Thursday, November 21, 2024

Diesel pumpset subsidy: ಜಲಾನಯನ ಅಭಿವೃದ್ದಿ ಇಲಾಖೆಯಿಂದ ತೆರೆದ ಬಾವಿ, ಡೀಸೆಲ್ ಪಂಪ್ ಸೆಟ್ ಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

watershed department karnataka: ಆತ್ಮೀಯ ರೈತ ಭಾಂದವರೇ ಕೃಷಿ ಇಲಾಖೆ ಮತ್ತು ಜಲಾನಯನ ಅಭಿವೃದ್ದಿ ಇಲಾಖೆಯಿಂದ 2023-24ನೇ ಸಾಲಿನಿಂದ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗಿದೆ.ಈ ಯೋಜನೆಯಡಿ ರೈತರಿಗೆ ವಿವಿಧ ಘಟಕಗಳಡಿ ಸಹಾಯಧನವನ್ನು ನೀಡಲಾಗುತ್ತೆ.

ಕೃಷಿ ಇಲಾಖೆಯ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ 2023-24 ನೇ ಯೋಜನೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಈ ಕೆಳಗೆ ನೀಡಿರುವ ಘಟಕಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Schoolarship: ವಿದ್ಯಾರ್ಥಿಗಳಿಗೆ 35,0000/- ಸಹಾಯಧನಕ್ಕೆ ಅರ್ಜಿ ಆಹ್ವಾನ:

Diesel pumpset subsidy scheme- ಘಟಕವಾರು ಸಹಾಯಧನ ವಿವರ ಹೀಗಿದೆ:

ಹೊಸದಾಗಿ ಕೊಳವೆ ಬಾವಿಯನ್ನು ಕೊರೆಸುವವರಿಗೆ ರೂ.25000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಡೀಸೆಲ್ ಮತ್ತು ವಿದ್ಯುತ್‌ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.15000/- ಪ್ರೋತ್ಸಾಹ ಧನ ನೀಡಲಾಗುವುದು.

ಹೊಸದಾಗಿ ಸೌರ/ಗಾಳಿ ಚಾಲಿತ ನೀರೆತ್ತುವ ಯಂತ್ರ ಖರಿದೀಸಿದರೆ ರೂ.50000/- ಪ್ರೋತ್ಸಾಹ ಧನ, ನೀಡಲಾಗುವುದು.

ಪೈಪ್ ಅಳವಡಿಕೆ ಪ್ರತೀ ಹೆಕ್ಟೇರ್ ಗೆ ರೂ.10000/-ಪ್ರೋತ್ಸಾಹ ಧನ ನೀಡಲಾಗುವುದು.

ನಿಷ್ಕ್ರಿಯಗೊಂಡ ಕೊಳವೆ ಬಾವಿಗಳ ಮನಶ್ವೇತನಕ್ಕೆ ರೂ.5000/- ಪ್ರೋತ್ಸಾಹ ಧನ ನೀಡಲಾಗುವುದು.

How can apply- ಯಾರೆಲ್ಲ ಈ ಯೋಜನೆಯಡಿ ಸಹಾಯಧನ ಪಡೆಯಬವುದು?

ಈ ಯೋಜನೆಯಡಿ ಫಲಾನುಭವಿಯಾಗಲು ಕನಿಷ್ಟ 1 ಎಕರೆ ಹಾಗೂ ಗರಿಷ್ಟ 1 ಹೆಕ್ಟೇರ್ ವಿಸ್ತೀರ್ಣ ಹೊಂದಿರಬೇಕು.

ಜಂಟಿ ಪಹಣಿ ಹೊಂದಿದ್ದಲ್ಲಿ ಇತರರಿಂದ ರೂ.20 ಬಾಂಡ್ ಪೇಪರ್‌ನಲ್ಲಿ ಒಪ್ಪಿಗೆ ಪತ್ರ ಪಡೆಯುದು.

ಪಂಚಾಯತ್ ಅಧ್ಯಕ್ಷರಿಂದ ಶೀಫಾರಸ್ಸು ಪತ್ರ

required documents for diesel pumpset scheme- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

ಜಮೀನಿನ ರೆಕಾರ್ಡ
ಅರ್ಜಿದಾರರ ಆಧಾರ್‍ ಕಾರ್ಡ
ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
ಅರ್ಜಿ ನಮೂನೆ
ಅಧಿಕಾರಿಗಳು ಕೇಳುವ ಇತರೆ ದಾಖಲೆಗಳು

ಇದನ್ನೂ ಓದಿ: Agriculture equipment subsidy: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.

ಹೆಚ್ಚಿನ ಮಾಹಿತಿಗಾಗಿ ಬ್ರಹ್ಮಾವರ/ಕೋಟಿ ರೈತ ಸಂಪರ್ಕ ಕೇಂದ್ರ ಅಥವಾ ಸುರೇಶ್ ಬಂಗೇರ ಸಹಾಯಕ ಕೃಷಿ ಅಧಿಕಾರಿ ರೈತ ಸಂಪರ್ಕ ಬ್ರಹ್ಮಾವರ ph: 8277932506 ಸಂಪರ್ಕಿಸುವುದು.
ವಿಶೇಷ ಸೂಚನೆ : ಇತರೆ ಜಿಲ್ಲೆಯ ಅಥವಾ ತಾಲೂಕಿನ ರೈತ ಬಾಂದವರೂ ಈ ಯೋಜನೆ ಲಾಭ ಪಡೆಯಲು ನಿಮ್ಮ ಹತ್ತಿರದ ಕೃಷಿ ಇಲಾಖೆ ಮತ್ತು ಜಲಾನಯನ ಅಭಿವೃದ್ದಿ ಇಲಾಖೆ ಸಂಪರ್ಕಿಸಿ ( ಕೃಷಿ ಇಲಾಖೆಯ 2023-24 ನೇ ಯೋಜನೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ) ಲಾಭ ಪಡೆಯಿರಿ.

ಇತ್ತೀಚಿನ ಸುದ್ದಿಗಳು

Related Articles