Thursday, November 21, 2024

Deprt amount schemes-ಈ ಇಲಾಖೆಗಳಿಂದ ಜನರಿಗೆ ವಿವಿಧ ರೀತಿಯಲ್ಲಿ ಹಣ ಬರುವ ಯೋಜನೆಗಳಿವೆ! ಅವುಗಳ ಮಾಹಿತಿ ಇಲ್ಲಿದೆ.

ನಮಸ್ಕಾರ ಜನರೇ ನಿಮಗೆ ಗೊತ್ತೆ ಕರ್ನಾಟಕ ರಾಜ್ಯ ಸರಕಾರದ ಹಲವಾರು ಇಲಾಖೆಗಳಿವೆ ಅದರಲ್ಲಿ ಹಲವು ಇಲಾಖೆಗಳಿಂದ ಸಾರ್ವಜನಿಕರಿಗೆ ಹಣ ನೀಡುವ ಯೋಜನೆಗಳಿವೆ. ಆ ಯೋಜನೆಗಳು ಯಾವವು ಮತ್ತು ಯಾವ ಇಲಾಖೆಗಳಲ್ಲಿ ಈ ಯೋಜನೆಗಳಿವೆ ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ನಮ್ಮ ಭಾರತ ದೇಶವು ಇನ್ನೂ ಮುಂದುವರೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಇರುವುದರಿಂದ ಆರ್ಥಿಕವಾಗಿ ಸಬಲರಾಗಲು ಆಡಳಿತ ಸರಕಾರಗಳು ಸಾರ್ವಜನಿಕರಿಗೆ ಹಲವಾರು ಯೋಜನೆಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಜನರ ಜೀವನಮಟ್ಟ ಸುಧಾರಣೆ ಮಾಡುವುದಾಗಿರುತ್ತದೆ.

ಅದರಂತೆ ನಮ್ಮ ಭಾರತ ದೇಶವು ಆಡಳಿತ ನಡೆಸುವ ಸರಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಜನರಿಗೆ ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗೆ ಹಣ ನೀಡುವ ಯೋಜನೆಗಳನ್ನು ನೀಡುತ್ತವೆ. ಈ ಹಣವನ್ನು ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಗೆ ಹಾಗೂ ಮೂಲಭೂತ ಸೌಕರ್ಯಗಳ ಬಳಕೆಗೆ ಬಳಸುತ್ತಾರೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಎರಡು ಆಡಳಿತದ ಕಡೆಗಳಿಂದ ಸಾರ್ವಜನಿಕರಿಗೆ ಹಣ ಬರುವ ಯೋಜನೆಗಳಿರುತ್ತವೆ.

ಇದನ್ನೂ ಓದಿ:ನಿಮ್ಮ ಗ್ರಾಮಕ್ಕೆ ನೇಮಕವಾದ ಬೆಳೆ ಸಮೀಕ್ಷೆಗಾರರು ಯಾರು ಎಂದು ತಿಳಿಯಬೇಕೆ ಇಲ್ಲಿದೆ ಮಾಹಿತಿ.

Deprt amount-ಯಾವೆಲ್ಲ ಯೋಜನೆ ಮತ್ತು ಇಲಾಖೆಗಳಿಂದ ಹಣ ಬರುತ್ತಿದೆ ನಿಮಗೆ ಗೊತ್ತೆ?

ಕೃಷಿ ಇಲಾಖೆ ಯೋಜನೆ ಮತ್ತು ಹಣ

ಕೃಷಿ ಇಲಾಖೆಗೆ ಕೇಂದ್ರ ಸರಕಾರದಿಂದ ರೈತರ ಅಭಿವೃದ್ಧಿ ಮಾಡಲು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ರೈತರಿಗೆ ವರ್ಷಕ್ಕೆ ರೂ.6000/- ಹಣ ನೇರ ನಗದು ಮೂಲಕ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

ಕಂದಾಯ ಇಲಾಖೆಯ ಯೋಜನೆಗಳು ಮತ್ತು ಹಣ

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ. ಈ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 800 ರಿಂದ 1200 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.

2)ಸಂಧ್ಯಾ ಸುರಕ್ಷಾ ಯೋಜನೆ. ಈ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 1000 ರಿಂದ 1200 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.

3)ವಿಧವಾ ಪಿಂಚಣಿ ಯೋಜನೆ. ಈ ಯೋಜನೆಯಡಿ ವಿಧವೆ ಮಹಿಳೆಗೆ ಪ್ರತಿ ತಿಂಗಳು 800 ರೂಪಾಯಿ ಪಿಂಚಣಿ ಬರುತ್ತದೆ.

4)ಅಂಗವಿಕಲರ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಿಂಚಣಿ ಯೋಜನೆ.ಈ ಯೋಜನೆಯಡಿ ಶೇ.75 ಕ್ಕಿಂತ ಜಾಸ್ತಿ ಅಂಗವಿಕಲತೆಯವರಿಗೆ ಪ್ರತಿ ತಿಂಗಳು 1400 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.

6)ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ. ಸಾಲ ಬಾಧೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಪತ್ನಿಗೆ ತಿಂಗಳಿಗೆ 800 ರೂಪಾಯಿ ಪಿಂಚಣಿ ಬರುತ್ತದೆ.

7)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ. ಈ ಯೋಜನೆಯಡಿ ದಾಳಿಗೆ ಒಳಗಾದ ಮಹಿಳೆಗೆ ತಿಂಗಳಿಗೆ 10000 ರೂಪಾಯಿಗಳವರೆಗೆ ಪಿಂಚಣಿ ಬರುತ್ತದೆ.

8)ಎಂಡೋಸಲ್ಪಾನ್‌ ಸಂತ್ರಸ್ತರಿಗೆ ಮಾಸಿಕ ಪಿಂಚಣಿ ಯೋಜನೆ. ಎಂಡೋಸಲ್ಪಾನ್‌ ಗೆ ಒಳಗಾಗಿರುವ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತಿಂಗಳಿಗೆ 2000 ರಿಂದ 4000 ರೂಪಾಯಿಗಳ ವರೆಗೆ ಪಿಂಚಣಿ ಬರುತ್ತದೆ.

ಇದನ್ನೂ ಓದಿ:ಕೃಷಿ ಇಲಾಖೆಯಿಂದ ಪ್ರಕಟಣೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರುವವರು ಈ ಕೆಲಸ ಮಾಡುವುದು ಕಡ್ಡಾಯ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆ ಮತ್ತು ಹಣ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರಾಜ್ಯ ಸರಕಾರದ ಗೃಹ ಲಕ್ಷ್ಮಿ ಯೋಜನೆ. ಈ ಯೋಜನೆಯಡಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ಸಾವಿರ ಹಣ ಹಾಕಲಾಗುತ್ತದೆ.

ಸೂಚನೆ: ಈ ಯೋಜನೆಗಳ ಹೆಚ್ಚಿನ ಮಾಹಿತಿಗೆ ಸಂಬಂಧ ಪಟ್ಟ ಇಲಾಖೆಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು.

ಇತ್ತೀಚಿನ ಸುದ್ದಿಗಳು

Related Articles