Friday, September 20, 2024

ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಿಸಲು ಅರ್ಜಿ ಅಹ್ವಾನ:

ಆತ್ಮೀಯ ರೈತಬಾಂದವರೇ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಜಾರಿಗೆ ತರುತ್ತಿರುತ್ತವೆ. ಆ ಒಂದು ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಟಾರ್ಪಲಿನ್ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗಿದ್ದರೆ ಟಾರ್ಪಲಿನ್ ಪಡೆಯಲು ದಾಖಲೆಗಳು ಏನುಬೇಕು?ಅರ್ಜಿ ಎಲ್ಲಿ ಸಲ್ಲಿಸಬೇಕು? ಆಯ್ಕೆ ಪ್ರಕ್ರಿಯೇ ಹೇಗೇ ತಿಳಿಯೋಣ.

ರೈತರು ಮೊದಲು ತಮ್ಮ ತಾಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ನೋಂದಣಿ ಮಾಡಿಸಬೇಕಾಗಿರುತ್ತದೆ. ಈ ನೋಂದಣಿಯನ್ನು ಮಾಡಿಸಲು ರೈತರು ದಾಖಲೆಗಳಾದ ಜಮೀನಿನ ಪಹಣಿ, ಆಧಾರ್‍ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ,ಪೋಟೋ ಕಾಫಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಯಾದ ನಂತರ ಪ್ರತಿ ರೈತರಿಗೆ ಪ್ರತ್ಯೇಕವಾಗಿ ಒಂದು ನೋಂದಣಿ ಸಂಖ್ಯೆ ನೀಡಲಾಗುತ್ತದೆ.
ಈ ನೋಂದಣಿ ಸಂಖ್ಯೆಯಿಂದ ರೈತರು ಇಲಾಖೆಯ ಯಾವುದೇ ಯೋಜನೆಯ ಪ್ರಯೋಜನೆ ಪಡೆಯಲು ಸಹಾಯವಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಈ ತಾಲ್ಲೂಕಿನ ರೈತ ಬಾಂದವರು ಈ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬಹುದಾಗಿರುತ್ತದೆ.

ಇದನ್ನೂ ಓದಿ: ಕೃಷಿಗೆ ಬೇಕಾದ ಎಲ್ಲಾ ರೀತಿಯ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ಸಹಾಯಧನದಲ್ಲಿ ಲಭ್ಯ:

ವಿತರಣೆ ಪ್ರಕ್ರಿಯೆ:


ಇಲಾಖೆಗೆ ಅರ್ಜಿ ಸಲ್ಲಿಸಿದ ರೈತರ ಹಿರಿತನದ ಆಧಾರ ಮೇಲೆ ಕೃಷಿ ಜಮೀನು ಹೊಂದಿದ ರೈತರಿಗೆ( ಮುಖ್ಯವಾಗಿ ನೋಂದಣಿ ಸಂಖ್ಯೆ) ಹೊಂದಿದ ರೈತರಿಗೆ ಇಲಾಖೆಗೆ ಬಂದ ಟಾರ್ಪಲಿನ್ ಅನುಗುಣವಾಗಿ ವಿತರಿಸಲಾಗುತ್ತದೆ.
(ವಿಶೇಷ ಮಾಹಿತಿ: ಇಲಾಖೆ ಮಾರ್ಗಸೂಚಿಗಳ ಆಧಾರ ಮೇಲೆ ಇಂತಿಷ್ಟು (ಮೂರು ವರ್ಷಕಾಲಾವಕಾಶಗಳ ಒಳಗೆ ತೆಗೆದುಕೊಂಡ ಫಲಾನುಭವಿಗಳಿಗೆ ಅವಕಾಶ ಅವವಿರುವುದಿಲ್ಲ)

ದಾಖಲೆಗಳು:
ಪಹಣಿ ಪ್ರತಿ.
ಆಧಾರ್‍ ಕಾರ್ಡ ಪ್ರತಿ,
ಬ್ಯಾಂಕ್ ಪಾಸ್ ಬುಕ್ ಪ್ರತಿ
ಪೋಟೋ
ಅರ್ಜಿ

ಅರ್ಜಿ ಸಲ್ಲಿಸುವುದು ಎಲ್ಲಿ?
ತಾಲ್ಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು.

ಇದನ್ನೂ ಓದಿ: ಬೆಳೆಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಪದ್ದತಿ ಬಳಸುವುದರಿಂದ ಲಾಭವೇನು?

ಅರ್ಹ ಫಲಾನುಭವಿಗಳು ಖುದ್ದಾಗಿ ದಾಖಲೆಗಳನ್ನು ನೀಡಿ ಟಾರ್ಪಲಿನ್ ಪಡೆಯಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.

ಬೇರೆ ಬೇರೆ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಇಲಾಖೆಗಳಲ್ಲಿ ಯೋಜನೆಯ ಅನುದಾನಗಳ ಅನುಗುಣವಾಗಿ ಲಬ್ಯವಿದ್ದರೆ ಪಡೆದುಕೊಳ್ಳಿ. ಇಲ್ಲವಾದರೆ ಮುಂದೆ ಅನುದಾನ ಬಂದಾಗ ಯೋಜನೆಯ ಫಲಾನುಭವಿಗಳು ಆಗಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles