Thursday, September 19, 2024

Dharawad Krishi mela -2024:ಕೃಷಿ ವಿಶ್ವವಿದ್ಯಾಲಯ ಧಾರವಾಡ ಕೃಷಿ ಮೇಳ ಇದೆ ತಿಂಗಳ 21 ರಿಂದ 24ರ ವರೆಗೆ! ಈ ಬಾರಿಯ ಮೇಳದ ವಿಶೇಷತೆಯ ಮಾಹಿತಿ.

ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳವನ್ನು ರೈತರ ಜಾತ್ರೆ ಎಂತಲೂ ಕರೆಯುತ್ತಾರೆ. ಅದಲ್ಲದೆ ಈ ಕೃಷಿ ಮೇಳದಲ್ಲಿ ಸುಮಾರು ಅಂದಾಜು ನಾಲ್ಕು ದಿನದಲ್ಲಿ 8 ರಿಂದ 10 ಲಕ್ಷ ಜನರು ವೀಕ್ಷಣೆ ಹಾಗೂ ಕೃಷಿ ಸಲಕರಣೆಗಳ ಖರೀದಿ ಮಾಡಲು ಹಲವಾರು ಜನ ಬರುತ್ತಾರೆ. ಈ ಬಾರಿಯ ವಿಶೇಷತೆಗಳೇನು? ಕೃಷಿ ಮೇಳದಲ್ಲಿ ಮಳಿಗೆಗಳನ್ನು ಬುಕ್‌ ಮಾಡಲು ಸಂಪರ್ಕಿಸಬೇಕಾದ ವಿಳಾಸದ ವಿವರ ಇತ್ಯಾದಿ ಮಾಹಿತಿಯನ್ನು ತಿಳಿಸಲಾಗುತ್ತದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2024ರ ಇದೆ ತಿಂಗಳು  ಸೆಪ್ಟಂಬರ್ 21 ರಿಂದ 24 ರ ವರೆಗೆ ನಿಗದಿಪಡಿಸಲಾಗಿದ್ದು,  ಈ ಬಾರಿಯ ಕೃಷಿ ಮೇಳವನ್ನು (Krishi mela Dharwad) ಹವಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಘೋಷವಾಕ್ಯದೊಂದಿಗೆ ಆಯೋಜನೆ ಮಾಡಲು ಕೃಷಿ ವಿಶ್ವ ವಿದ್ಯಾಲಯದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಮ್ಮ ರಾಜ್ಯದಲ್ಲಿ ಕೃಷಿಗೆ ಒಟ್ಟು ನಾಲ್ಕು ವಿಶ್ವ ವಿದ್ಯಾಲಯಗಳಿದ್ದು, ಅವುಗಳು 1.ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ 2.ಧಾರವಾಡ ಕೃಷಿ ವಿಶ್ವ ವಿದ್ಯಾಲಯ 3.ಶಿವಮೊಗ್ಗ ಕೃಷಿ ವಿಶ್ವ ವಿದ್ಯಾಲಯ 4.ರಾಯಚೂರು ಕೃಷಿ ವಿಶ್ವ ವಿದ್ಯಾಲಯ.  ಈ ನಾಲ್ಕು ವಿದ್ಯಾಲಯಗಳಲ್ಲಿ ಪ್ರತಿ ವರ್ಷ ಬೇರೆ ಬೇರೆ ಸಮಯದಲ್ಲಿ ರೈತರಿಗೆ ಕೃಷಿ ಮೇಳಗಳನ್ನು ಆಯೋಜನೆ ಮಾಡುತ್ತವೆ.

ಇದನ್ನೂ ಓದಿ:ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ಮಾಹಿತಿ.

ಹಿಂದಿನ ವರ್ಷ 2023 ರ ಕೃಷಿ ಮೇಳಕ್ಕೆ 10.5 ಲಕ್ಷ ಜನ ರೈತರು ಮೇಳಕ್ಕೆ ಬಂದಿದ್ದು ಈ ವರ್ಷವು ಇಷ್ಟೇ ಪ್ರಮಾಣದ ರೈತರು ಸೇರುವ ನಿರೀಕ್ಷೆಯನ್ನು ಉಂಟು ಮಾಡಿದೆ.

ಬಾರಿಯ ಕೃಷಿ ಮೇಳದ ವಿಶೇಷತೆ ಮತ್ತು ಏನೆಲ್ಲ ಇರಲಿದೆ?

1)ವಿವಿಧ ಕೃಷಿ ಪರಿಕರಗಳ ಮಾರಾಟ ಮತ್ತು ಪ್ರದರ್ಶನ.

2)ನೀರಾವರಿ ಉಪಕರಣಗಳ ಪ್ರಾತ್ಯಕ್ಷಿಕೆ.

3)ಕೃಷಿ ಯಂತ್ರೋಪಕರಣಗಳ ಪ್ರದರ್ಶನ.

4)ಸಿರಿಧಾನ್ಯಗಳ ಮಳಿಗೆ ಮತ್ತು ಮಹತ್ವ.

5)ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು.

6)ಹೈಟೆಕ್‌ ತೋಟಗಾರಿಕೆ ಘಟಕ.

7)ಪಶು ಸಂಗೋಪನೆ ಮತ್ತು ಮೀನುಗಾರಿಕೆ  ಕೃಷಿಯಲ್ಲಿ ತಂತ್ರಜ್ಞಾನಗಳು.

8)ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳು.

9)ಕೊಯ್ಲೊತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ ಘಟಕ.

10) ರೈತ ವಿಜ್ಞಾನಿಗಳ ಸಂವಾದ.

11) ನೇರ ರೈತರ ಸಮಸ್ಯೆಗೆ ವಿಜ್ಞಾನಿಗಳ ಮೂಲಕ ಪರಿಹಾರ ಮಳಿಗೆ.

12)ಆಧುನಿಕ ಕೃಷಿ ತಾಂತ್ರಿಕತೆ ಅಳವಡಿಕೆಯಲ್ಲಿ ಯುವ ಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ.

13)ಹವಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯ ಪಾತ್ರ.

ಇದನ್ನೂ ಓದಿ:ಅಕ್ರಮವಾಗಿ ಮತ್ತು ಆದಾಯ ತೆರಿಗೆ ಕಟ್ಟುತ್ತೀರುವವರ ರೇಷನ್ ಕಾರ್ಡ ರದ್ದು ಮಾಡಿದ ಪಟ್ಟಿ ಬಿಡುಗಡೆ! ಚೆಕ್ ಮಾಡಿಕೊಳ್ಳಿ.

Stall booking-ಮಳಿಗೆಗಳನ್ನು ಬುಕ್ಮಾಡಲು ಸಂಪರ್ಕ ವಿವರ:

ಕೃಷಿ ಮೇಳದಲ್ಲಿ ರೈತರು ಅಥವಾ ಇತರೆ ಕಂಪನಿಯವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ಪ್ರದರ್ಶನ ಮಾಡಲು ಬಯಸುವರು ಮುಂಚಿತವಾಗಿ ಮಳಿಗೆಗಳನ್ನು ಬುಕ್ಮಾಡಲು ಮೊಬೈಲ್‌ 8277478507, 0836-2214497 ಸಂಖ್ಯೆಗೆ ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿಗಳು

Related Articles