Thursday, September 19, 2024

Crop loan(ಬೆಳೆಸಾಲ) ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

Farmer Registration Number (ರೈತರ ನೋಂದಣಿ ಸಂಖ್ಯೆ) : ಬೆಳೆ ಸಾಲ, ಹಾಗೂ ಕೃಷಿ ಮತ್ತು ಕೃಷಿಯೇತರ ಇಲಾಖೆಯ ಯೋಜನೆ ಸವಲತ್ತು ಪಡೆಯಲು ರೈತರಿಗೆ ಕಡ್ಡಾಯ ರೈತರ ನೋಂದಣಿ ಸಂಖ್ಯೆ ಬೇಕಾಗುವುದು ಈ ಒಂದು ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯುವುದು ಪ್ರಕ್ರಿಯೆ ಹೇಗೆ?

ಈ ಒಂದು ಪ್ರಕ್ರಿಯೆಗೆ ಸರ್ಕಾರ ಪೂಟ್ಸ್ ( FRUITS ) ತಂತ್ರಾಂಶ ಎಂದು ಹೆಸರು ಮಾರ್ಪಡಿಸಿದೆ. (“FRUITS” Farmer Registration and Unified beneficiary Information System ) ಈ ತಂತ್ರಾಂಶದಲ್ಲಿ ರೈತ ಹೆಸರಿನಲ್ಲಿರುವ ಗುರುತಿನ ಚೀಟಿ ಆಧಾರ ಕಾರ್ಡ, ಎಲ್ಲಾ ಜಮೀನಿನ ಸರ್ವೆ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನು ಹಾಗೂ ರೇಷನ್ ಕಾರ್ಡ, ಜಾತಿ ಪ್ರಮಾಣ ಪತ್ರ ,ದಾಖಲಾತಿ ಮಾಡಿದಾಗ ಈ ನೋಂದಣಿ ಸಂಖ್ಯೆ “FID” ನಂಬರ್ ಮಾರ್ಪಡಾಗುತ್ತದೆ.

ಈ ನೋಂದಣಿ ಸಂಖ್ಯೆಯಿಂದ ರೈತರಿಗೆ ಕೃಷಿ ಮತ್ತು ಕೃಷಿಯೇತರ (ತೋಟಗಾರಿಕೆ/ರೇಷ್ಮೆ/ಪಶುಸಂಗೋಪನೆ ಇಲಾಖೆಗಳ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಆಗಲು ಮತ್ತು ಯೋಜನೆ ಸದುಪಯೋಗ ಪಡೆಯಲು,ಮತ್ತು ಮುಖ್ಯವಾಗಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಮತ್ತು ಬೆಳೆ ಸಾಲ ಪಡೆಯಲು ರೈತರು FID ನಂಬರ್ ಅನ್ನು ಅಗತ್ಯವಾಗಿ ಒದಗಿಸಬೇಕಾಗುತ್ತದೆ.

ಆಗಿದ್ದರೆ ನೋಂದಣಿ ಸಂಖ್ಯೆ ಎಲ್ಲಿ ಪಡೆಯಬೇಕು? (FRUITS) ಸಾಪ್ಟವೇರ ಮೂಲಕ FID ನಂಬರ್ ಪಡೆಯುವುದು ವಿಧಾನ ಹೇಗೆ? ರೈತರ ನೋಂದಣಿ ಸಂಖ್ಯೆ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ರಾಜ್ಯದ ಕೃಷಿ ಇಲಾಖೆಯಿಂದ ರೈತರ ಜಮೀನಿನ ವಿವರ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಡಿಜಿಟಲ್ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಲಾಗಿದ್ದು, ಪ್ರತಿಯೊಬ್ಬರ ರೈತರಿಗೂ ಬೇರೆ ಬೇರೆ ನೋಂದಣಿ ಸಂಖ್ಯೆ (FID) ಒದಗಿಸಲಾಗುವುದು.

ಇದನ್ನೂ ಓದಿ: Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:

FID number link- ನಿಮ್ಮ ಮೊಬೈಲ್ ನಲ್ಲಿ FID ನಂಬರ್ ಪಡೆಯುವ ವಿಧಾನ:

ಇಲ್ಲಿವರೆಗೆ ರಾಜ್ಯ ರೈತರು ಶೇ 90 ಕ್ಕಿಂತ ಹೆಚ್ಚಿನ ವಿವರವು ಪ್ರೋಟ್ಸ್ ತಂತ್ರಾಂಶದಲ್ಲಿ ನೋಂದಾವಣಿ ಮಾಡಲಾಗಿದ್ದು. ಈ ಎಲ್ಲಾ ರೈತರಿಗೂ “FID number” ಮಾರ್ಪಡಿಸಲಾಗಿದೆ.

ಹಾಗಾದರೆ ಈ ಲಿಂಕ್ https://fruitspmk.karnataka.gov.in/ಮೇಲೆ ಕ್ಲಿಕ್ ಮಾಡಿ

12 ಅಂಕಿಯ ಆಧಾರ್ ನಂಬರ್ ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ತಮ್ಮ “FID” ಸಂಖ್ಯೆ ದೊರೆಯುವುದು.ಈ ಸಂಖ್ಯೆಯನ್ನು ಬೆಳೆ ವಿಮ ಅರ್ಜಿ ಸಲ್ಲಿಸಲು, ಬೆಳೆ ಸಾಲ ವಿತರಿಸಲು, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಕೆಯಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಾಗಿ ಒದಗಿಸಬೇಕಾಗುತ್ತದೆ.

FID ನಂಬರ್ ನ ಇತರೆ ಮಾಹಿತಿ ಪಡೆಯುವ ವಿಧಾನ:

ಈ FID ನಂಬರ್ ನಲ್ಲಿ ನಮೂದಿಸಿರುವ ಜಮೀನಿನ ಸರ್ವೆ ನಂಬರ್ ಯಾವುವು? ಬ್ಯಾಂಕ್ ಖಾತೆ ವಿವರ ಮತ್ತು ರೈತರ ಹೆಸರು ವಿಳಾಸ ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಧಾನ ಅನುಸರಿಸಿ.

ಈ ಲಿಂಕ್ https://fruits.karnataka.gov.in/OnlineUserLogi

ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯ ಮೂಲಕ ನೊಂದಣಿ ಮಾಡಿಕೊಂಡು ಅವರ ಅಧಾರ್ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಅವರ ಹೆಸರಿನಲ್ಲಿ ದಾಖಲಿಸಲಾದ “FID”

ವಿವರವನ್ನು ತಿಳಿಯಬವುದು.

ರೈತರ ನೋಂದಣಿಗೆ ಹೊಸ ಅರ್ಜಿ ಮತ್ತು ಸೇರ್ಪಡೆಯಾಗದ ಸರ್ವೆ ನಂಬರ್ ಸೇರಿಸಲು ಎಲ್ಲಿ ಸಲ್ಲಿಸಬೇಕು?

ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ(RSK) ಹೊಸ ಅರ್ಜಿ ಮತ್ತು FID ಸಂಖ್ಯೆಯಲ್ಲಿ ಬಿಟ್ಟು ಹೋಗಿರುವ ಸರ್ವೆ ನಂಬರ್ ಗಳನ್ನು ಸೇರ್ಪಡೆ ಮಾಡಿಕೊಳ್ಳಬವುದು.

ಫ್ರಟ್ಸ್(FRUITS) ತಂತ್ರಾಶದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ:

Fruits/FID number: Fruits ಎಂದರೇನು? ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ?

ಫ್ರಟ್ಸ್ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ – Farmer Registration & Unified Beneficiary Information System – FRUITS) ಅಂತರ್ಜಾಲ ಆಧಾರಿತ ತಂತ್ರಾಂಶಯಾಗಿದೆ.

ಇದು ರೈತರಿಗೆ ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಸಕ್ತಿಯಿರುವ ರೈತರ / ವ್ಯಕ್ತಿಯ ನೋಂದಣಿಗೆ ಸಹಕಾರಿಯಾಗಿದೆ. ಅಲ್ಲದೇ ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಪ್ರೋಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಆದ್ದರಿಂದ ಇದು ರೈತರಿಗೆ, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.

ರೈತರು ನೋಂದಾಯಿಸಿಕೊಳ್ಳಬಹುದೇ?

ಹೌದು. ಜಮೀನು ಹೊಂದಿರುವವವರು ಈ ಲಿಂಕ್ https://fruits.karnataka.gov.in/ ಮೇಲೆ ಕ್ಲಿಕ್ ಮಾಡಿ ಮುಖಪುಟದ ಎಡಬದಿಯಲ್ಲಿ ಕಾಣುವ “ನಾಗರೀಕ ಪ್ರವೇಶ (Citizen Login)” ಆಯ್ಕೆಯಗೆ ಭೇಟಿ ನೀಡಿ ಅವಶ್ಯ ದಾಖಲೆಗಳನ್ನು ಒದಗಿಸಿ ಸ್ವಯಂ ನೋಂದಣಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಆಧಾರ್ ಪ್ರಕಾರ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ಮಂತರ. ತಮ್ಮ ಹೆಸರಿನಲ್ಲಿರುವ ಜಮೀನಿನ ವಿವರಗಳನ್ನು ಭೂಮಿ ತಂತ್ರಾಂಶದ ಮೂಲಕ ಪಡೆದು ದಾಖಲಿಸಬೇಕಾಗುತ್ತದೆ ಮತ್ತು ಅನುಮೋದನಾ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ. ಮೊಬೈಲ್ ಸಂಖ್ಯೆಯನ್ನು ಬಳಕೆದಾರರ ID ಯಾಗಿ ಬಳಸಬೇಕು. ಪ್ರವೇಶ (Login) ಒಟಿಪಿ ದೃಢೀಕರಣ ಆಧರಿಸಿದೆ; ಒಟಿಪಿಯನ್ನು ಆಧಾರ್ ಆಧಾರಿತ ಮೊಬೈಲ ಗೆ ದೊರೆಯುತ್ತದೆ.

FID number:- ಫ್ರಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಬೇಕಾಗುವ ದಾಖಲೆಗಳು:

  1. ಆಧಾರ್ ಕಾರ್ಡ
  2. ಬ್ಯಾಂಕ್ ಪಾಸ್ ಬುಕ್ 3. ಪಹಣಿ/ಉತಾರ್/RTC
  3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ(ಈ ವರ್ಗಕ್ಕೆ ಸೇರಿ ರೈತರಿಗೆ ಮಾತ್ರ) 5. ರೇಷನ್ ಕಾರ್ಡ

Joint owner: ಜಮೀನು ಜಂಟಿ ಮಾಲೀಕತ್ವದ/ಸಾಮೂಹಿಕ ರೈತರನ್ನು ಫ್ರಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಬಹುದೇ?

ನೋಂದಣಿ ಮಾಡಿಕೊಳ್ಳಬವುದು, ಜಂಟಿ ಮಾಲೀಕತ್ವದ ದಾಖಲೆಗಳನ್ನು (RTC) ಭೂಮಿಯಲ್ಲಿ ಏಕ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ಸರ್ಕಾರದ ಸವಲತ್ತುಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಂಟಿ ಮಾಲೀಕರು ಈ ಕೆಳಗಿನ ಮೂರು ಪ್ರಕಾರಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ನೋಂದಾಯಿಸಿಕೊಳ್ಳಲು ಪ್ರೊಟ್ಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

(A) ಜಂಟಿ ಮಾಲೀಕರು ಒಟ್ಟಾಗಿ ನೋಂದಾಯಿಸಬಹುದು, ಹೀಗೆ ನೋಂದಾಯಿಸಿದಲ್ಲಿ ಒಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.
(B) ಸ್ವಯಂ ಘೋಷಣೆಯೊಂದಿಗೆ, ಘೋಷಣೆಯ ಮಾಲೀಕರಿಗೆ ಭೂ ವ್ಯಾಪ್ತಿಯನ್ನು ದಾಖಲಿಸಿ ಎಲ್ಲಾ
ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು

(C) ಪ್ರತಿ ಮಾಲಿಕರಿಗೆ ಸಮಾನ ಪಾಲು ಹೊಂದಿರುವಂತೆ ಭೂ ವ್ಯಾಪ್ತಿಯನ್ನು ದಾಖಲಿಸಿ ಪ್ರತಿ ಒಬ್ಬ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ : ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಯನ್ನು ಸಂಪರ್ಕಿಸಿ.

ಇದನ್ನೂ ಓದಿ: Aadhaar Card: ಗಮನಿಸಿ, ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೊನೆಯ ಅವಕಾಶ!

ಇತ್ತೀಚಿನ ಸುದ್ದಿಗಳು

Related Articles