Thursday, November 21, 2024

Distribution of Tarpaulin 2023: ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಣೆ :

ಆತ್ಮೀಯ ರೈತ ಬಾಂದವರೇ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಜಾರಿಗೆಗೊಳಿಸುತ್ತವೆ. ಆ ಒಂದು ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಟಾರ್ಪಲಿನ್ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗಿದ್ದರೆ ಟಾರ್ಪಲಿನ್ ಪಡೆಯಲು ದಾಖಲೆಗಳು ಏನುಬೇಕು?ಅರ್ಜಿ ಎಲ್ಲಿ ಸಲ್ಲಿಸಬೇಕು? ಆಯ್ಕೆ ಪ್ರಕ್ರಿಯೇ ಹೇಗೇ ತಿಳಿಯೋಣ.

Documents required For registration of farmers: ಇಲಾಖೆಯಲ್ಲಿ ರೈತರ ನೋಂದಣಿ ಮತ್ತು ಬೇಕಾದ ದಾಖಲೆಗಳು:
ರೈತರು ಮೊದಲು ತಮ್ಮ ತಾಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ Fruits ನೋಂದಣಿ ಮಾಡಿಸಬೇಕಾಗಿರುತ್ತದೆ.


ಈ ನೋಂದಣಿಯನ್ನು ಮಾಡಿಸಲು ರೈತರು ದಾಖಲೆಗಳಾದ ಜಮೀನಿನ ಪಹಣಿ, ಆಧಾರ್‍ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪೋಟೋ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಯಾದ ನಂತರ ಪ್ರತಿ ರೈತರಿಗೆ ಪ್ರತ್ಯೇಕವಾಗಿ ಒಂದು ನೋಂದಣಿ ಸಂಖ್ಯೆ ನೀಡಲಾಗುತ್ತದೆ.


ಈ ನೋಂದಣಿ ಸಂಖ್ಯೆಯಿಂದ ರೈತರು ಇಲಾಖೆಯ ಯಾವುದೇ ಯೋಜನೆಯ ಪ್ರಯೋಜನೆ ಪಡೆಯಲು ಸಹಾಯವಾಗುತ್ತದೆ..

ಟಾರ್ಪಲಿನ್ ಅರ್ಜಿ ಸಲ್ಲಿಸುವ ಸ್ಥಳ:

ಮುಂಡಗೋಡ: ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ರೈತರಿಗೆ ಸಹಾಯಧನದಡಿಯಲ್ಲಿ ಟಾರ್ಪಲಿನಗಳ ವಿಷಯಕ್ಕೆ ಸಂಬಂದಪಟ್ಟಂತೆ ಪ್ರಕಟಣೆ ಹೊರಡಿಸಿದ್ದು ಪ್ರಕಟಣೆಯಲ್ಲಿ ರೈತ ಬಾಂದೆವರು ಮುಂಡಗೋಡ ರೈತ ಸಂಪರ್ಕ ಕೇಂದ್ರ ಹಾಗೂ ಪಾಳಾ ರೈತ ಸಂಪರ್ಕ ಕೇಂದ್ರಕ್ಕೆ 8*6 ಸೈಜಿನ ಟಾರ್ಪಲಿನಗಳು ಸಾಮನ್ಯ ವರ್ಗಕ್ಕೆ ಲಭ್ಯವಿರುತ್ತದೆ.

ಪ್ರಸಕ್ತ ದಾಸ್ತಾನು ರೈತ ಸಂಪರ್ಕ ಕೇಂದ್ರ ಮುಂಡಗೋಡ ಕ್ಕೆ 297 ಹಾಗೂ ಪಾಳಾ ರೈತ ಸಂಪರ್ಕ ಕೇಂದ್ರಕ್ಕೆ 226 ಸದರಿ ಟಾರ್ಪಲಿ ನಗಳ ಸಹಾಯಧನದಡಿ ನೀಡಲಾಗುತ್ತದೆ.
ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ ಕಾಡ್, ಉತಾರ ನೀಡಿ ,ರೈತರ ವಂತಿಗೆ 1570 ರೂ ಭರಿಸಿ ಟಾರ್ಪಲಿನಗಳನ್ನು ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕರು ವಿನಂತಿಸಿದ್ದಾರೆ

ಇದನ್ನೂ ಓದಿ: PM kisan: ಫಲಾನುಭವಿಗಳು 15 ನೇ ಕಂತಿಗೆ ಅರ್ಹರಾಗಲು ಈ ಕೆಲಸ ಮಾಡುವುದು ಕಡ್ಡಾಯ :

ಟಾರ್ಪಲಿನ್ ಪಡೆಯಲು ಷರತ್ತುಗಳು ಮತ್ತು ವಿತರಣೆ ಪ್ರಕ್ರಿಯೆ:
ರೈತರು ಕೃಷಿ ಇಲಾಖೆಯಲ್ಲಿ ತಮ್ಮ ಜಮೀನಿನ ನೋಂದಣಿ ಮಾಡಿಸಿರಬೇಕು.
ಕಳೆದ ಮೂರು ವರ್ಷಗಳಲ್ಲಿ ಟಾರ್ಪಲಿನ್‌ಗಳನ್ನು ಪಡೆಯದ ರೈತರು ಅರ್ಜಿ ಸಲ್ಲಿಸಿ ಟಾರ್ಪಲಿನ್ ಪಡೆಯಬಹುದು.
ರೈತಾಪಿ ವರ್ಗಕ್ಕೆ ಸೇರಿರಬೇಕು. ಜಮೀನು ಸಾಗುವಳಿ ಮಾಡುತ್ತಿರಬೇಕು.


ಇಲಾಖೆಗೆ ಅರ್ಜಿ ಸಲ್ಲಿಸಿದ ರೈತರ ಹಿರಿತನದ ಆಧಾರ ಮೇಲೆ ಕೃಷಿ ಜಮೀನು ಹೊಂದಿದ ರೈತರಿಗೆ( ಮುಖ್ಯವಾಗಿ ನೋಂದಣಿ ಸಂಖ್ಯೆ) ಹೊಂದಿದ ರೈತರಿಗೆ ಇಲಾಖೆಗೆ ಬಂದ ಟಾರ್ಪಲಿನ್ ಅನುಗುಣವಾಗಿ ವಿತರಿಸಲಾಗುತ್ತದೆ.
(ವಿಶೇಷ ಮಾಹಿತಿ: ಇಲಾಖೆ ಮಾರ್ಗಸೂಚಿಗಳ ಆಧಾರ ಮೇಲೆ ಇಂತಿಷ್ಟು (ಮೂರು ವರ್ಷಕಾಲಾವಕಾಶಗಳ ಒಳಗೆ ತೆಗೆದುಕೊಂಡ ಫಲಾನುಭವಿಗಳಿಗೆ ಅವಕಾಶ ಅವವಿರುವುದಿಲ್ಲ)

Required Documents : ಬೇಕಾದ ದಾಖಲೆಗಳು:
ರೈತರು ಪಹಣಿ ಪ್ರತಿ.
ಆಧಾರ್‍ ಕಾರ್ಡ ಪ್ರತಿ,
ಬ್ಯಾಂಕ್ ಪಾಸ್ ಬುಕ್ ಪ್ರತಿ
ಪೋಟೋ
ಅರ್ಜಿ

Where to apply: ಅರ್ಜಿ ಸಲ್ಲಿಸುವುದು ಎಲ್ಲಿ?
ಮುಂಡಗೋಡ ತಾಲ್ಲೂಕಿನ ಹೋಬಳಿ ಮಟ್ಟದ ಪಾಳಾ ರೈತ ಸಂಪರ್ಕ ಕೇಂದ್ರ.

ಇದನ್ನೂ ಓದಿ:ಜಲಾನಯನ ಅಭಿವೃದ್ದಿ ಇಲಾಖೆಯಿಂದ ತೆರೆದ ಬಾವಿ, ಡೀಸೆಲ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ:

ಅರ್ಹ ಫಲಾನುಭವಿಗಳು ಖುದ್ದಾಗಿ ದಾಖಲೆಗಳನ್ನು ನೀಡಿ ಟಾರ್ಪಲಿನ್ ಪಡೆಯಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.

ವಿಶೇಷ ಸೂಚನೆ: ಬೇರೆ ಬೇರೆ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಇಲಾಖೆಗಳಲ್ಲಿ ಯೋಜನೆಯ ಅನುದಾನಗಳ ಅನುಗುಣವಾಗಿ ಲಬ್ಯವಿದ್ದರೆ ಪಡೆದುಕೊಳ್ಳಿ. ಇಲ್ಲವಾದರೆ ಮುಂದೆ ಅನುದಾನ ಬಂದಾಗ ಯೋಜನೆಯ ಫಲಾನುಭವಿಗಳು ಆಗಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles