Thursday, November 21, 2024

Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ.

ಆತ್ಮೀಯ ರೈತ ಬಾಂದವರೇ ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ರಾಜ್ಯದ ರೈತರು ಬಿತ್ತಿದ ಬೆಳೆ ಸಂಪೂರ್ಣ ನಷ್ಟವಾಗಿದ್ದು.. ರಾಜ್ಯದ 220ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಬರ ಪರಿಹಾರ ನೀಡಲು ಕೇಂದ್ರ ಅಧ್ಯಾಯನ ತಂಡ ಬಂದು ಹೋಗಿದ್ದು, ರೈತರಿಗೆ ಪರಿಹಾರ ನೀಡಬೇಕಿದೆ. ಪರಿಹಾರ ಪಡೆಯಲು ಅರ್ಹರ ರೈತರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಲಿಸ್ಟ್ ನಲ್ಲಿ ಹೆಸರು ಇರುವವರಿಗೆ ಮಾತ್ರ ಪರಿಹಾರ ಸಿಗಲಿದೆ.

FRUITS (Farmers Registration and Unified beneficiary Information System ) ತಂತ್ರಾಂಶ ಮೂಲಕ ಅರ್ಹ ರೈತರ ಹೆಸರು ಪ್ರಕಟಿಸಿದೆ. ನಿಮ್ಮ (ರೈತರ) Farmer ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬರ ಪರಿಹಾರ ಹೇಕ್ಟರ್‍ ಎಷ್ಟು ? ಜಮಾ ಆಗಲು ರೈತರು ಏನು ಮಾಡಬೇಕು?

ಸರ್ಕಾರ ಪ್ರತಿ ಬಾರಿಯು ಪ್ರಕೃತಿ ಅಂತ ವಿಕೋಪಗಳಾದರೆ ಉದಾ: ಬೆಳೆಹಾನಿ, ಅಂತಹ ಪರಿಹಾರದ ಹಣವನ್ನು ಧನಸಹಾಯವನ್ನು ಸರ್ಕಾರ ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ನಷ್ಟವಾದ ಫಲಾನುಭವಿಗಳಿಗೆ ರಾಜ್ಯದ SDRF and ಕೇಂದ್ರದ NDRF ಮಾರ್ಗಸೂಚಿಯಂತೆ ಹಣವನ್ನು DBT ಮೂಲಕ ಜಮಾವಣೆ ಮಾಡುತ್ತಿತ್ತು. ಈ ತಂತ್ರಾಂಶದಲ್ಲಿ ಬಹಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗದೇ ಇರುವ ಕಾರಣಕ್ಕೆ ಈ ವರ್ಷ ಸರ್ಕಾರ ಬೆಳೆ ನಷ್ಟದ ನೋಂದಣಿಯನ್ನು ಕೃಷಿ ಇಲಾಖೆಯ ಪ್ರೂಟ್ಸ ತಂತ್ರಾಂಶದಲ್ಲಿ ನೋಂದಾಯಿಸಲು ತಿರ್ಮಾನಿಸಿದೆ.

FID list:(Farmer Identification document): ಬರ ಪರಿಹಾರದ ರೈತರ ಪಟ್ಟಿ:
2023-24 ನೇ ಸಾಲಿನಲ್ಲಿ ಬರ ಪರಿಹಾರ ಪಡೆಯಲು ಸರ್ಕಾರದಿಂದ ಬರಗಾಲ ಪ್ರದೇಶ ಎಂದು ಘೋಷಣೆಯಾದ ರಾಜ್ಯದ ಎಲ್ಲಾ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಹಂತ: 1: ಮೊದಲು ಈ ಕಾಣಿಸಿರುವ ಲಿಂಕ್ ಮೇಲೆ ಓತ್ತಿ bara parihara Farmer list ನಂತರ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ ಸರ್ಚ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ರೈತರ ನೋಂದಣಿ ಸಂಖ್ಯೆ” FID10070000xxxxx” ದೊರೆಯುವುದು.
ಈ ರೀತಿ FID ನೋಂದಣಿಯಾಗಿದ್ದರೆ ಈ ರೈತರ ಹೆಸರಿಗೆ ಇರುವ ಎಲ್ಲಾ ಸರ್ವೆ ನಂಬರ್‍ ನೋಂದಣಿಯಾಗಿವೆ ಅಂತ ಒಮ್ಮೇ ಹತ್ತಿರ ಕೃಷಿ ಇಲಾಖೆ, ಗ್ರಾಮ ಓನ್, ಅಥವಾ ಕರ್ನಾಟಕ ಓನ್, ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ,
ಒಂದು ವೇಳೆ ಎಲ್ಲಾ ಸರ್ವೇ ನಂಬರ್‍ ನೋಂದಣಿಯಾಗಿದ್ದರೆ ನಿಮಗೆ ಬರಪರಿಹಾರ ಹಣ ಸದ್ಯದಲೇ ಜಮಾ ಆಗುವುದು ಖಚಿತ.

ಇದನ್ನೂ ಓದಿ: Irrigation Facility Subsidy: ಕೃಷಿ ಕ್ಷೇತ್ರದ ನೀರಾವರಿ ಸೌಲಭ್ಯಕ್ಕೆ 75,000/- ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ:

FID(Farmer Identification document) ರೈತರ ನೋಂದಣಿಯ ಉಪಯೋಗಗಳು:
ಪ್ರತಿಯೊಬ್ಬ ರೈತರು ಈ ನೋಂದಣಿ ಮಾಡಿಸಲೇ ಬೇಕಾಗಿರುತ್ತದೆ. ಈ ನೋಂದಣಿಯಿಂದ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ಮತ್ತು ಬೆಳೆವಿಮೆ, ಬರ ಪರಿಹಾರ, ನೆರೆ ಪರಿಹಾರ, ವಿವಿಧ ಯೋಜನೆಗಳಡಿ ಯಂತ್ರೋಪಕರಣಗಳ ಸಹಾಯಧನ, ನೇರ ನಗದು ವರ್ಗಾವಣೆ ಪಡೆಯಲು ಹೀಗೆ ಅನೇಕ ಯೋಜನೆಗಳಡಿ ರೈತರು ಸೌಲಭ್ಯ ಪಡೆಯಲು FID ಕಡ್ಡಾಯವಿರುತ್ತದೆ.

Farmer Identification document ಬೇಕಾದ ದಾಖಲೆಗಳು:
ಹೊಸದಾಗಿ ID ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ರೈತರು ತಮ್ಮ
ಎಲ್ಲಾ ಪಹಣಿಗಳು,
ಆಧಾರ್ ಕಾರ್ಡ್,
ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ
ಪ.ಜಾತಿ/ಪ.ಪಂ ರೈತರಿಗೆ ಜಾತಿ ಪ್ರಮಾಣ ಪ್ರತಿ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸುವುದು.

ಬರ ಪರಿಹಾರವನ್ನು ಪಡೆಯೋದಕ್ಕೆ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ ಪ್ರೊಟ್ ಐಡಿಯಲ್ಲಿ ರೈತರು ಸೂಕ್ತ ಮಾಹಿತಿ ದಾಖಲಿಸಬೇಕಿದೆ. ಈ ಮಾಹಿತಿಯಂತೆ, ನಿಮಗೆ ನೀಡಿರುವಂತ ಫೂಟ್ ಐಡಿಯ ಆಧಾರದಲ್ಲಿ, ಅದರಲ್ಲಿ ನಮೂದಿತವಾಗಿರುವ ಸರ್ವೆ ನಂಬರ್ ಗಳ ಆಧಾರ್ ಲಿಂಕ್ ಆಧಾರದ ಮೇಲೆ ಬರ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಹೆಸರು ಲೀಸ್ಟ್ ನಲ್ಲಿ ಇದೇ ನೀವು ಬರ ಪರಿಹಾರ ಪಡೆಯಲು ಅರ್ಹರಿದ್ದೀರಿ. ನಿಮಗೆ ರಾಜ್ಯ ಸರ್ಕಾರ ನೀಡುವಂತ ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಲಿದೆ.

ಇದನ್ನೂ ಓದಿ: PMKSY-OI Scheme: PVC Pipe ಶೇ. 50 ರ ಸಹಾಯಧನದಲ್ಲಿ ವಿತರಣೆ:

ಇತ್ತೀಚಿನ ಸುದ್ದಿಗಳು

Related Articles