ಆತ್ಮೀಯ ರೈತ ಬಾಂದವರೇ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತವೆ. ಆ ಒಂದು ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಟಾರ್ಪಲಿನ್ ಪಡೆಯಲು ಕೃಷಿ ಇಲಾಖೆಯ ಕೃಷಿ ಸಂಸ್ಕರಣೆ ಹಾಗೂ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ರಿಯಾಯಿತಿ ದರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತಾಡಪತ್ರಿಗಳನ್ನು ವಿತರಿಸಲು ಹಾವೇರಿ ತಾಲೂಕಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: https://krishimahiti.com/agribusiness-and-agriclinic-training-along-with-financial-subsidy/ ಕೃಷಿ ಸಂಬಂದಿಸಿದ ಉದ್ಯಮಕ್ಕೆ, ತರಬೇತಿ ಜೊತೆಗೆ ಆರ್ಥಿಕ ಸಹಾಯಧನ
ಇಲಾಖೆಯಿಂದ ರಿಯಾಯಿತಿ ದರದಲ್ಲಿ ತಾಡಪತ್ರಿಗಳನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ರೈತರು ಇದೇ ಆಗಸ್ಟ್ 14ರೊಳಗಾಗಿ ಅರ್ಜಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೆಶಕರು ಮಾಹಿತಿ ನೀಡಿರುತ್ತಾರೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಕೃಷಿಕರು ಇರಬೇಕು, ಜಮೀನಿನ (ಪಹಣಿ) ಹೊಂದಿರಬೇಕು.
ಈ ಹಿಂದಿನ ಮೂರು ವರ್ಷಗಳಲ್ಲಿ ತಾಡಪತ್ರಿಗಳನ್ನು ಪಡೆಯದೆ ಇರುವ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕಡ್ಡಾಯವಾಗಿ ರೈತರ ನೋಂದಣಿ ನಂಬರ್ ಹೊಂದಿರಬೇಕು.
ಇದನ್ನೂ ಓದಿ: https://krishimahiti.com/2023-24-krishimele-dharawad-date-fix-other-information/ 2023-ನೇ ಧಾರವಾಡ ಕೃಷಿ ಮೇಳ ,ಈ ವರ್ಷದ ಕೃಷಿಮೇಳದ ವಿಶೇಷತೆಗಳೇನು? ಮಳಿಗೆಗಾಗಿ ಸಂಪರ್ಕಿಸುವುದು ಯಾರನ್ನು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ .
ಬೇಕಾದ ದಾಖಲೆಗಳು:
ಆಸಕ್ತ ರೈತರು ಅರ್ಜಿ ನಮೂನೆ ,ಆಧಾರ್ ಕಾರ್ಡ್, ಜಮೀನಿನ ಉತಾರ,
ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ದಿನಾಂಕ 14-08-2023ರೊಳಗಾಗಿ ಸಲ್ಲಿಸಬೇಕು.
ದಿನಾಂಕ 17-08-2023 ರಂದು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮುಖಾಂತರ ಫಲಾನುಭವಿಗಳ ಆಯ್ಕೆಮಾಡಲಾಗುವುದು.
ಆಯ್ಕೆಯಾದ ರೈತ ಫಲಾನುಭವಿಗಳಿಗೆ ದಿನಾಂಕ 18-8-2023 ರಿಂದ 31-08-2023ರವರೆಗೆ ಹಂಚಿಕೆ ಮಾಡಲಾಗುವುದು.
ಇದನ್ನೂ ಓದಿ: PM Kisan Samman Nidhi Yojane:ಹೊಸದಾಗಿ PM Kisan ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ:
ತಾಡಪತ್ರೆಯ ಸೈಜ್ ಮತ್ತೆ ದರದ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಾಹಿತಿ ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು ತಿಳಿಸಿದ್ದಾರೆ.