Tuesday, December 3, 2024

Dishaank app: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಅನೇಕ ಜನ ರೈತರಿಗೆ ನಮ್ಮ ಜಮೀನಿನ ಸರ್ವೆ ನಂಬರ್ ಪಕ್ಕ ಯಾವ ಸರ್ವೆ ನಂಬರ್ ಬರುತ್ತದೆ ಅದರ ಗಡಿ ಎಷ್ಟು ಮತ್ತು ನಮ್ಮ ಸರ್ವೆ ನಂಬರ್ ಗಡಿ ಎಲ್ಲಿಯವರೆಗೆ ಇದೆ ಎಂದು ನೇರವಾಗಿ ತಮ್ಮ ಜಮೀನಿಗೆ ಭೇಟಿ ಮಾಡಿ ಹೇಗೆ ತಿಳಿಯಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ, ಈ ಮಾಹಿತಿಯನ್ನು ತಪ್ಪದೇ ನಿಮ್ಮ ಬಳಗದಲ್ಲಿ ಹಂಚಿಕೊಳ್ಳಿ.

ಇದರ ಜೊತೆಗೆ ನಿಮ್ಮ ಗ್ರಾಮದ ಸಂಪೂರ್ಣ ವಿವರ ಸಹಿತ ಮಾಹಿತಿಯುಳ್ಳ ನಕ್ಷೆಯನ್ನು ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಮೊಬೈಲನಲ್ಲೇ ಡೌನ್ಲೋಡ್ ಮಾಡಬವುದು ಇದರ ಕುರಿತಾಗಿಯು ವಿವವರಿಸಲಾಗಿದೆ. ಜಮೀನಿನ ಅಳತೆ ಮಾಡುವ ಸಂದರ್ಭದಲ್ಲಿ ಈ ನಕ್ಷೆ ರೈತರಿಗೆ ತುಂಬ ಅನುಕಾಲಕವಾಗಿದೆ.

ಯಾವೆಲ್ಲ ಮಾಹಿತಿ ಲಭ್ಯ:

ಈ ನಕ್ಷೆಯಲ್ಲಿ ಒಂದು ಗ್ರಾಮದ ಗಡಿ ಎಲ್ಲಿಯವರೆಗೆ ಇದೆ, ಸರ್ವೆ ನಂಬರ್ ಗಡಿ ಮಾಹಿತಿ ಗುರುತಿಸಲಾಗಿದೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಯಾವ ದಿಕ್ಕಿನಲ್ಲಿ ಬರುತ್ತದೆ ಮತ್ತು ಅಕ್ಕ ಪಕ್ಕದ ಜಮೀನಿನ ಸರ್ವೆ ನಂಬರ್ ಯಾವುವು ಮತ್ತು ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಎಲ್ಲಿ ಬರುತ್ತದೆ ಹೀಗೆ ಅನೇಕ ಮಾಹಿತಿಯುಳ್ಳ ನಕ್ಷೆ ಇದಾಗಿದೆ.

ಗ್ರಾಮದ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರಾಜ್ಯ ಸರಕಾರದ ಮಾಹಿತಿ ಕಣಜ ವೆಬ್ಸೈಟ್ ನ ಈ https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066&TemplateType=DROPDOWN ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸು” ಮೇಲೆ ಕ್ಲಿಕ್ ಮಾಡಬೇಕು ಆಗ ಕೆಳಗೆ “ನಕ್ಷೆ” ಎನ್ನುವ ಆಯ್ಕೆ ಗೋಚರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಗ್ರಾಮದ ನಕ್ಷೆಯು ಡೌನ್ಲೋಡ್ ಆಗುತ್ತದೆ.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

ಡೌನ್ಲೋಡ್ ಮಾಡಿದ ಗ್ರಾಮದ ನಕ್ಷೆಯ ವಿವಿಧ ಗಡಿಗಳನ್ನು ಸೂಚಿಸುವ ಗುರುತುಗಳು:

ಬಂಡಿದಾರಿ: ಗುಲಾಬಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.
ಸರ್ವೆ ನಂಬರುಗಳು: ಕಪ್ಪು ಬಣ್ಣದ ಕನ್ನಡ ಅಂಕಿಗಳಿಂದ ನಮೂದಿಸಲಾಗಿದೆ.
ಬೆಟ್ಟ : ವೃತ್ತಾಕಾರದ ಹಸಿರು ಬಣ್ಣ.
ಬಾವಿ: ಗುಲಾಬಿ ಬಣ್ಣದ ವೃತ್ತಾಕಾರ.
ದೇವಸ್ಥಾನ: ಹಳದಿ ಬಣ್ಣದ ಮನೆ ಆಕಾರ.
ಗ್ರಾಮದ ಗಡಿ ರೇಖೆ: ಗುಲಾಬಿ ಬಣ್ಣ ರೇಖೆಯಿಂದ ಗುರುತಿಸಲಾಗಿದೆ.
ಜಮೀನಿನ ಸರ್ವೆ ನಂಬರ್ ಗಡಿ: ಕಪ್ಪು ಬಣ್ಣದ ರೇಖೆಯಿಂದ ಗುರುತಿಸಲಾಗಿದೆ.
ಕಾಲು ದಾರಿ: ಹಳದಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.

ನೇರವಾಗಿ ಜಮೀನನ್ನು ಭೇಟಿ ಮಾಡಿ ಸರ್ವೆ ನಂಬರ್ ಕುರಿತು ತಿಳಿಯುವ ವಿಧಾನ:

ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ದಿಶಾಂಕ್ ಮೊಬೈಲ್(Dishank app) ಅಪ್ಲಿಕೇಶನ್ ಅನ್ನು ರೈತರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೇರವಾಗಿ ಜಮೀನನ್ನು ಭೇಟಿ ಮಾಡಿ ಜಿಪಿಎಸ್ ಆಧಾರಿತವಾಗಿ ಸರ್ವೆ ನಂಬರ್ ಮಾಹಿತಿ ಮತ್ತು ಮಾಲೀಕರ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲೆ ತಿಳಿಯಬವುದಾಗಿದೆ.

Step-1: ಈ ಲಿಂಕ್ https://play.google.com/store/apps/details?id=com.ksrsac.sslr ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್(google play store) ನಲ್ಲಿ ಲಭ್ಯವಿರುವ ದಿಶಾಂಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ನಂತರ ಅಪ್ಲಿಕೇಶನ್ ಒಪನ್ ಮಾಡಿ ನಿಮ್ಮ ಮೊಬೈಲ್ ನ ಜಿಪಿಎಸ್ ಅನ್ ಮಾಡಿಕೊಂಡು ನಿಮ್ಮ ಜಮಿನನ್ನು ಭೇಟಿ ಮಾಡಿದಾಗ ಅದರ ಸರ್ವೆ ನಂಬರ್ ತೋರಿಸುತ್ತದೆ ಇದಾದ ಬಳಿಕ ಆ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ “ಹೆಚ್ಚಿನ ವಿವರ ಪಡೆಯಿರಿ” ಮೇಲೆ ಕ್ಲಿಕ್ ಮಾಡಬೇಕು.

Step-3: “ಹೆಚ್ಚಿನ ವಿವರ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ನ ಸರ್ನೋಕ್ ಸಂಖ್ಯೆ ಮತ್ತು ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡು “ಮಾಲೀಕರು” ಬಟನ್ ಮೇಲೆ ಕ್ಲಿಕ್ ಮಾಡಿದ ಜಮೀನಿನ ಮಾಲೀಕರ ಹೆಸರು ಒಟ್ಟು ಜಮೀನಿನ ವಿಸ್ತೀರ್ಣ, ಜಂಟಿ ಮಾಲೀಕರ ವಿವರ ಗೋಚರಿಸುತ್ತದೆ.

Step-4: “ಮಾಲೀಕರು” ಪಕ್ಕದಲ್ಲಿ ಕಾಣುವ “ಆರ್.ಟಿ.ಸಿ/RTC” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಆ ಜಮೀನಿನ ಆರ್.ಟಿ.ಸಿ/ಉತಾರ್/ಪಹಣಿ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: ಅಡಿಕೆ ಬೆಳೆಯಲ್ಲಿ ಕೊಳೆರೋಗದ ಭಾದೆಗೆ ಇಲಾಖೆಯ ಸಲಹೆ:
ಅಡಿಕೆ ಕೊಳೆರೋಗದ ಲಕ್ಷಣಗಳೇನು? ಹಾಗೂ ಹತೋಟಿ ಕ್ರಮಗಳು? ಸಂಪೂರ್ಣ ಮಾಹಿತಿ.

ಇತ್ತೀಚಿನ ಸುದ್ದಿಗಳು

Related Articles