Thursday, November 21, 2024

ಭತ್ತದ ಬಿತ್ತನೆಗೂ ಮುನ್ನ ತಪ್ಪದೇ ಬೀಜೋಪಚಾರ ಮಾಡಿ

ಬೆಳೆಯುವ ಸಿರಿಮೊಳಕೆಯಲ್ಲಿ ಎಂಬುವಂತೆ ಕೃಷಿಯಲ್ಲಿ ಬಿತ್ತನೆ ಬೀಜಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ರೋಗರಹಿತ ಹಾಗೂ ಆರೋಗ್ಯವಂತ ಉತ್ತಮ ಗುಣಮಟ್ಟದ ಜೀಜವನ್ನು ರೈತರು ಬಿತ್ತುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಬೀಜವನ್ನು ಬಿತ್ತನೆ ಗೆಉಪಯೋಗಿಸುವ ಮೊದಲು ವಿವಿಧ ರೋಗಗಳಿಗೆ ಕೀಟನಾಶಕಗಳಿಂದ ಉಪಚರಿಸುವುದು ಸೂಕ್ತ, ನಾವಿ ಬಿತ್ತನೆಗೆ ಉಪಯೋಗಿಸುವ ಬಿತ್ತನೆ ಬೀಜದಲ್ಲಿ ಎನಾದರೂ ಸೋಂಕು ಇದ್ದಲ್ಲಿ, ಬೀಜೋಪಚಾರದ ಮೂಲಕ ತಡೆ ಗಟ್ಟಲು ಸಹಾಯವಾಗುತ್ತದೆ.

ಬೀಜೋಪಚಾರದ ಕ್ರಮಗಳು ತುಂಬಾ ಸರಳ ಮತ್ತು ಕಡಿಮೆ ಖರ್ಚಿನದ್ದಾಗಿದೆ. ಬೆಳೆಗೆ ತಗಲಬಹುದಾದ ಹಾನಿಯನ್ನು ಪೂರ್ವಭಾವಿಯಾಗಿ ತಪ್ಪಿಸುವುದಕ್ಕೆ ಹಾಗೂ ಹೆಚ್ಚಿನ ಇಳುವರಿ ಪಡೆಯುವುದಕ್ಕಾಗಿ ರೈತರು ಬೀಜೋಪಚಾರ ಮಾದುವುದು ಸೂಕ್ತ .

ಬೀಜೋಪಚಾರ ಮಾಡುವ ಪೂರ್ವದಲ್ಲಿ ಬಿತ್ತನೆ ಬೀಜವನ್ನು ಒಂದು ಭಾಗ ಉಪ್ಪು ಹಾಗೂ ನಾಲ್ಕು ಭಾಗ ನೀರಿನ ದ್ರಾವಣದಲ್ಲಿ ಹಾಕಿ ಚೆನ್ನಾಗಿ ಕಲಕಬೇಕು ನೀರಿನಲ್ಲಿ ಮೇಲೇ ತೇಲುವ ಅರ್ಧಗಟ್ಟಿ ಇರುವ ಹಾಗೂ ಜೊಳ್ಳಾದ ಜೀಜಗಳನ್ನು ಬೇರ್ಪಡಿಸಬೇಕು, ಗಟ್ಟಿಯಾದ ಬೀಜಗಾಳನ್ನು ಸ್ವಾಚ್ಚವಾದ ನೀರಿನಿಂದ ಉಪ್ಪಿನ ಅಂಶ ಹೋಗುವವರೆಗೂ ತೊಳೆದು ನೆರಳಿನಲ್ಲಿ ಒಣಗಿಸಿ, ಬೋಜೋಪಚರಿಸಿ ಬಿತ್ತನೆಗೆ ಬಳಸಬೇಕು.

ಬೀಜೋಪಚರದಲ್ಲಿಮೂರುವಿಧಾನಗಳು :-

1. ಶಾಕೋಪಚಾರ : ಬೀಜವನ್ನು ಬಿತ್ತುವುದಕ್ಕೆ ಮೊದಲು 520C ಉಷ್ಣಾಂಶ ಬಿಸಿನೀರಿನಲ್ಲಿ 10 ನಿಮಿಷಗಳ ಕಾಲನೆನೆಸಿ, ಒಣಗಿಸಿದ ನಂತರ ಬಿತ್ತಬೇಕು.

2. ರಾಸಾಯನಿಕ ಔಷಧಿಗಳಿಂದ ಬೀಜೋಪಚಾರ : ಕಾರ್ಬನ್ಡೈಜಿಮ್ (2-3 ಗ್ರಾಂ ಪ್ರತಿ ಪ್ರತಿ ಕೆ.ಜಿ. ಬೀಜಕ್ಕೆ) /ಸ್ಟ್ರೆಪ್ಟೊಸೈಕ್ಲಿನ್ಮತ್ತು ತಾಮ್ರದ ಆಕ್ಸಿಕ್ಲೊರೈಡ್ ಉಪಯೋಗಿಸಿ ಬೀಜೋಪಚಾರ ಮಾಡುವುದು.

3. ಜೈವಿಕ ಪೀಡನಾಶಕಗಳಿಂದ ಬೀಜೋಪಚಾರ : PSB ಅಥವಾ ಸುಡೊಮನಾಸ್ಪ್ಲೊ ರಸೆಸ್ 4-10 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಲೇಪನಮಾಡಿ ಬಿತ್ತುವುದು.

ಭತ್ತದ ಬೀಜೋಪಚಾರ (Wet Method) :-

• ಭತ್ತದ ಬೀಜಗಳನ್ನು ಕಾರ್ಬನ್ಡೈಜಿಮ್ (1.0 ಗ್ರಾಂ ಪ್ರತಿ ಲೀಟರ ನೀರಿಗೆ ಹಾಕಿ) ದ್ರಾವಣದಲ್ಲಿ 12 ಘಂಟೆಗಳ ಕಾಲ ನೆನೆಸಿಡಬೇಕು.
• 12 ಘಂಟೆಗಳು ನೆನೆಸಿದ ಬೀಜವನ್ನುಹೊರಗಡೆ ತೆಗೆದು ತೋಯಿಸಿದ ಗೋಣಿಚೀಲದಲ್ಲಿ ತುಂಬಿ ಚೀಲದ ಬಾಯಿಯನ್ನು ಕಟ್ಟಬೇಕು.
• ಬೀಜವನ್ನು ತುಂಬಿದ ಚೀಲವನ್ನು ಮತ್ತೆ 12 ಗಂಟೆಗಳ ಕಾಲ ಇಡುವುದು.
• 24 ಘಂಟೆಗಳಲ್ಲಿ ಬೀಜದ ಮೊಳಕೆ ಬರುವುದು.
• ಮೊಳಕೆ ಬಂದ ಬೀಜವನ್ನುಏರು ಮಡಿಮಾಡಿ ಬಿತ್ತುವುದು.
• ಸಸಿ ಮಡಿಯಲ್ಲಿ ಬೆಂಕಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ 6 ಗ್ರಾಂ ಟ್ರೈಸೈಕ್ಲೋಜೋಲ್ನ್ನು 10 ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬೀಜೋಪಚಾರ ಉಪಯೋಗಗಳು :-

1. ಉತ್ತಮ ಮೊಳಕೆ.

2. ಸಮನಾದ ಸಸಿಗಳ ಬೆಳವಣಿಗೆ.

3. ನಿರ್ದಿಷ್ಟ ಸಸಿಗಳ ಸಂಖ್ಯೆ ಕಾಪಾಡುವುದು.

4. ಬೆಳೆಯ ಪ್ರಾರಂಬಿಕ ಹಂತದ ರೋಗದ ಹತೋಟಿ.

5. ಮಣ್ಣಿನಿಂದ ಹರಡುವ ರೋಗಗಳ ಹತೋಟಿ.

6 ಶಿಪಾರಸ್ಸು ಮಾಡಿದ ಬಿತ್ತನೆ ಬೀಜದ ಪ್ರಮಾಣದ ಳಕೆ.

ಇತ್ತೀಚಿನ ಸುದ್ದಿಗಳು

Related Articles