Thursday, September 19, 2024

Dragon fruit-ವಿದೇಸಿ ಹಣ್ಣು ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ವಿಯಾದ ಯುವ ರೈತ.

ಕೆಲವು ಹಣ್ಣುಗಳು ಎಲ್ಲ ಕಡೆಯಲ್ಲೂ ಸಿಗುವುದಿಲ್ಲ. ಸಿಕ್ಕರೂ ತುಂಬಾ ದುಬಾರಿ. ಅವುಗಳಿಂದ ಆರೋಗ್ಯಕ್ಕೆ ಬಹಳಷ್ಟು ಲಾಭವಿರುತ್ತದೆ. ಅಂತಹ ಹಣ್ಣುಗಳಲ್ಲಿ ಡ್ರ್ಯಾಗನ್‌ ಹಣ್ಣು ಒಂದು. ಡ್ರ್ಯಾಗನ್‌ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರುಚಿಕರ ಮತ್ತು ಆರೋಗ್ಯಕರ ಹಣ್ಣು. ನಮ್ಮಲ್ಲಿ ಬೆಳೆಯುದು ಕಡಿಮೆ. ಅಮೇರಿಕಾ, ಮೆಕ್ಸಿಕೊದ ಮರಭೂಮಿಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ವಿದೇಶದ ಹಣ್ಣು ನಮ್ಮ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಆ ಹಣ್ಣನ್ನು ಬೆಳೆದು ಯಶಸ್ವಿಯಾದ ರೈತನ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕ್ವಾಲಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ ಚಿಕ್ಕ ಬಡರೈತ. ಒಂದನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಕಾರಣ ಕುಟುಂಬದ ಬಡತನದಿಂದ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು. ಒಟ್ಟು 5 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರ ಬೆಳೆ ಬೆಳೆಯುತ್ತಿದ್ದರು ಆದರೆ ಅದರಿಂದ ಆದಾಯ ಕಡಿಮೆ ಬರುತ್ತಿತ್ತು. ಇದನ್ನು ಮನಗಂಡ ಇವರ ಮಗ ಪ್ರಕಾಶ ಬಣಕಾರ ಪದವಿದರರಾಗಿದ್ದು, ಇವರು ತೋಟಗಅರಿಕೆ ಅಧಿಕಾರಿಗಳ ಪ್ರೇರಣೆಯಿಂದ ಡ್ರ್ಯಾಗನ್‌ ಹಣ್ಣಿನ ಬೇಸಾಯ ಕೈಗೊಂಡಿದ್ದರಿಂದ ಕುಟುಂಬದ ಆದಾಯ ದ್ವಿಗುಣಗೊಳ್ಳುತ್ತಿದೆ.

ಇದನ್ನೂಓದಿ: ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು ನಿಮಗೆ ಗೊತ್ತೆ!

ತಮ್ಮ 2.5 ಎಕರೆ ಭೂಮಿಗೆ ಸಾವಯವ ಗೊಬ್ಬರ ಬೆರೆಸಿ ಭೂಮಿಯನ್ನು ಚೆನ್ನಾಗಿ ಹದಗೊಳಿಸಿದರು. ನಂತರ 2021ರ ಏಪ್ರಿಲ್‌ ನಲ್ಲ ಹೈದ್ರಾಬಾದನಿಂದ ಪ್ರಕಾಶಮಾನವಾದ  ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ಕಂಬದಿಂದ ಕಂಬಕ್ಕೆ 8  ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಂತೆ ಒಟ್ಟು 985 ಕಂಬಗಳಿಗೆ ಬಳ್ಳಿಗಳನ್ನು ಹರಡಿಸಿದ್ದಾರೆ. ಪ್ರತಿ 2-3 ತಿಂಗಳಿಗೊಮ್ಮೆ ಬಳ್ಳಿಗಳಿಗೆ ಗೊಬ್ಬರ ಹಾಕಿ ವಾರಕ್ಕೊಮ್ಮೆ ನೀರುಣಿಸುವರು.

ಬಹುವಾರ್ಷಿಕ ಡ್ರ್ಯಾಗನ್‌ ಫ್ರೂಟ್‌ ಬೇಸಾಯಕ್ಕೆ ತೋಟಗಾರಿಕೆ ಇಲಾಖೆವತಿಯಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಸಹಾಯಧನವನ್ನು ಪಡೆದುಕೊಂಡಿದ್ದಾರೆ.

ತೋಟಗಾರಿಕೆ ಅಧಿಕಾರಿಗಳ ತಾಂತ್ರಿಕ ಸಲಹೆ, ಮಾರ್ಗದರ್ಶನದೊಂದಿಗೆ ಡ್ರ್ಯಾಗನ್‌ ಬೇಸಾಯ ಕ್ರಮಗಳನ್ನು ಅನುಸರಿಸಿದ್ದರಿಂದ 12 ತಿಂಗಲಿಂದಲೇ ಇಳುವರಿ ಪ್ರಾರಂಭವಾಗಿದೆ. ಈವರೆಗೆ 15 ಟನ್‌ ಇಳುವರಿ ಪಡೆದು 6 ಲಕ್ಷ ರೂ. ಲಾಭ ಗಳಿಸಿದ್ದಾರೆ. ಪ್ರತಿ ಹಣ್ಣು 250-500 ಗ್ರಾಂ ಮತ್ತು ಒಂದು ಕೆ.ಜಿ.ಗೆ 130-150 ರಂತೆ ಮಾರಾಟವಾಗುತ್ತದೆ. ಹಣ್ಣು ಮಾರಾಟಗಾರರೇ ಇವರ ತೋಟದಿಂದ ನೇರವಾಗಿ ಡ್ರ್ಯಾಗನ್‌ ಹಣ್ಣನ್ನು ಖರೀದಿಸುತ್ತಿದ್ದಾರೆ.

ಇದನ್ನೂ ಓದಿ:ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ ಸಾಕು!

ಈ ಬೇಸಾಯ ಪ್ರಾರಂಭಿಸಿದಾಗ ಹಲವು ರೈತರು ಅಪಹಾಸ್ಯ ಮಾಡಿದ್ದರೂ ಎದೆಗುಂದದೆ ಬೇಸಾಯದಲ್ಲಿ ಯಶಸ್ಸು ಕಂಡು ಮೊದಲ ಬೆಳೆ ಪಡೆದಾಗ ನನ್ನ ಇಡೀ ಕುಟುಂಬ ಖುಷಿಪಟ್ಟಿತು ಮತ್ತು ಕುಟುಂಬದಲ್ಲಿ  ನೆಮ್ಮದಿ ಕಾಣುವಂತಾಗಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ, 20-25 ವರ್ಷಗಳವರೆಗೆ ನಿರಂತರವಾಗಿ ಲಾಭ ನೀಡುವ ಬೆಳೆಯಾಗಿದೆ. ಇದರ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಸಂಪೂರ್ಣ ಸಿಕ್ಕಿದೆ ಎನ್ನುತ್ತಾರೆ. ವರ್ಷಕ್ಕೆ ರೂ.10ಲಕ್ಷ ಆದಾಯದ ನಿರೀಕ್ಷೆಯಿದೆ ಎನ್ನುತ್ತಾರೆ ಪ್ರಕಾಶ ಬಣಕಾರ. ಇವರ ಸಂಪರ್ಕ ಮೋಬೈಲ್‌ ಸಂಖ್ಯೆ-8150875058.

ಡ್ರ್ಯಾಗನ್‌ ಫ್ರೂಟ್‌ ಹಣ್ಣಿನ ಲಾಭಗಳು:

1)ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

2)ಡಯಾಬಿಟಿಸ್‌ ಕಡಿಮೆ ಮಾಡುತ್ತದೆ.

3)ಇದರಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಇದೆ.

4)ಇದರಲ್ಲಿ ಫೈಬರ್‌ ಅಂಶವಿರುವುದರಿಂದ ದೇಹದ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.

5)ಮಲಬದ್ಧತೆಯ ಸಮಸ್ಯೆ ನಿವಾರಣೆ ಮಾಡುತ್ತದೆ.

6)ದೇಹದ ಇನ್ಸುಲಿನ್‌ ಪ್ರಮಾಣವನ್ನು ನಿಯಂತ್ರಿಸುತ್ತದೆ.

7) ಈ ಹಣ್ಣು ನೋಡಲು ಆಕರ್ಷಕವಾಗಿದೆ. 

ಇತ್ತೀಚಿನ ಸುದ್ದಿಗಳು

Related Articles