Saturday, October 5, 2024

ನಿಮ್ಮ ಅಕ್ಕಪಕ್ಕದ ಜಾಗದ ಸರ್ವೆ ನಂಬರ್‍ ಯಾರ ಹೆಸರಿನಲ್ಲಿದೆ ಚೆಕ್ ಮಾಡಿ!! ನಿಮ್ಮ ಗ್ರಾಮದ ಸಂಪೂರ್ಣ ನಕ್ಷೆ ನಿಮ್ಮ ಮೊಬೈಲ್ ನೋಡಿ!!

ಪ್ರೀಯೆ ರೈತ ಬಾಂದವರೇ ಈ ಲೇಖನದಲ್ಲಿ ನಾವು ರೈತರ ಗದ್ದೆ ಮತ್ತು ಜಾಗ ನಿಖರವಾಗಿ ಯಾರ ಹೆಸರಿಗೆ ಇದೆ? ಯಾವ ಸರ್ವೆ ನಂಬರ್‍ ವಿಸ್ತೀರ್ಣ ಎಷ್ಟು? ನೋಡುವ ವಿಧಾನದ ಬಗ್ಗೆ ಮಾಹಿತಿಯನ್ನು ನೀಡಿರುತ್ತೇವೆ.
ರೈತರು ಯಾವುದೇ ಜಮೀನಿನಲ್ಲಿ ನಿಂತು ಅದು ಯಾರ ಹೆಸರಿನಲ್ಲಿದೆ ಎಂಬುದನ್ನು ಈಗ ರೈತರ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾಗಿರುತ್ತದೆ.

ಹೌದು, ಈಗ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಂತೆ ಎಲ್ಲಾ ಕ್ಷೇತ್ರದಲ್ಲಿ ಕೂಡ ಡಿಜಿಟಲ್ ಸೇವೆಯನ್ನು ನೋಡಬಹುದಾಗಿರುತ್ತದೆ, ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಆತ್ಮೀಯ ರೈತ ಬಾಂದವರೇ ಹೊಸದಾಗಿ ನೀವು ಜಮೀನು ಖರೀದು ಮಾಡುವಾಗ ಅಥವಾ ಪ್ಲಾಟ್ ಖರೀದು ಮಾಡುವಾಗ ಆ ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ಈ ದಿಶಾಂಕ್ ಆ್ಯಪ್ ಸಹಾಯದಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ಈ ದಿಶಾಂಕ್ ಆ್ಯಪನ್ನು ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೆ ಉಪಯುಕ್ತ ಮಾಹಿತಿ ನೀಡಲೆಂದು ಅಭಿವೃದ್ಧಿಪಡಿಸಿದೆ. ಆ ಜಾಗ ಸರ್ಕಾರಕ್ಕೆ ಸೇರಿದೆಯೋ ಅಥವಾ ಒತ್ತುವರಿ ಜಾಗವೋ ಎಂಬ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Crop insurence Questions and Answers: ಬೆಳೆ ವಿಮೆ ಕುರಿತು ರೈತರಿಗೆ ಅನುಮಾನಗಳಿಗೆ ತೆರೆ ನೀಡಿದ ಇಲಾಖೆ: 2016- ರಿಂದ 2021 ರವರೆಗೆ ಪಾವತಿಯಾದ ಬೆಳೆವಿಮೆ ಮೊತ್ತವೆಷ್ಟು?

ಈ ಆ್ಯಪ್ Application ದಿಂದಾಗಿ ನಾವು ನಿಂತಿರುವ ಸ್ಥಳದ ಭೂನಕ್ಷೆ ನೋಡಬಹುದು. ಈ ಆ್ಯಪ್ Application ಸಹಾಯದಿಂದಾಗಿ ಪ್ಲಾಟ್ Plat ಅಥವಾ ಜಮೀನಿನ ನಿಖರ ಸರ್ವೆ ನಂಬರ್ ಸಹ ತಿಳಿದುಕೊಳ್ಳಬಹುದು. ನಿಂತಿರುವ ಸ್ಥಳದ ಸುತ್ತಲಿನ ಪ್ರದೇಶ, ಹಳ್ಳ, ಕೊಳ್ಳ ,ಕೆರೆಕುಂಟೆ, ಅಕ್ಕಪಕ್ಕದ, ಅರಣ್ಯ ಪ್ರದೇಶದ ವಿವರ ಸಹ ಗೋಚರಿಸುತ್ತದೆ. ನೀವು ಒಂದು ಸೈಟ್ ಖರೀದಿ ಮಾಡಲು ಹೋಗುವಾಗ ಅಥವಾ ನೀವು ನಿಮ್ಮಜಮೀನಿನ ಜಾಗದಲ್ಲಿ ನಿಂತರು ಈ ದಿಶಾಂಕ್ ಆಪ್ ಅನ್ ಮಾಡಿದರೆ ಸಾಕು ಸ್ಥಳದ ಸಂಪೂರ್ಣ ಮಾಹಿತಿ ನಿಖರವಾಗಿ ನೀಡುತ್ತದೆ.

Dishank application: ಡೌನ್ಫೋಡ್ ಮಾಡಿಕೊಳ್ಳುವುದು ಹೇಗೆ? ರೈತರು ದಿಶಾಂಕ್ ಆ್ಯಪನ್ನು ಮೊಬೈಲನಲ್ಲಿ Install ಮಾಡಿಕೊಳ್ಳಬೇಕಾದರೆ

Step:1: ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ https://play.google.com/store/apps/details?id=com.ksrsac.sslr&hl=en&gl=US

Step:2: ನಂತರ ದಿಶಾಂಕ್ ಆ್ಯಪ್ ಓಪನ್ ಆಗುತ್ತದೆ. ಆಗ ರೈತರು ಇನ್ಸಟಾಲ್ Install ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಇನ್ಸಟಾಲ್ Install ಆಗಲು ಆರಂಭವಾಗುತ್ತದೆ.

ಇದನ್ನೂ ಓದಿ: Sewing Training-2024: ಸ್ವಂತ ಉದ್ಯೋಗ ಮಾಡಲು ಆಸಕ್ತರಿಗೆ ಸುವರ್ಣವಕಾಶ: ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ

Step:3: ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಓಪನ್ ಮೇಲೆ ಕ್ಲಿಕ್ ಮಾಡಿದ ನಂತರ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಕರ್ನಾಟಕ ಸರ್ಕಾರ ದಿಶಾಂಕ್ ಗೆ ಸ್ವಾಗತ ಎಂಬ ಮೆಸೇಜ್ ಕಾಣುತ್ತದೆ. ಆಮೇಲೆ ಅಲೋ ದಿಶಾಂಕ್ ಟು ಆಕ್ಸೆಸ್ ದಿಸ್ ಡಿವೈಸ್ ಮೆಸೆಜ್ ಕಾಣುತ್ತದೆ.

Step:4: ನಂತರ ಬಳಕೆದಾರರ ನೋಂದಣಿ, ಕರ್ನಾಟಕ ಸರ್ಕಾರ ದಿಶಾಂಕ್ ಮೂಲಕ ನಾಗರಿಕ ಸೇವೇಗಳನ್ನು (ನಕ್ಷೆಗಳು, ಪ್ಲಾಟ್ಗಳ ಡಿಜಿಟಲ್,ರೇಖಾಚಿತ್ತಗಳು, ನಿಮ್ಮ ಆಪ್ಲೀಕೇಶನ್ ಸ್ಥಿತಿ ಇತ್ಯಾದಿ) ಮಾಹಿತಿಯನ್ನು ನೀಡಲು ಯೋಜಿಸಿದೆ. ಆದ್ದರಿಂದ, ನಿಮ್ಮ ಹೆಸರು ಮತ್ತು ಮೊಬೈಲ್ ನೀಡಿ. ಇಮೇಲ್ ಐಡಿಯನ್ನುಸಹ ನೀಡಬಹುದು ಅದು ಐಚ್ಛಿಕವಾಗಿರುತ್ತದೆ. ಅಲ್ಲಿ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಿ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.ನಂತರ ಜಿಪಿಎಸ್ ಆನ್ On ಮಾಡಿಕೊಳ್ಳಬೇಕು. ಆಗ ನಿಮಗೆ ನೀವು ನಿಂತಿರುವ ಸ್ಥಳ ಪೈಂಟ್ ಆಗಿರುತ್ತದೆ. ಅಂದರೆ ಯಾವ ಸ್ಥಳದಲ್ಲಿ ನಿಂತಿರುತ್ತೀರೋ ಆ ಸರ್ವೆ ನಂಬರ್ ಕಾಣುತ್ತದೆ. ಪೈಂಟ್ ಮೇಲೆ ಕ್ಲಿಕ್ ಮಾಡಿದ ನಂತರ ಯಾವ ಸರ್ವೆ ನಂಬರ್ ನಲ್ಲಿ ನೀವಿದ್ದೀರೋ ಅದು ಕಾಣುತ್ತದೆ.

Step:5: ಇನ್ನೂ ಹೆಚ್ಚಿನ ವಿವರಗಳ ಮೇಲೆ ಕ್ಲಿಕ್ ಮಾಡಿದಾಗ ಮತ್ತೊಂದು ಪೆಜ್ ತೆರೆದುಕೊಳ್ಳುತ್ತದೆ. ಆಗ ನೀವು ಮಾಲಿಕರ ವಿವರಗಳು ಮೇಲೆ ಓತ್ತಿದಾಗ ಸರ್ವೋಕ್ ಸಂಖ್ಯೆ, ಹಿಸ್ಸಾನಂಬರ್ ಆಯ್ಕೆ ಮಾಡಿ ಮಾಲೀಕರು ಮೇಲೆ ಕ್ಲಿಕ್ ಮಾಡಿದಾಗ ನೀವು ನಿಂತಿರುವ ಜಮೀನು ಯಾರ ಹೆಸರಿನಲ್ಲಿದೆ ಜಮೀನಿನ ವಿಸ್ತೀರ್ಣ ಎಷ್ಟಿದೆ ಹಾಗೂ ಅಕ್ಕಪಕ್ಕದ ಹಾಗೂ ನೆರೆಹೊರೆಯ ಜಮೀನಿನ ಜಮೀನಿನ ಅಥವಾ ಜಾಗದ ಮಾಲೀಕರು ಮಾಹಿತಿ ಕೂಡಾ ದೊರೆಯುತ್ತದೆ.

ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:

ಇಲ್ಲಿ ಕಾಣುವ ನಕಾಶೆಯು ಸಾಂಕೇತಿಕವಾದದ್ದು. ಪ್ರತಿ ಸರ್ವೆ ನಂಬರನ ಗಡಿರೇಖೆಗಳನ್ನು ತೋರಿಸುತ್ತದೆ. ಆ ಜಾಗದಲ್ಲಿ ರಸ್ತೆ ಇದೆಯೋ ಇಲ್ಲವೋ ಎಂಬುದನ್ನು ಸಹ ತಿಳಿದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles