಟಿ :
ನಾಗರಿಕರು ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಅಂತರಜಾಲವನ್ನು ವೀಕ್ಷಣೆ ಮಾಡಿ ಇಲ್ಲಿ ಮಾಸಿಕವಾಗಿ ರದ್ದಾದ ಪಡಿತರ ಪಟ್ಟಿಯ ವಿವರವನ್ನು ನೋಡಬಹುದಾಗಿರುತ್ತದೆ.
ಇದನ್ನೂ ಓದಿ: Ration card Mobile Number Change ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ?
ಇದನ್ನೂ ಓದಿ : ಗೃಹಜ್ಯೋತಿ ಯೋಜನೆ: ಗ್ರಾಹಕರು ಸೆಪ್ಟಂಬರ್ ತಿಂಗಳ ಉಚಿತ ಬಿಲ್ ಪಡೆಯಲು ಆಗಸ್ಟ ಈ ತಾರೀಖುನೊಳಗೆ ಈ ಕೆಲಸ ಮಾಡಿ:
ಹಂತ 1 : ಈ ಕೆಳಗೆ ಕಾಣಿಸಿರುವ link ಮೇಲೆ ಕ್ಲಿಕ್ ಮಾಡಬೇಕಾಗಿರುತ್ತೆ ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.
https://ahara.kar.nic.in/Home/EServices ಬಲ ಬದಿಯ ಮೋಲೆಯಲ್ಲಿ ಕಾಣುವ ಮೂರು ಡಾಟ್ ಬಟನ್ ಮೇಲೆ ಕ್ಲಿಕ್ ಮಾಡಿ “Desktop Site” ಆಯ್ಕೆ ಮಾಡಿಕೊಳ್ಳಿ ಇದು ಮಾಡುವುದರಿಂದ ಜಾಲತಾಣದ ಮಾಹಿತಿ ಸರಿಯಾಗಿ ಗೋಚರಿಸುತ್ತದೆ.
ಹಂತ 2: ನಂತರ ಎಡಬದಿಯಲ್ಲಿ ಗೋಚರಿಸುವ ನ್ಯಾವಿಗೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ತದನಂತರದಲ್ಲಿ ಇ-ಪಡಿತರ ಚೀಟಿ” ಆಯ್ಕೆ ಗೋಚರಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 3 : “E-Ration card” ಆಯ್ಕೆ ವಿಭಾಗದಲ್ಲಿ “Show cancelled/Suspended list” ಮೇಲೆ ಓತ್ತಿ ನಂತರ ನಿಮ್ಮ ಜಿಲ್ಲೆ ತಾಲ್ಲೂಕು, ತಿಂಗಳು, ವರ್ಷ ವನ್ನು ಆಯ್ಕೆ ಕೊಂಡು “GO” ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡರೆ ನಂತರ ನಿಮಗೆ GO ಗುಂಡಿ ದೊರೆಯುವುದು.
“GO” ಬಟನ್ ಮೇಲೆ ಕ್ಲಿಕ್ ಮಾಡಿದರೆ ರದ್ದಾಗಿರುವ ಪಡಿತರ ಚೀಟಿದಾರರ ಪಟ್ಟಿ ಗೋಚರಿಸುತ್ತದೆ. ನಂತರ
ಈ ಪಟ್ಟಿಯಲ್ಲಿ ಅರ್ಜಿದಾರರ ರೇಷನ್ ಕಾರ್ಡ ನಂಬರ್, ಹೆಸರು ರೇಷನ್ ಕಾರ್ಡ ರದ್ದಾದ ದಿನಾಂಕದ ಮಾಹಿತಿ ಲಭ್ಯವಿರುತ್ತದೆ. ಮಾಹಿತಿ ವೀಕ್ಷಿಸಿಸಬಹುದಾಗಿರುತ್ದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರತಿ ತಿಂಗಳು ಪಡಿತರ ಚೀಟಿ ಹೊಂದಿರುವವರ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮಾರ್ಗಸೂಚಿಯನ್ವಯ ಅರ್ಹ ಮತ್ತು ಅನರ್ಹರ ಪಟ್ಟಿಯನ್ನು ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸುತ್ತದೆ.
ಕೃಷಿ ಸಂಬಂಧಿಸಿದ ಯೋಜನೆಗಳ ಮಾಹಿತಿ:
ಇದನ್ನೂ ಓದಿ : ಕಲ್ಪವೃಕ್ಷ (ತೆಂಗಿನಮರಕ್ಕೂ) ವಿಮೆ! ಎಲ್ಲಿ ಅರ್ಜಿ ಸಲ್ಲಿಸಬೇಕು ?
ಇದನ್ನೂ ಓದಿ : Solar Energy Scheme:ಸೌರ ಶಕ್ತಿ ಆಧಾರಿತ 3 HPಯಿಂದ 7.5 HP ಕೃಷಿ ಪಂಪ್‌ಸೆಟ್ ಗಳಿಗೆ ಸರ್ಕಾರದಿಂದ ಶೇ. 80 Subsidy.
Eligible ration card list: ಪಡಿತರ ಚೀಟಿ ಅರ್ಹರಾಗಿರುವ ಪಟ್ಟಿಯ ಮಾಹಿತಿ :
ಇ-ಪಡಿತರ ಚೀಟಿ””E-Ration card” ಆಯ್ಕೆ ವಿಭಾಗದಲ್ಲಿ “Show village list” ಬಟನ್ ಮೇಲೆ ಕ್ಲಿಕ್ ಮಾಡಿ ರೇಷನ್ ಕಾರ್ಡ/ಪಡಿತರ ಚೀಟಿಯ ಅರ್ಹರ ಫಲಾನುಭವಿಗಳ ಪಟ್ಟಿಯನ್ನು ಪಡೆಯಬವುದು.
“Show village list” ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ತಾಲ್ಲೂಕು, ಗ್ರಾಮ ಪಂಚಾಯತ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡು “GO” ಮೇಲೆ ಕ್ಲಿಕ್ ಮಾಡಬೇಕು.
ಈ ಮೇಲೆ ಕಾಣಿಸಿರುವ ಪಟ್ಟಿಯಲ್ಲಿ ಅನರ್ಹಗೊಳಿಸಿರುವ ಹೆಸರಿರುವವರು ಈ ಕುರಿತು ಆಕ್ಷೇಪಣೆ ಸಲ್ಲಿಸುವುದಿದ್ದಲ್ಲಿ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿ ಭೇಟಿ ಮಾಡಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಇದೇ ರೀತಿ ನಿರಂತರ ಸರ್ಕಾರಿ ಯೋಜನೆಗಳು ಮತ್ತು ಕೃಷಿ ಮತ್ತು ಕೃಷಿಯೇತರ ಯೋಜನೆಗಳ ಬಗ್ಗೆ ಮಾಹಿತಿ ನೋಡಲು ಈ ಜಾಲತಾಣವನ್ನು ವೀಕ್ಷಿಸಿ
ಧನ್ಯವಾದಗಳು